ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರೊಡ್ಯೂಕ್ಟ್ಸ್ ಗಳಿಂದ ಹೆಸರು ಮಾಡಿರುವ ಯೋಗ ಗುರು ಬಾಬಾ ರಾಮದೇವ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಸಿಮ್ ಅನ್ನು ಮಾರುಕಟ್ಟೆಗೆ ತರುವ ಮೂಲಕ ಟೆಲಿಕಾಂ ಲೋಕದಲ್ಲಿ ಹೆಸರು ಮಾಡಲಿದ್ದಾರೆ ಇದಕ್ಕೆ ಬಿಎಸ್ಎನ್ಎಲ್ ಕಂಪನಿ ಕೂಡ ಈ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎರಡು ಕಂಪನಿಗಳು ದೇಶದ ಕಲ್ಯಾಣಕ್ಕಾಗಿ ಮಾಡುತ್ತಿವೆ ಎಂಬುದು ಹೆಮ್ಮೆಯ ವಿಚಾರ ..

ಈ ದೇಶದ ಕಲ್ಯಾಣಕ್ಕಾಗಿ ಸ್ವದೇಶಿ ಸಿಮ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಬಾಬಾ ರಾಮದೇವ್ ಹೇಳಿದರು.

ಇನ್ನೊಂದು ವಿಶೇಷ ಎಂದರೆ ಈ ಸಿಮ್ ಜೊತೆ ಗ್ರಾಹಕರಿಗೆ 2.5 ಲಕ್ಷ ಮತ್ತು 5 ಲಕ್ಷ ರೂಪಾಯಿ ವರೆಗೂ ವೈದ್ಯಕೀಯ ಮತ್ತು ಜೀವ ವಿಮೆ ಹೊಂದಿದೆ ಅಂತೆ ಇದು ತುಂಬಾ ವಿಶೇಷವಾದ ಆಫರ್ ಆಗಿದೆ

ಬಾಬಾ ರಾಮದೇವ್ ಅವರು ಬಿ ಎಸ್ ಎನ್ ಎಲ್ ಸ್ವದೇಶಿ ಟೆಲಿಕಾಂ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸ್ವದೇಶಿ ಸಿಮ್ ಮತ್ತು ಬಿ ಎಸ್ ಎನ್ ಎಲ್ ಎರಡು ಸಹ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತವೆ ಎಂದು ಬಾಬಾ ರಾಮದೇವ ಹೇಳಿದ್ದಾರೆ.

ಕೇವಲ 144ರೂ ರೀಚಾರ್ಜ್ ಮಾಡಸಿದ್ರೆ ದೇಶದಾದ್ಯಂತ ಅನ್ಲಿಮಿಟೆಡ್ ಆಗಿ ಉಚಿತ ಕರೆಗಳನ್ನು ಮಾಡಬಹುದು ಮತ್ತು 100 ಎಸ್ ಎಮ್ ಎಸ್, 2ಜಿಬಿ ಡೇಟಾ ಪಡೆಯಬಹುದು.

‘ಸ್ವದೇಶಿ ಸಮೃದ್ಧಿ’ ಸಿಮ್ ಸದ್ಯ ನೌಕರರಿಗೆ ಮತ್ತು ಕಚೇರಿ ಪದಾಧಿಕಾರಿಗಳಿಗೆ ಮಾತ್ರ ಸಿಗುತ್ತವೆ. ಬಿ ಎಸ್ ಎನ್ ಎಲ್ ನ ಐದು ಲಕ್ಷ ಕೌಂಟರ್ ಗಳಲ್ಲಿ ಸ್ವದೇಶಿ ಸಿಮ್ ಅನ್ನು ಜನತೆ ಪಡೆಯಬಹುದು ಎಂದು ಬಿ ಎಸ್ ಎನ್ ಎಲ್ ಸಂಸ್ಥೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here