ಓದುವ ವಯಸ್ಸಿನಲ್ಲಿ ಆಡುವ ಗೀಳು, ಅದ್ರಲ್ಲೂ ಈ ಆಂಡ್ರಾಯ್ಡ್ ಫೋನ್ಗಳು ಬಂದ ಮೇಲಂತೂ ಯಾವುದಕ್ಕೂ ಕೊನೆಯೇನೆಂಬುದೇ ಇಲ್ಲದಂತಾಗಿದೆ. ಎಲ್ಲವೂ ಸಹ ಬೆರಳ ತುದಿಯಲ್ಲಿ ನಡೆದು ಹೋಗುತ್ತದೆ ಎಂಬುದು ಈಗೀನ ಮಕ್ಕಳ ಅಭಿಪ್ರಾಯ. ಆದ್ರೆ ಜೀವನ ಮಾತ್ರ ಬೆರಳ ತುದಿಯಲ್ಲಿ ಇಲ್ಲ ಎಂಬುದನ್ನು ಈಗೀನ ಮಕ್ಕಳಿಗೆ ತಿಳಿಸಬೇಕಾಗಿದೆ. ಹೌದು ಮಕ್ಕಳೇ ನೀವು ಮಾಡುವ ಒಂದು ತಪ್ಪು ಪೋಷಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದು ಅಥವಾ ಅವರು ಮುಖ ಎತ್ತಿಕೊಂಡು ತಿರುಗದಂತೆ ಮಾಡಬಹುದು. ಯಾಕೆ ಹೀಗೆ ಹೇಳ್ತಾಯಿದೀವಿ ಅಂತ ತಿಳ್ಕೋಬೇಕಾ ಈ ಸುದ್ದಿ ಓದಿ…

ಮುಂಬೈನ ನೆಹರು ನಗರದ ನಿವಾಸಿಯಾದ ಯುವಕ ತನಗೆ ಪಬ್ ಜಿ ಆಡಲು ಹೊಸ ಫೋನ್ ಬೇಕೆಂದು ಪೋಷಕರ ಬಳಿ ಕೇಳಿದ್ದಾನೆ ಆದ್ರೆ ಪೋಷಕರು  ಅವನ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೊಡಿಸಲು ಆಗುದಿಲ್ಲ ಎಂದು ಹೇಳಿದ್ದಾರೆ ಇದಕ್ಕೆ ಸಾಕಷ್ಟು ವಾದ-ವಿವಾದಗಳು ನಡೆದಿವೆ.

ಹುಡುಗ ಕೇಳಿದ್ದು ಬರೋಬ್ಬರಿ 37 ಸಾವಿರ ರೂ. ಮೌಲ್ಯದ ಫೋನ್ ಅನ್ನು ಆದರೆ ಪೋಷಕರು 20 ಸಾವಿರಕ್ಕಿಂತ ಹೆಚ್ಚಿಗೆ ಮೌಲ್ಯದ ಫೋನ್ ಅನ್ನು ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಇದರಿಂದ ಮನನೊಂದ ಯುವಕ ಅಡುಗೆ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ತನ್ನ ಪ್ರಾಣವನ್ನೇ ಕಳೆದು ಕ್ಕೊಂಡಿದ್ದಾನೆ .

ವಿ.ಸೂ : ಪ್ರೀತಿಯ ಮಕ್ಕಳೇ ನಿಮ್ಮೆರಲ್ಲಿಯೂ ಒಂದು ವಿನಂತಿ ಎಲದಕ್ಕೂ ಸಾವು ಒಂದೇ ಪರಿಹಾರವಲ್ಲ ಹೊರತು ಜೀವಿಸಲು ಸಾಕಷ್ಟು ಅವಕಾಶಗಳಿವೆ ಆದ್ದರಿಂದ ನಿಮ್ಮ ಜೀವನವನ್ನು ನೀವೇ ಹಾಳು ಮಾಡಿಕೊಳ್ಳ ಬೇಡಿ ಮತ್ತು ನಿಮ್ಮ ಪೋಷಕರ ಮಾತು ಕೇಳಿ ಅವರಿಗೆ ಗೌರವ ಕೊಡಿ.

LEAVE A REPLY

Please enter your comment!
Please enter your name here