ನಾವು ಹೇಳೋ ಈ ವಿಷಯ ನಂಬಿದ್ರೆ ನಂಬಿ ಇಲ್ಲ ಬಿಡಿ ಆದ್ರೆ ಈ ಸುದ್ದಿ ಅಂತು ಬಲು ವಿಚಿತ್ರವಾಗಿದೆ ಮತ್ತು ಈ ಊಟ ವಿತರಣೆ ಮಾಡುವ ಅಪ್ಲಿಕೇಶನ್ ಬಗ್ಗೆ ನೀವು ಕೇಳಿದ್ರೆ ಇನ್ನು ಗಾಬರಿ ಆಗತೀರಾ. ಹೌದು ಸದ್ಯ ಎಲ್ಲ ಕಡೆಯಲ್ಲಿಯೂ ಸ್ವೀಗಿ ಬಿಡು ಬಿಟ್ಟಿದೆ ಈ ಅಪ್ಲಿಕೇಶನ್ ಮೂಲಕ ಮನೆಗೆ ಊಟ ತಿಂಡಿ ತಿನಿಸು ತರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಆದ್ರೆ ತಮಿಳನಾಡಿನಲ್ಲಿ ಊಟ ಆರ್ಡರ್ ಮಾಡಿದ್ರೆ ರಾಜಸ್ಥಾನದಿಂದ ಊಟ ತಂದು ಕೊಡುವ ಹುಚ್ಚು ಸಾಹಸ ಸ್ವೀಗಿ ಅವರು ಮಾಡಿದರೆ…

ಹೌದು ಸ್ವೀಗ್ಗಿ ಅವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಹಾರವನ್ನು ಡೆಲಿವರಿ ಮಾಡುಲು ಯತ್ನಿಸಿದ್ದಾರೆ. ಇದು ಟ್ವಿಟ್ಟರ್ ಅಲ್ಲಿ ಸಕತ್ ಆಗಿ ವೈರಲ್ ಆಗಿದೆ ಹಾಗೆ ತಮಷೆಗೂ ಈ ಸ್ವೀಗ್ಗಿ ದಾರಿ ಮಾಡಿಕೊಟ್ಟಿದೆ. ಯಾಕೆ ಅಂದ್ರೆ ಚೆನ್ನೈ ಅಲ್ಲಿ ಊಟ ಆರ್ಡರ್ ಮಾಡಿದ್ರೆ ರಾಜಸ್ಥಾನದಿಂದ ತಂದು ಕೊಡುವ ಸಾಹಸ ಮಾಡಿ ನಗೆಗೀಡಾಗಿದ್ದರೆ.

ಈಗ ಎಲ್ಲ ಅಪ್ಲಿಕೇಶನ್ ಗಳಲ್ಲಿಯೂ ರೂಟ್ ಮ್ಯಾಪ್ ಇದ್ದೆ ಇರುತ್ತದೆ. ಅದರಿಂದ ಈ ಸ್ವೀಗ್ಗಿ ಅವರ ಅವಾಂತರ ಗೊತ್ತಾಗಿದೆ. ಈ ಅವಾಂತರವನ್ನು ಭಾರ್ಗವ್ ರಾಜನ್ ಡೆಲಿವರಿ ಸ್ಟೇಟಸ್ ನ ಸ್ಕ್ರಿನ್ ಶಾಟ್ ಅನ್ನು ತೆಗೆದು ಟ್ವಿಟ್ಟರ್ ಅಲ್ಲಿ ಶೇರ್ ಮಾಡಿದ್ದಾರೆ. ಚೆನ್ನೈ ಹೋಟೆಲ್ ಒಂದರಲ್ಲಿ ಊಟ ಹೇಳಿದ್ದು ಆದರೆ ಸ್ವೀಗ್ಗಿ ಅವರು ರಾಜಸ್ಥಾನದ ರೆಸ್ಟೋರೆಂಟ್ ಎಂದು ಕೊಂಡಿದ್ದಾರೆ.

ಸ್ವೀಗ್ಗಿ ಅವರು ಇದಕ್ಕೆ ಜೋಕ್ ಮಾಡಿ ಇದು ಮಿಸ್ ಚೀಫ್ ಲೋಕಿ ಎಂಬ ದೇವರ ಕೆಲಸವಿರಬಹುದು ಎಂದು ಹೇಳಿದ್ದು, ಇನ್ನೊಮ್ಮೆ ಈ ತರಹದ ತಪ್ಪು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಟ್ವಿಟ್ಟರ್ ಅಲ್ಲಿ ಸಾಕಷ್ಟು ಜನ ತಮಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here