ಬಾಯಲ್ಲಿ ನೀರೂರಿಸುವ ಅಪ್ಪೆ ಹುಳಿ ಸಾಂಬಾರ್ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದನ್ನು ಹಾಗೆ ಕುಡಿದರು ನಡೆಯುತ್ತದೆ ಅಥವಾ ಊಟದ ಜೊತೆ ಕುಡಿದರು  ನಡೆಯುತ್ತದೆ ಒಟ್ಟಿನಲ್ಲಿ ಅಪ್ಪಿ ಹುಳಿ ಸಾಂಬಾರ್ ಬಾಯಲ್ಲಿ ನೀರೂರಿಸುವುದಂತೂ ಖಂಡಿತ ಹಾಗಾದರೆ ಅದನ್ನು ಹೇಗೆ ಮಾಡಬೇಕು ಅಂತ ಇಲ್ಲಿ ತಿಳಕೋಳಿ.

ಬೇಕಾಗುವ ಸಾಮಗ್ರಿಗಳು :

ಒಂದು ಹುಳಿ ಮಾವಿನಕಾಯಿ

ಹಸಿಮೆಣಸಿನಕಾಯಿ

ಇಂಗು

ಎಣ್ಣೆ

ಉಪ್ಪು

ಮೊದಲು ಸ್ವಲ್ಪ ಹುಳಿಯಾಗಿರುವ ಮಾವಿನ ಕಾಯಿಯನ್ನು  ತೆಗೆದುಕೊಂಡು ಹೋಳುಗಳನ್ನು ಕತ್ತರಿಸಿಕೊಳ್ಳಬೇಕು ನಂತರ ಗ್ಯಾಸ್ ಮೇಲೆ ನೀರು ಕುದಿಯಲು ಇಡಬೇಕು ಅದರಲ್ಲಿ ಹೆಚ್ಚಿ ಕೊಂಡಿರುವ ಮಾವಿನ ಹೋಳುಗಳು ಮತ್ತು ಹಸಿ ಮೆಣಸಿನಕಾಯಿಯನ್ನು ಮೆತ್ತಗಾಗುವ ವರೆಗೂ ಕುದಿಸಿ ಕೊಳ್ಳಬೇಕು

ಮಾವಿನ ಹೋಳುಗಳು ಮತ್ತು ಮೆಣಸಿನಕಾಯಿ ಮೆತ್ತಗಾದ ಮೇಲೆ ಅವುಗಳನ್ನು ಚೆನ್ನಾಗಿ ಸ್ಮಾಶ್ ಮಾಡಿ ಕೊಳ್ಳ ಬೇಕು ನಂತರ ಇನ್ನೊಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಗೂ ಇಂಗನ್ನು ಹಾಕಿ ನಂತರ ಅದಕ್ಕೆ ಸ್ಮಾಷ್  ಮಾಡಿಕೊಂಡ ಮಾವಿನ ಹೋಳುಗಳು ಮತ್ತು ಮೆಣಸಿನಕಾಯಿಯನ್ನು ಹಾಕಿ ಕೈಯಾಡಿಸಬೇಕು ನಂತರ ನಿಮಗೆ ಎಷ್ಟು ನೀರು ಬೇಕೋ ಅಷ್ಟು ಗ್ಲಾಸ್ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿದರೆ ಅಪ್ಪೆಹುಳಿ ರೆಡಿಯಾಗುತ್ತದೆ ಇದನ್ನು ನೀವು ಟ್ರೈ ಮಾಡಿ…

LEAVE A REPLY

Please enter your comment!
Please enter your name here