ನಾವು ಮಾಡೋ ಯಾವುದೇ ಸಾಧನೆಗೆ ವಯಸ್ಸು ಭಾಷೆ ಯಾವುದು ಬೇಕಾಗಿಲ್ಲ.ಸಾಧನೆ ಮಾಡುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಶ್ರೇಷ್ಠ ಉದಾಹರಣೆ.ಈ ಹಿನ್ನಿನ ಸಾಧನೆ ಏನು ಗೊತ್ತೇ ಮುಂದೆ ಓದಿರಿ.

ಮೂಲತಃ ಹಾಸನದವರಾದ ಶಿಲ್ಪಾ ಅವರು 2005ರಲ್ಲಿ ಮದುವೆಯಾಗಿ ಮಂಗಳೂರಿಗೆ ಬಂದರು.

ಆದರೆ ಅವರ ಯಜಮಾನರು ಕೆಲಸ ಅರಸಿ ಬೆಂಗಳೂರಿಗೆ ಹೋದವರು ತಿರುಗಿ ಬರಲಿಲ್ಲ.ಪಿಯುಸಿ ಓದಿರುವ ಶಿಲ್ಪಾ 3 ವರ್ಷದ ಮಗುವಿನೊಂದಿಗೆ ಇದ್ದ ಶಿಲ್ಪಾ ಅವರಿಗೆ ಜೀವನ ಕಷ್ಟವಾಯಿತು.ಜೀವನಕ್ಕೆ ಆದಾಯವಿಲ್ಲದೆ ಕೊರಗುತ್ತಿದ್ದರು.

ಆಗ ಅವರಿಗೆ ಹೊಳೆದಿದ್ದೇ ಕ್ಯಾಂಟೀನ್ ಮಾಡುವ ಐಡಿಯಾ.ಕಷ್ಟಪಟ್ಟು ಸಾಲ ಸೋಲ ಮಾಡಿ ಕೊನೆಗೆ ನೋಡನೋಡುತ್ತಿದ್ದಂತೆಯೇ ಕ್ಯಾಂಟೀನ್ ಮಾಡಿಯೇಬಿಟ್ಟರು.ಕಡಲ ತೀರದ ಮಂಗಳೂರಿನ ಜನರಿಗೆ ರೊಟ್ಟಿಯ ರುಚಿಯನ್ನು ತೋರಿಸಿ ಪ್ರಸಿದ್ಧಿಯಾದರು.ಅವರ ಕ್ಯಾಂಟೀನ್ ನ ಮೆನು ಏನು ಗೊತ್ತಾ,ಶಿಲ್ಪಾ ಅವರಿಗೆ ಕೈ ಹಿಡಿದ ರಾಗಿ,ಜೋಳ,ಅಕ್ಕಿ ರೊಟ್ಟಿಯೊಂದಿಗೆ ಬಿಸಿಬೇಳೆಬಾತ್,ಟೊಮೊಟೋ ರೈಸ್,ಮೆಂತಿ ರೈಸ್,ತಟ್ಟೆಇಡ್ಲಿ ಜತೆಗೆ ವಾರಕ್ಕೊಮ್ಮೆ ರಾಗಿಮುದ್ದೆ ಇದು ಶಿಲ್ಪಾ ಅವರ ಮೊಬೈಲ್ ಕ್ಯಾಂಟೀನ್ ನಲ್ಲಿ ಸಿಗುವ ಮೆನು.

ಇವರ ಈ ಸಾಧನೆಯನ್ನು ಗುರುತಿಸಿದ್ದು ಯಾರು ಗೊತ್ತೇ? ಓದಿ ಮುಂದೆ…

ಮಹೀಂದ್ರಾ ಕಂಪೆನಿಯ ಮಾಲೀಕರಾದ ಆನಂದ ಮಹಿಂದ್ರಾ ಅವರು ಶಿಲ್ಪಾರ ಯಶಸ್ವಿ ಸಾಧನೆಯನ್ನು ಅಂತರ್ಜಾಲದಲ್ಲಿ ಗಮನಿಸಿದ್ದು,ಶಿಲ್ಪಾ ಅವರು ಇನ್ನೊಂದು ಮೊಬೈಲ್ ಕ್ಯಾಂಟೀನ್ ತೆರೆಯುವ ಇಚ್ಛೆ ಇದ್ದರೆ ಅವರಿಗೆ ಬೊಲೆರೋ ವಾಹನ ಕೊಡುವ ಮೂಲಕ ನಾನೂ ಅವರ ಉದ್ದಿಮೆಯಲ್ಲಿ ಹೂಡಿಕೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಬೃಹತ್‌ ಉದ್ಯಮಿಯೊಬ್ಬರು ಸಾಮಾನ್ಯರ ಬಗ್ಗೆ ಟ್ವೀಟ್‌ ಮಾಡಿರುವುದು ಶಿಲ್ಪಾ ಅವರು ಮತ್ತೆ ಜನಪ್ರಿಯತೆ ಪಡೆಯುವಂತೆ ಮಾಡಿದೆ.

ಕೆಲವೇ ದಿನಗಳಲ್ಲಿ ಅವರಿಗೆ ಬೊಲೆರೋ ಜೀಪನ್ನು ಕೂಡ ನೀಡಿದ್ದಾರೆ.ಅವರ ಸಾಧನೆಗೆ ನಮ್ಮ ಕಡೆ ಇಂದ ಹ್ಯಾಟ್ಸ್ ಅಫ್.

LEAVE A REPLY

Please enter your comment!
Please enter your name here