ಇತ್ತೀಚಿಗೆ ಸಾವಿರಾರು ಆಪ್ಗಳು ಬರುತ್ತಲೇ ಇರುತ್ತವೆ. ಅದರಲ್ಲೂ ಬ್ಯಾಂಕ್ ಗಳಿಗೆ ಹೋಗದೆ ಇದ್ದಲಿಯೇ ಹಣ ಪಡೆಯ ಬೇಕು ಎಂಬುವರ ಸಂಖ್ಯೆಯೂ ಹೆಚ್ಚಾಗಿದೆ. ಅದು ಕೂಡ ಸುಲಭವಾಗಿ ಹಣ ಕಳುಹಿಸುವ ಮತ್ತು ಪಡೆಯುವ ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಅನ್ನುವುದಿಲ್ಲ ಹೇಳಿ. ಆದರೆ ಇಂತಹ ಆಪ್ ಬಳಸುವ ಮುನ್ನ ಎಚ್ಚರವಹಿಸಿವುದು ಉತ್ತಮ ಇಲ್ಲದೆ ಹೋದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಇವು ನುಂಗಿಬಿಡುತ್ತವೆ. ಹಾಗಾದ್ರೆ ಆ ಆಪ್ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ.

ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಸಿಗುವ ‘ಏನಿಡೆಸ್ಕ್ ಆಪ್ ‘ ಈ ಆಪ್ ನ ಮೂಲಕ ಹ್ಯಾಕರ್ಗಳು ಹಣ ಹೊಡೆಯುತ್ತಿದ್ದಾರೆ. ಇದನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ ಎಂದು ರಿಸರ್ವ್ ಬ್ಯಾಂಕ್ ಸೂಚನೆ ಹೊರಡಿಸಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಹ್ಯಾಕರ್ ಗಳು ಈ ಆಪ್ ಡೌನ್ಲೋಡ್ ಮಾಡಿಕೊಂಡ ನಂತರ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಬ್ಯಾಂಕ್ ಖಾತೆಯ ಮಾಹಿತಿಗಳಿಗೆ ಕನ್ನ ಹಾಕುತ್ತಾರೆ.

ಈ ಆಪ್ ಗೆ ಯಾವುದೇ ರೀತಿಯ ವಿವರಗಳನ್ನು ನೀಡದಿರಿ ನಿಮಗೆ ಈ ಆಪ್ ಡೌನ್ಲೋಡ್ ಅದ ಮೇಲೆ ಆಪ್ ನೀಡುವ 9 ಅಂಕಿಗಳ ಸಂಖ್ಯೆಯನ್ನು ಕಳುಹಿಸುವಂತೆ ವಂಚಕನು ಕೇಳುತ್ತಾನೆ. ಒಮ್ಮೆ ನೀವು ನಿಮ್ಮ ವಿವರಗಳನ್ನು ಹಾಕಿದ ಮೇಲೆ ನಿಮ್ಮ ಮೊಬೈಲ್ ನ ಸಂಪೂರ್ಣ ಹಿಡಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.

ನೀವು ಯಾವುದೇ ರೀತಿಯ ಆಪ್ ಬಳಸಿ ಆದರೆ ಒಟಿಪಿ ಮತ್ತು ಕೋಡ್ ಹಾಕುವಾಗ ತುಂಬಾ ಎಚ್ಚರವಹಿಸಿ.

LEAVE A REPLY

Please enter your comment!
Please enter your name here