ಮನೆ ಎಂದ ಮೇಲೆ  ಕೆಲವು ಸಣ್ಣಪುಟ್ಟ ತೊಂದರೆಗಳು ಇರುವುದು ಸಹಜ. ಅದರಲ್ಲೂ ಅಡುಗೆ ಮನೆಯಲ್ಲಿ ನಾವು ಎಷ್ಟೇ ಸ್ವಚ್ಚವಾಗಿಟ್ಟರು  ಸಣ್ಣ ಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಹಾಗಾದ್ರೆ ಕಿಚನ್ ನಲ್ಲಿ ಇರುವಂತಹ ಸಣ್ಣಪುಟ್ಟ ಸಾಮಾಗ್ರಿಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನ ನಾವು ನಿಮಗೆ ತಿಳಿಸುತ್ತೇವೆ ನಿಮ್ಮ ಸುಂದರ ಕಿಚನ್ ಗಳಿಗಾಗಿ ಈ ಟಿಪ್ಸ್ ಗಳನ್ನು ಫಾಲೋ ಮಾಡಿ…

ಹಾಲು ಎದುರಿಗೆ ಇದ್ದಾಗ ಉಕ್ಕುವುದು ತುಂಬಾ ವಿರಳ ನಾವು ಹೊರಗಡೆ ಹೋದಾಗ ಅಥವಾ ಟಿವಿ ನೋಡುವಾಗ ಹಾಲು ಉಕ್ಕುವುದು ಸಹಜ ಆ ರೀತಿ ಆಗಬಾರದು ಅಂತ ಅಂದ್ರೆ ಗ್ಯಾಸ್ ಮೇಲೆ ಹಾಲು ಕಾಯಲು ಇಟ್ಟಾಗ ಪಾತ್ರೆಯ ಮೇಲೆ ದೋಸೆ ತೆಗೆಯಲು ಬಳಸುವ ಕಟ್ಟಿಗೆಯ ಮುಚ್ಚು ಕಟ್ಟಿಗೆ ಬಳಸಿ

ಇನ್ನು ಸಕ್ಕರೆ ಡಬ್ಬದಲ್ಲಿ ಇರುವೆಗಳು ಆಗುವುದು ಸಾಮಾನ್ಯ ಅಂತಹ ಇರುವೆಗಳನ್ನು ಸಕ್ಕರೆ ಡಬ್ಬದಿಂದ ಓಡಿಸಲು ಸಕ್ಕರೆಯ ಡಬ್ಬದಲ್ಲಿ 3-4 ಲವಂಗ ಗಳನ್ನು ಹಾಕಿ ಇಡೀ ಲವಂಗದ ವಾಸನೆಯಿಂದ ಇರುವೆಗಳು ಬರುವುದಿಲ್ಲ

ಹೊಸ ಪಾತ್ರೆಗಳಿಗೆ ಹಚ್ಚಿರುವ ಸ್ಟಿಕರ್ ಗಳನ್ನು ಕೀಳುವ ಮುನ್ನ ಪಾತ್ರೆಯನ್ನು ಒಂದೆರಡು ಸೆಕೆಂಡ್ ಬಿಸಿ ಮಾಡಿ ಕಿತ್ತಿದರೆ ಸ್ಟಿಕರ್ ಅಂಟಿಕೊಳ್ಳುವುದಿಲ್ಲ ಮತ್ತುಹಾಳಿಯ  ಚೂರು ಅಲ್ಲಿ ಉಳಿಯುವುದಿಲ್ಲ.

ನಿಮ್ಮ ಮಿಕ್ಸಿ ಜಾರ್  ಬ್ಲೇಡ್ ಗಳು ಮೊಂಡಾದಲ್ಲಿ  ಹರಳು ಉಪ್ಪನ್ನು ಅದರಲ್ಲಿ ಅರ್ಧದಷ್ಟು ಹಾಕಿ ಒಂದು ಬಾರಿ ಮಿಕ್ಸಿ ಮಾಡಿ ಬ್ಲೇಡ್ ಗಳು ಶಾರ್ಪ್  ಆಗುತ್ತವೆ

ಮನಿಗೆ ಹೆಚ್ಚು ತೊಗರಿ ಬೇಳೆ ಅಕ್ಕಿ ತಂದಾಗ ಹುಳ ಆಗದಂತೆ ತಡೆಯಲು ಹರಸಾಹಸ ಪಡುವ ಬದಲು ತೊಗರಿ ಬೇಳೆ ಮತ್ತು ಅಕ್ಕಿ ಡಬ್ಬದಲ್ಲಿ 2-2 ಬೇವಿನ ಎಲೆಗಳನ್ನು ಹಾಕಿ ಇಡುವುದರಿಂದ ಬೇಗನೆ ಹುಳ ಆಗುವುದಿಲ್ಲ

ನಿಂಬೆ ಹಣ್ಣನ್ನು ತುಂಬಾ ದಿನಗಳವರೆಗೂ ಫ್ರೆಶ್ ಆಗಿಡಲು ನಿಂಬೆ ಹಣ್ಣನ್ನು ನ್ಯೂಸ್ ಪೇಪರ್ ನಲ್ಲಿ ಒಂದೊಂದೇ ಸುತ್ತಿ ಒಂದು ಕವರನ  ಒಳಗೆ ಗಾಳಿಯನ್ನು ತೆಗೆದು ಇಟ್ಟರೆ ತುಂಬಾ ದಿನಗಳವರೆಗೆ ನಿಂಬೆ ಹಣ್ಣುಗಳನ್ನು ಬಳಸಬಹುದು

ಹೆಚ್ಚಿಗೆ ಹೂಗಳನ್ನು ತಂದಾಗ 1 ಹಳೆಯ ನ್ಯೂಸ್ ಪೇಪರ್ ನಲ್ಲಿ ಹೂಗಳನ್ನು ಸುತ್ತಿ ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟರೆ ತುಂಬಾ ದಿನಗಳವರೆಗೆ ಹೂವುಗಳು ಫ್ರೆಶ್ ಆಗಿರುತ್ತದೆ

LEAVE A REPLY

Please enter your comment!
Please enter your name here