ನಮ್ಮ ಹಿಂದಿನ ಜನ ಏನೆ ಮಾಡಿದ್ರು ನಮ್ಮ ಒಳ್ಳೆಯದಕ್ಕೆ ಅನ್ನೋದು ಮತ್ತೊಮ್ಮೆ ಸಾಭೀತಾಗಿದೆ. ಯಾಕಂದ್ರೆ ಅವರು ಇವತ್ತು ಏನು ಕಂಡು ಹಿಡಿದಿದ್ದಾರೋ ಅವೆಲ್ಲ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೆ ಅನುಕೂಲಕರವಾಗಿವೆ. ಅದೇ ರೀತಿ ನಾವು ಚಿಕ್ಕವರಿದ್ದಾಗ ನಮಗೆ ಪಲ್ಸ್ ಪೋಲಿಯೋ ಹಾಕಿಸುತ್ತಿದ್ದರು. ಅದರ ಉದ್ದೇಶ ದೇಹದ ಯಾವುದೇ ಭಾಗವು ಕೂಡ ಊನವಾಗಬಾರದು ಎಂಬುದು  ಉದ್ದೇಶವಾಗಿತ್ತು. ಆದರೆ ಅದನ್ನು ಯಾರು ಕಂಡು ಹಿಡಿದರು  ಎಂಬುದು ಮಾತ್ರ ನಮಗೆ ಗೊತ್ತಿಲ್ಲ. ಹಾಗಾದ್ರೆ ಅವರು ಯಾರು ಎಂಬುದನ್ನು ತಿಳಿಯೋಣ

ಜೋನ್ಸ್ ಸಾಲ್ಕ್ ಅವರು  ಅಕ್ಟೋಬರ್ 28, 1914ರಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸ ನ್ಯೂಯೋರ್ಕ್ ಸಿಟಿಯಲ್ಲಿ ಮುಗಿಸಿದರು. ನಂತರ 1939ರಲ್ಲಿ ತಮ್ಮ ವೈದ್ಯವೃತ್ತಿ ಕಲಿಯಲು ಪ್ರಾರಂಭಿಸಿದರು, ಇವರು ತಮ್ಮ ವೈದ್ಯವೃತ್ತಿಯಲ್ಲಿ ಉತ್ತೀರ್ಣ ಹೊಂದಿದ ಮೇಲೆ ಹೆಚ್ಚಿನ ವಿಧ್ಯಾಭ್ಯಾಸವನ್ನು ಪ್ರಾರಂಭಿಸಿದರು ಅವರಿಗೆ ಸ್ಕ್ಯಾಲರ್ಶಿಪ್ ಸಹ ಬರುತಿತ್ತು.

ಇವರು ಇಂಟರ್ನ್ಶಿಪ್ ಸಹ ಮೌಂಟ್ ಸಿನಾಯಿ ಹಾಸ್ಪಿಟಲ್ ಅಲ್ಲಿ ಮುಗಿಸಿದರು ನಂತರ ಇವರು ಸಮಾಜಕ್ಕೆ ಏನಾದರೂ ಕೊಡುಗೆ ಕೊಡ ಬೇಕು ಅದು ಎಲ್ಲರೂ ಬಳಸ ಬೇಕು ಮತ್ತು ಶುಲ್ಕ್ ರಹಿತವಾಗಿರ ಬೇಕು ಎಂಬುದು ಇವರ ಆಸೆಯಾಗಿತ್ತು ಅದರಂತೆ ಪಲ್ಸ್ ಪೋಲಿಯೋ ಕಂಡು ಹಿಡಿದರು ಈ ಲಸಿಕೆಯನ್ನು ಇವರು ಪೇಟೆಂಟ್ ಮಾಡಿಕೊಂಡಿದ್ದರೆ ಕೋಟ್ಯಧಿಪತಿಯಾಗುತ್ತಿದ್ದರು ಆದರೆ ಇವರು ಹಾಗೆ ಮಾಡಲಿಲ್ಲ ಎಲ್ಲರಿಗೂ ಒಳಿತು ಮಾಡಿರುವ ಇವರಿಗೆ ಧನ್ಯವಾದ ಹೇಳೋಣ.

LEAVE A REPLY

Please enter your comment!
Please enter your name here