ಮೊನ್ನೆಯಷ್ಟೇ ಆವಂತೀಪುರದಲ್ಲಿ ನಡೆದಿರುವ ಆತ್ಮಾಹುತಿ ದಾಳಿಯಲ್ಲಿ 40 ಜನ ಸೈನಿಕರು ವೀರಮರಣ ಹೊಂದಿದರು. ಅವರ ಕುಟುಂಬದ ಶಾಪ ಇಷ್ಟು ಬೇಗ ಪಾಪಿಗಳಿಗೆ ತಟ್ಟುತ್ತದೆ ಎಂದು ತಿಳಿದಿರಲಿಲ್ಲಾ, ಹೌದು ಭಾರತೀಯ ಯೋಧರು ಶರ ವೇಗದ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರರನ್ನು ಸದೆ ಬಡೆದಿದ್ದಾರೆ.

ರಕ್ತ ರಕ್ಕಸನಾದ ಅಬ್ದುಲ್ ರಶೀದ್ ಘಾಸಿ ಮತ್ತು ಸಂಘಟನೆಯ ಕಮಾಂಡರ್ ಆದ ಕರಮ್ ನನ್ನು ಸಹ ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ. 9 ಘಂಟೆಗಳ ಕಾಲ ನಡೆದ ಸತತ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರರು ಬಲಿಯಾಗಿದ್ದಾರೆ. ಭಾರತೀಯ ಯೋಧರಿಗೆ ಉಗ್ರರರು ತಲೆ ಮರೆಸಿಕೊಂಡು ಇರುವ ಜಾಗದ ಸುಳಿವು ಸಿಗುತಿದ್ದಂತೆ ಯೋಧರು ಮುತ್ತಿಗೆ ಹಾಕಿ ಮೊದಲು ಶರಣಾಗುವಂತೆ ಹೇಳಿದ್ದಾರೆ ಉಗ್ರರರು ಕೇಳದಿದ್ದಾಗ ಗುಂಡಿನ ಧಾಳಿ ನಡೆಸಿದ್ದಾರೆ. ಈ ಗುಂಡಿನ ಧಾಳಿಯಲ್ಲಿ ಇಬ್ಬರು ಉಗ್ರರರು ಬಲಿಯಾಗಿದ್ದಾರೆ.

ಸತತ 9 ಘಂಟೆ ಕಾಲ ನಡೆದ ಧಾಳಿಯಲ್ಲಿ ಉಗ್ರರರು ಸಹ ಪ್ರತಿ ಧಾಳಿ ಮಾಡಿದ್ದಾರೆ. ಈ ವೇಳೆ ಭಾರತೀಯ ಮೇಜರ್ ಸೇರಿದಂತೆ ನಾಲ್ವರು ಯೋಧರು ಸಹ ಹುತಾತ್ಮರಾಗಿದ್ದಾರೆ. ಸದ್ಯ ಇಬ್ಬರು ಉಗ್ರರರನ್ನು ಹತ್ಯೆ ಮಾಡಿದ್ದಾರೆ ಇನ್ನು ೬ ಜನ ಉಗ್ರರಿಗಾಗಿ ಪಿಂಗ್ಲಾನ್ ಪ್ರತಿ ಮನೆಯಲ್ಲಿಯೂ ಸಹ ಶೋಧ ಕಾರ್ಯಾಚರಣೆ ಮಾಡುತಿದ್ದರೆ.

ಭಾರತೀಯ ಸೇನೆ ಈ ರೀತಿಯಾಗಿ ಪ್ರತಿಕಾರ ತೀರಿಸಿಕೊಂಡಿದ್ದಾರೆ, ಆತ್ಮಾಹುತಿ ದಾಳಿ ನಡೆದ 10ಕಿ. ಮೀ ದೂರದಲ್ಲಿ ಉಗ್ರರರು ತಲೆ ಮರೆಸಿಕೊಂಡಿರುವ ಇರುವ ಜಾಗದ ಮಾಹಿತಿ ಖಚಿತವಾದ ತಕ್ಷಣ 8.30 ರ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವಂದರಲ್ಲಿ ಉಗ್ರರರು ಅಡಗಿ ಕುಳಿತಿರುವ ಮಾಹಿತಿ ಸಿಕ್ಕಿದ ಬಳಿಕ ಮಧ್ಯರಾತ್ರಿ ಹೊತ್ತಿಗೆ ಆ ಕಟ್ಟಡವನ್ನು ಭಾರತೀಯ ಯೋಧರು ಮುತ್ತಿಗೆ ಹಾಕಿದ್ದರು. ೫೫ ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಮತ್ತು ಸಿಆರ್ ಪಿ ಎಫ್ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನು 6 ಜನ ಉಗ್ರರರಿಗೆ ಬಲೆ ಬಿಸಿದ್ದಾರೆ.

LEAVE A REPLY

Please enter your comment!
Please enter your name here