ವೈದ್ಯೋ ನಾರಾಯಣೋ ಹರಿ.. ಅನ್ನೋ ಮಾತನ್ನು ನಾವು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ, ಆದರೆ ಇತ್ತೀಚಿನ ದಿನಗಳಲ್ಲಿ ಇದು ಉಲ್ಟಾ ಆಗಿರೋದು ಸುಳ್ಳಲ್ಲ. ಆದರೆ ನಾವು ನಿಮಗೆ ಪರಿಚಯಿಸಲು ಹೊರಟಿರುವ ಈ ವ್ಯಕ್ತಿ ಇದಕ್ಕೆಲ್ಲ ತದ್ವಿರುದ್ದ ಅವರೇ ಹುಬ್ಬಳ್ಳಿಯ ಡಾಕ್ಟರ್ ಕೃಷ್ಣ ಹೆಗಡೆ.

ಇವರು ಬೇರೆ ಡಾಕ್ಟರ್ ಗಳಿಗಿಂತ ಭಿನ್ನ ಹೇಗೆ ಅಂದರೆ ಇವರು ತಮ್ಮ ರೋಗಿಗಳಿಗೆ ಅತ್ಯುನ್ನತ ವೈದ್ಯಕೀಯ ಸೌಲಭ್ಯ ನ ಕೊಡುತ್ತಾರೆ, ಅದು ಕೇವಲ ಎರಡು ರೂಪಾಯಿಗೆ..! ಇದು ಆಶ್ಚರ್ಯ ಆದ್ರೂ ನಿಜಾನೆ..

ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ದಾನಮ್ಮ ದೇವಿ ಗುಡಿ ರಸ್ತೆಯಲ್ಲಿರುವ ಡಾಕ್ಟರ್ ಕೃಷ್ಣ ಮಹಾಬಲೇಶ್ವರ ಹೆಗಡೆ ಅವರು ಕ್ಲಿನಿಕ್ ಅನ್ನು ತಮ್ಮ ಮನೆಯಲ್ಲಿಯೇ ತೆರೆದು ಸುತ್ತಮುತ್ತಲಿನ ನೂರಾರು ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಕೇವಲ 2 ರೂ ನೀಡುತ್ತಿರುವುದು ಶ್ಲಾಘನೀಯವೇ ಸರಿ.

ಕೃಷ್ಣ ಹೆಗಡೆಯವರು ಸುಮಾರು ನಾಲ್ಕು ದಶಕಗಳಿಂದ ವೈದ್ಯಕೀಯ ಪ್ರಪಂಚದಲ್ಲಿ ಸೇವೆ ಸಲ್ಲಿಸುತ್ತಿದ್ದು ಆರಂಭದ ದಿನಗಳಲ್ಲಿ ವಿಧಿಸಿದ್ದ 2ರೂ  ಶುಲ್ಕವನ್ನೇ 2019 ರ ಕಾಲದಲ್ಲಿ ಮುಂದುವರಿಸುತ್ತಿರುವುದು ಅತ್ಯಂತ ರೋಚಕ.

ಹಲವಾರು ಬಾರಿ ಕೃಷ್ಣ ಹೆಗಡೆಯವರು ಬಡ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೌಲಭ್ಯವನ್ನು ಒದಗಿಸುವುದು ಉಂಟು.

ಇಂತಹ ವ್ಯಕ್ತಿತ್ವಕ್ಕೆ, ವ್ಯಕ್ತಿಗೆ ನಮ್ಮ ತಂಡದಿಂದ ಒಂದು ಸಲಾಂ

LEAVE A REPLY

Please enter your comment!
Please enter your name here