ಬೇಸಿಗೆ ಶುರುವಾಯಿತು ಎಂದರೆ ಎಲ್ಲರೂ ಜ್ಯೂಸ್ ಎಳೆನೀರು ಮೊರೆ ಹೋಗುವುದು ಸಹಜ. ಆದರೆ ಯಾವುದೂ ಸಹ ಅತಿಯಾಗಬಾರದು ಎಳನೀರು ರೋಗಿಗಳಿಗೂ ಕೊಡುವಂತಹ ನೀರಾಗಿದೆ ಇದನ್ನು ಯಾರು ಬೇಕಾದರೂ ಕುಡಿಯಬಹುದು ಹಾಗಾದ್ರೆ ಎಳನೀರಿಗೆ ಎಕ್ಸ್ಪಿರಿ ದಿನಾಂಕ ಇದೆ ಅಂದ್ರೆ ನೀವು ನಂಬಲೇಬೇಕು ಅದೇನು ಅಂತೀರಾ ಇಲ್ಲಿ ಓದಿ…

ಎಳನೀರನ್ನು ಸಾಮಾನ್ಯವಾಗಿ ಬೆಳಗ್ಗೆ ಕುಡಿಯುವುದು ಉತ್ತಮ, ಹಾಗೆ ಬೆಳಗ್ಗೆ ಎಳನೀರು  ಕುಡಿಯುವಾಗ ಅದರಲ್ಲಿ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಬೆರೆಸಿಕೊಂಡು ಕುಡಿದರೆ ದೇಹದಲ್ಲಿನ ಪಿತ್ತ, ಉಷ್ಣ ಕಡಿಮೆಯಾಗುತ್ತದೆ.

ಆದರೆ ಎಳ ನೀರನ್ನು ಕುಡಿಯುವ ಮುನ್ನ ಎಳನೀರು ಮಾರುವ ಮಾಲೀಕನ್ನೊಮ್ಮೆ ಕೇಳಿ  ಇದು ಎಷ್ಟು ದಿನದ  ಎಳನೀರು ಎಂದು  ಕೇಳಿ ಕುಡಿಯುವುದು ಉತ್ತಮ ಏಕೆಂದರೆ ಮರದಿಂದ ಎಳನೀರನ್ನು ಕಿತ್ತಿದ 15 ದಿನಗಳ ಒಳಗೆ ಮಾತ್ರ ಎಳನೀರು ಫ್ರೆಶ್ ಆಗಿರುತ್ತದೆ ಎಂಬುದು ಆಹಾರ ತಜ್ಞರ ಅಭಿಪ್ರಾಯ ಹಾಗಾಗಿ ಎಳನೀರು ಕುಡಿಯುವ ಮುನ್ನ ಒಮ್ಮೆ ವಿಚಾರಿಸಿ ಕುಡಿಯುವುದು ಒಳ್ಳೆಯದು.

ಚಳಿಗಾಲಗಳಲ್ಲಿ ಎಳನೀರನ್ನು ಯಾರು ಸಹ ಅಷ್ಟೊಂದು ಕುಡಿಯುವುದಿಲ್ಲ ಹಾಗಾಗಿ ದಲ್ಲಾಳಿಗಳು ಅವುಗಳನ್ನು ಒಂದು ಕಡೆ ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರುಕಟ್ಟೆಗೆ ತರುತ್ತಾರೆ ಹೀಗೆ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವುದು ಖಂಡಿತ ಹಾಗಾಗಿ ಒಂದು ಬಾರಿ ವಿಚಾರಿಸಿ ಕುಡಿಯಿರಿ.

LEAVE A REPLY

Please enter your comment!
Please enter your name here