ಈ ತಾಯಿ ಭಿಕ್ಷುಕಿಯಾದರೂ ಇವರ ಸಾಧನೆ ನಿಜಕ್ಕೂ ದೊಡ್ಡದು ಇವರನ್ನು ಭಿಕ್ಷಕಿ  ಎನ್ನುವ ಬದಲು ಮುಗ್ಧ ಮನಸ್ಸಿನ ತಾಯಿಯೆನ್ನಬಹುದು. ಈ ತಾಯಿ ಮಾಡಿರುವ ಕೆಲಸ ಎಂಥವರಿಗಾದರೂ ಒಂದು ಕ್ಷಣ ಮನ ಕರಗಲೇಬೇಕು. ಸತ್ತ ಮೇಲು ಸಾರ್ಥಕತೆಯನ್ನು ಸಾರಿದ ಮಹಾತಾಯಿ ಹಾಗಾದರೆ ಆ ತಾಯಿ ಯಾರು? ಏನು ಇವರು ಮಾಡಿರುವ ಕಾರ್ಯ ಅಂತ ಇಲ್ಲಿ ಓದಿ ನೀವು ತಿಳಿದುಕೊಳ್ಳಿ

ಅಜ್ಮೀರ್ ದ ಬಜರಂಗಗಡ ಅಂಬೆ ಮಾತಾ ದೇವಾಲಯದ ಮುಂದೆ ಭಿಕ್ಷೆ ಬೇಡುವುದು ಇವರ ನಿತ್ಯ ಕಾಯಕವಾಗಿತ್ತು. ಈ ತಾಯಿಯ ಹೆಸರು ನಂದಿನಿ ಶರ್ಮ ಇವರು ಭಿಕ್ಷೆಯಿಂದ ಬಂದಿರುವ ಹಣವನ್ನು ನಿತ್ಯ ಬ್ಯಾಂಕಿನಲ್ಲಿ ಠೇವಣಿ ಇಡುತ್ತಿದ್ದರಂತೆ. ಅದಕ್ಕೆ ಹಣದ ಭದ್ರತೆಗಾಗಿ ಇಬ್ಬರು ನಂಬಿಕೆಯುಳ್ಳ ಟ್ರಸ್ಟಿಗಳನ್ನು ನೇಮಿಸಿಕೊಂಡಿದ್ದರಂತೆ.

ಈ ಅಜ್ಜಿಯ ಕೊನೆಯ ಆಸೆ ಏನಂತ ಅಂದ್ರೆ ತಾನು ಕೂಡಿಟ್ಟಿರುವ ಹಣವನ್ನು ದೇಶ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸಲು ಹೇಳಿದ್ದರಂತೆ. ಆದರೆ ವಿಧಿವಶಾತ್ ನಂದಿನಿ ಅಜ್ಜಿ ಆಗಸ್ಟ್ 2018ರಲ್ಲಿ ತೀವ್ರ ಅನಾರೋಗ್ಯದಿಂದ ಸಾವನ್ನಪಿದರಂತೆ.

ಆದರೆ ಇವರು ಕೂಡಿ ಇಟ್ಟಿರುವ ಹಣ ಪೋಲಾಗದಂತೆ ಬ್ಯಾಂಕಿನ ಟ್ರಸ್ಟಿಗಳು ಅದನ್ನು ಅಜ್ಜಿಯ ಆಸೆಯಂತೆ ಮೊನ್ನೆ ನಡೆದ ಪುಲ್ವಾಮ್ ಆತ್ಮಹುತಿ ದಾಳಿಯಲ್ಲಿ ವೀರ ಮರಣ ಹೊಂದಿದ 42 ಕ್ಕೂ ಅಧಿಕ ಯೋಧರ ಕುಟುಂಬಗಳಿಗೆ ಈ ಹಣ ನೀಡಿದರೆ,  ಅಜ್ಜಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಎಂದು ಟ್ರಸ್ಟಿಗಳು ನಿರ್ಧರಿಸಿದ್ದು ಅಜ್ಜಿಯ ಆಸೆಯಂತೆ ಆ ಹಣವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ತಲುಪಿಸಿದ್ದಾರೆ

ಅಜ್ಜಿಯ ಈ ಸಾಧನೆ ನಿಜಕ್ಕೂ ಶ್ಲಾಘನೀಯ ಅವರ ಆತ್ಮಕ್ಕೆ ಶಾಂತಿ ಸಿಗಲಿ

LEAVE A REPLY

Please enter your comment!
Please enter your name here