ಈಗ ಸಹಜವಾಗಿ ಹಣ್ಣು ಆಗುವುದು ತುಂಬಾ ವಿರಳವಾಗಿ ಬಿಟ್ಟಿದೆ ಹಣದ ಆಸೆಗೆ ಗಿಡಗಳಿಂದ ಕಾಯಿಗಳನ್ನು ಕಿತ್ತು ಅದಕ್ಕೆ ಹಣ್ಣು ಆಗುವಂತೆ ಔಷಧಿಗಳನ್ನು ಇಂಜೆಕ್ಷನ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ನಾವು ಹಣ್ಣು ತಿನ್ನುವಾಗ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬಿಳುವುದಂತೂ ನಿಜ ಹಾಗಾದ್ರೆ ಹಣ್ಣು ತಾನಾಗಿಯೇ ಆಗಿದೆಯಾ ಅಥವಾ ಕೃತಕವಾಗಿ ಹಣ್ಣು ಮಾಡಿದ್ದಾರ ಎಂಬುದನ್ನು ಈ ಮೂಲಕ ತಿಳಿಯಿರಿ.

ನೀವು ಯಾವುದೇ ಹಣ್ಣುಗಳನ್ನು ಕೊಂಡುಕೊಳ್ಳುವಾಗ ಮೊದಲು ಹಣ್ಣುಗಳ ಬಣ್ಣವನ್ನು ಗಮನಿಸಿ ಒಂದು ವೇಳೆ ಹಣ್ಣುಗಳು ಒಂದೇ ತರನಾಗಿದ್ದರೆ ಅವುಗಳಿಗೆ ರಾಸಾಯನಿಕ ಔಷಧಿ ಹಾಕಿದರೆ ಎಂದು ತಿಳಿಯ ಬೇಕು ಸಹಜವಾಗಿ ಹಣ್ಣಾಗಿದ್ದರೆ ಎಲ್ಲವೂ ಒಂದೇ ತರ ಇರುವುದಿಲ್ಲ ಹಳದಿ ಹಸಿರು ಮಿಕ್ಸ್ ಇರುತ್ತದೆ.

ಕೃತಕ ಹಣ್ಣುಗಳ ಮೇಲೆ ಬೂದಿ ಇರುತ್ತದೆ. ಬಾಳೆ ಹಣ್ಣು ಒಂದು ವೇಳೆ ಕೃತಕವಾಗಿದೇ ಅನಿಸಿದರೆ ಬಾಳೆ ಹಣ್ಣಿನ ತೊಟ್ಟನ್ನು ಗಮನಿಸಿ ಬಾಳೆ ತೊಟ್ಟು ಹಸಿರಾಗಿದ್ದರೆ ಅದು ಕೃತಕವಾಗಿದೆ ಎಂದು ತಿಳಿಯಬಹುದು.

ಹಣ್ಣ ಆಗಲಿ ತರಕಾರಿಗಳಾಗಲಿ ನೋಡಲು ಆಕರ್ಷಕವಾಗಿರುವುದಿಲ್ಲ. ಹಾಗೇನಾದರೂ ಹಣ್ಣು ತರಕಾರಿಗಳು ತುಂಬಾ ಫ್ರೆಶ್ ಆಗಿ ಕಂಡರೆ ನೋಡಿ ಮೋಸ ಹೋಗಬೇಡಿ ಅವುಗಳು ಮಾನವ ಬಲವಂತವಾಗಿ ಹಣ್ಣು ಮಾಡಿರುತ್ತಾನೆ. ಈ ರೀತಿ ಇರುವ ತರಕಾರಿ ಹಣ್ಣು ತಿನ್ನುವುದರಿಂದ ಮನುಷ್ಯ ಸಾಕಷ್ಟು ಕಾಯಿಲೆಗಳಿಗೆ ಬೀಳುತ್ತಾನೆ.

ಆದಷ್ಟು ಗಮನಿಸಿ ಹಣ್ಣು ತರಕಾರಿ ಖರೀದಿಸಿ ನಿಮ್ಮ ಆರೋಗ್ಯ ಸಾಧ್ಯವಾದಷ್ಟು ಕಾಯ್ದುಕೊಳ್ಳಿ.

LEAVE A REPLY

Please enter your comment!
Please enter your name here