ರಾಕಿಂಗ್ ಸ್ಟಾರ್ ಅಭಿನಯಿಸಿದ್ದ ಕೆಜಿಎಫ್ ಸಿನಿಮಾ ಈಗ ಭಾರತದ ಅತೀ ದೊಡ್ಡ ಸಿನಿಮಾಗಳ ಪಟ್ಟಿಯಲ್ಲಿ ಇದು ಒಂದಾಗಿದೆ.ಇದು ಐದು ಭಾಷೆಗಳಲ್ಲಿ ಡಿಸೆಂಬರ್ 21ರಂದು ಬಿಡುಗಡೆ ಆಗಿತ್ತು.ಭಾರತದಲ್ಲೆಲ್ಲಾ ಸುದ್ದಿಯಾಗಿದ್ದ ಕನ್ನಡದ ಸಿನಿಮಾ.ಕೆಜಿಎಫ್ ಸಿನಿಮಾ ಟ್ರೈಲರ್ ಕನ್ನಡ ಚಿತ್ರರಂಗದಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಮುರಿದು ತನ್ನದೇ ಆದ ದಾಖಲೆಯನ್ನು ಸೃಷ್ಟಿಸಿತ್ತು.

ಭಾರತದ ಜನತೆ ಮತ್ತು ಪರ ಭಾಷೆಯ ಸಿನೆಮಾ ಲೋಕ ಕನ್ನಡದ ಚಿತ್ರ ಕಡೆ ನೋಡುವಂತೆ ಮಾಡಿತ್ತು.ಕೆಜಿಎಫ್ ಸಿನಿಮಾದ ಟ್ರೈಲರ್ ಒಂದೇ ದಿನ ಕನ್ನಡ,ತೆಲುಗು,ತಮಿಳ್,ಮಲಯಾಳಂ,ಹಿಂದಿ   ಐದೂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.ಕನ್ನಡದಲ್ಲಿ ತೊಂಬತ್ತು ಲಕ್ಷ ,ಹಿಂದಿಯಲ್ಲಿ ಒಂದು ಕೋಟಿ ಮೂವತ್ತು ಲಕ್ಷ,ತೆಲುಗುನಲ್ಲಿ ಐವತ್ನಾಲ್ಕು ಲಕ್ಷ,ಮಲಯಾಳಂ ಅಲ್ಲಿ ಎಂಟು ಲಕ್ಷ,ತಮಿಳಿನಲ್ಲಿ ಇಪ್ಪತ್ತು ಲಕ್ಷ ಜನ ವೀಕ್ಷಿಸಿದ್ದರು.

 ಮೂಲಕ ಕೆಜಿಎಫ್ ಸಿನಿಮಾ ಪರಭಾಷೆಗಳಲ್ಲಿ ದಾಖಲೆಗಳನ್ನು ಸೃಷ್ಟಿಸಿತ್ತು. ಬಹುನಿರೀಕ್ಷಿತ ಕನ್ನಡ ಸಿನಿಮಾ ಹಿಂದಿಯಲ್ಲಿ ಬಂದಿದ್ದ ದೊಡ್ಡ ಬಜೆಟ್  ಸಿನಿಮಾ ಶಹರುಖ್ ಖಾನ್ ಅವರ ‘ಜೀರೋ‘ ಸಿನೆಮಾಗೂ ಸೆಡ್ಡು ಹೊಡೆದಿತ್ತು ಎನ್ನುವುದೇ ಕನ್ನಡಿಗರ ಹೆಮ್ಮೆ.

ಆದರೆ ಈಗ ಕೆಜಿಎಫ್ ತಂಡದಿಂದ ಒಳ್ಳೆ ಸುದ್ದಿಯೊಂದು ಬಂದಿದೆ ಏನದು ಸುದ್ದಿ ಅಂತೀರಾ? ಮುಂದೆ ಓದಿರಿ..

ಮೊನ್ನೆ ಮೊನ್ನೆ ಬೆಳಿಗ್ಗೆ ವಿಜಯನಗರದ ಕೋದಂಡರಾಮ ದೇವಾಲಯದಲ್ಲಿ ಕೆಜಿಎಫ್ ಚಾಪ್ಟರ್ 2 ಗೆ ಮುಹೂರ್ತ ನಡೆಸಿ ಚಾಲನೆ ನೀಡಲಾಗಿದೆ.ಈ ಕಾರ್ಯವನ್ನು ಕೆಜಿಎಫ್ ನ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಅವರು ನೆರವೇರಿಸಿದರು.

ಕೆಜಿಎಫ್ ಭಾಗ ಎರಡರಲ್ಲಿ ವಿಶೇಷ ಪಾತ್ರದಲ್ಲಿ ಸಂಜಯ್ ದತ್ತ್ ರವೀನಾ ಟಂಡನ್ ಇರಲಿದ್ದಾರೆ ಎಂಬುದೇ ವಿಶೇಷ.

 

LEAVE A REPLY

Please enter your comment!
Please enter your name here