ಇಂದಿನಿಂದ ಏರ್ ಶೋ ಶುರುವಾಗಿದ್ದು, ಸೂರ್ಯಕಿರಣ್ ಯುದ್ಧವಿಮಾನಗಳು ಪರಸ್ಫರ ಡಿಕ್ಕಿ ಹೊಡೆದು ಪತನಗೊಂಡಿವೆ. ಇವೆರಡು ಭಾರತೀಯ ವಾಯು ಸೇನೆಗೆ ಸೇರಿದ ವಿಮಾನಗಳಾಗಿದ್ದು ಏರ್ ಶೋ ಆರಂಭಗೊಳ್ಳುವ ಮುನ್ನ ದಿನವೇ ಪರಸ್ಫರ ಡಿಕ್ಕಿ ಹೊಡೆದು ಕೊಂಡಿವೆ.

ನಗರದ ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಅಲ್ಲಿ ಪ್ರಯೋಗದ ಹಾರಾಟ ನಡೆಸುತ್ತಿದ್ದಾಗ. ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದು ನೆಲಕ್ಕೆ ಎರಡು ವಿಮಾನಗಳು ನೆಲಕ್ಕೆ ಬಿದ್ದಿದ್ದು, ದೇವರ ದಯೆಯಿಂದ ಪೈಲಟ್ ಗಳಿಗೆ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕ್ಕ ಪುಟ್ಟ ಗಾಯಗಳಾಗಿವೆ.

ಒಂದು ವಾರದಿಂದ ಲೋಹದ ಹಕ್ಕಿಗಳು ತಾಲೀಮುಗಳನ್ನು ನಡೆಸುತ್ತಿದ್ದು, ನಾಳೆಯಿಂದ ಏರ್ ಶೋ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

Video: 

ವಿಡಿಯೋ ಕೃಪೆ : ANI

LEAVE A REPLY

Please enter your comment!
Please enter your name here