ಕಳೆದ ಮೂರು ದಿನಗಳ ಹಿಂದೆ ಅಗ್ನಿ ದೇವ ತನ್ನ ಕೆನ್ನಾಲಿಗೆ ಚಾಚಿ ಪ್ರಕೃತಿ ದೇವಿಯ ಮೇಲೆ ಮುನಿಸಿಕೊಂಡು ಧಗ ಧಗ ಉರಿಯುತ್ತಿದ್ದಾನೆ. ಇದಕ್ಕೆ ಸದ್ಯ ಕೇಳಿ ಬರುತ್ತಿರುವ ತಾಜಾ ಸುದ್ದಿಯಂದರೆ ಇಲ್ಲಿ ಅಕ್ರಮವಾಗಿ ಹೋಂ ಸ್ಟೇ ಗಳನ್ನೂ ನಡೆಸಲಾಗುತ್ತಿದೆ, ಅಷ್ಟೇ ಅಲ್ಲದೆ ರೆಸಾರ್ಟ್ ಗಳು ತಲೆ ಎತ್ತಿದ್ದವು ಇದರಿಂದ ಅವರವರ ಮಧ್ಯೆ ಗುದ್ದಾಟವಿತ್ತು ಆದ್ದರಿಂದ ಈ ಕಿಡಿಗೇಡಿ ತನಕ್ಕೆ ಕೈ ಹಾಕಿದ್ದಾರೆ ಎಂಬ ಸ್ಪೋಟಕ ಸುದ್ದಿ ಕೇಳಿ ಬರುತ್ತಿದೆ.

ಆದರೆ ಕೇಂದ್ರ ಸರಕಾರದಿಂದ 123 ಹಳ್ಳಿಗಳನ್ನು ಸೂಕ್ಶ್ಮ ಪರಿಸರ ವಲಯ ಎಂದು ಘೋಷಿಸಿತ್ತು. ಆದರೂ ಕೂಡ ಬಂಡೀಪುರದಲ್ಲಿ ಅಕ್ರಮವಾಗಿ ದುಡ್ಡಿನ ಆಸೆಗಾಗಿ ಸಾಕಷ್ಟು ರೆಸಾರ್ಟ್ ಗಳು ಮತ್ತು ಹೋಂ ಸ್ಟೇ ಗಳು ಒಳಗ ಒಳಗೆ ನಡೆಸುತ್ತಿವೆ. 2012 ಅಕ್ಟೋಬರ್ ಅಲ್ಲಿಯೇ ಬಂಡೀಪುರ ಸುತ್ತ ಮುತ್ತ ಇರುವ ಕೆಲವು ಪ್ರದೇಶಗಳನ್ನು ಸೂಕ್ಶ್ಮ ಪರಿಸರ ವಲಯ ಎಂದು ಘೋಷಿಸಿದ್ದರು.  ಅಕ್ರಮವಾಗಿ ರೆಸಾರ್ಟ್ ಮತ್ತು ಹೋಂ ಸ್ಟೇ ಗಳು ತಲೆ ಎತ್ತಿದ್ದವು ಇದಕ್ಕೆ ಯಾವುದೇ ಒಬ್ಬ ಅಧಿಕಾರಿಯು ಕೂಡ ಇದರ ವಿರುದ್ಧ ಚಕಾರ ಎತ್ತಿದ್ದಿಲ್ಲ ಇದೊಂದು ಮಾರಕವೇ ಸರಿ ಎಂದು ನವೀನ, ವೈಲ್ಡ್ ಲೈಫ್ ವಾರ್ಡ್ನ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here