ಒಂದು ಲೀಟರ್ ಹಾವಿನ ವಿಷದ ಬೆಲೆ 27 ಲಕ್ಷ, ಅದೇ ಚೇಳಿನ ವಿಷವಾದರೆ 130 ರಷ್ಟು ಜಾಸ್ತಿ 26 ಕೋಟಿ ಬೆಲೆ ಇದೆಯಂತೆ. ನಂಬಿಕೆ ಬರುತ್ತಿಲ್ವ,ಯಾಕೆ ಅಂತ ಹೇಳ್ತಿವಿ ಕೇಳಿ…

ವಿಚಿತ್ರ ಅನ್ನಿಸಿದರೂ ಇದು ನಿಜ.ಪ್ರಪಂಚದ ಅತ್ಯಂತ ಬೆಲೆಬಾಳುವ ದ್ರವ ಪದಾರ್ಥ ಚೇಳಿನ ವಿಷ ಎಂದು ನಂಬಲಾಗಿದೆ.ಸಾಧಾರಣವಾಗಿ ಚೇಳು ತನ್ನ ಆಹಾರಕ್ಕಾಗಿ ಇತರೆ ಕೀಟಗಳನ್ನು ಕೊಲ್ಲಲು,ತನ್ನನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ತನ್ನ ಕೊಂಡಿಯಲ್ಲಿನ ವಿಷವನ್ನು ಬಳಸುತ್ತದೆ.

ಆದರೆ ಅದೇ ವಿಷವನ್ನು ಎಷ್ಟೋ ರೋಗಗಳು,ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.ಇದರಲ್ಲಿ ಪ್ರಮುಖವೆಂದರೆ ಚೇಳಿನ ನಂಜು ಪ್ರೊಟೀನ್ ಇದನ್ನು ಔಷಧಿಯ ತಯಾರಿಕೆಯಲ್ಲೂ ಬಳಸುತ್ತಾರೆ.ಸಣ್ಣ ಸರಣಿಯ ಈ ಜೀವಾಣು ವಿಷದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಟ್ಯಾಸಿಯಮ್ ವಾಹಿನಿಗಳ ಕಾರ್ಯ ಅಡತಡೆ ಮಾಡುವುದಲ್ಲದೇ ಜೀವಿ ರಸಾಯನಿಕಗಳ ತಡೆಗೆ ಬಳಸಬಹುದು,

ಅಷ್ಟೇ ಅಲ್ಲದೇ ಮಹತ್ವದ ಭೌತಶಾಸ್ತ್ರೀಯವಾಗಿ KCNA3 ವಾಹಿನಿಯಾಗುತ್ತದೆ, ಇದನ್ನು KV1.3,ಎಂದೂ ಕರೆಯಲಾಗುತ್ತದೆ.ದೊಡ್ಡಪ್ರಮಾಣದ ಅಯಾನುಗಳ ಸಾಗಣೆಗೂ Ca2+ ಇದನ್ನು ಬಳಸಲಾಗುತ್ತದೆ.

ಇದು ದೈಹಿಕ T ದುಗ್ದಕೋಶ (T ಕೋಶ) ನಿಯಂತ್ರಣ ಹಾಗು ರಸವಿಸರ್ಜನೆಗೆ ಮಹತ್ವ ನೀಡುತ್ತದೆ. ಹೀಗೆ KV1.3 ಅಡೆತಡೆಗಳು ರೋಗನಿರೋಧಕ ಗಳ ನೆರವಿಗೆ ಸಹಾಯಕವಾಗಿವೆ. ರೋಗ ನಿರೋಧಕ ಶಕ್ತಿಹೀನತೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.(ಉದಾಹರಣೆಗೆ ಸಂಧಿವಾತ,ಹೊಟ್ಟೆಉರಿಯೂತ,ಕಣ್ಣಿನ ವಿವಿಧ ಬಿಳಿಪೊರೆಗಳ ನಿವಾರಣೆಗೆ ಇದರ ಬಳಕೆಯಾಗುತ್ತದೆ,).ಚೇಳು ಜಾತಿಯ ಕ್ರಿಮಿಯ ವಿಷವು ವೈದ್ಯಕೀಯವಾಗಿ ಚರ್ಮರೋಗವಿಜ್ಞಾನದಲ್ಲಿ ಮಹತ್ವದ್ದಾಗಿದೆ.

LEAVE A REPLY

Please enter your comment!
Please enter your name here