ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ ಘೋಷಣೆ ಮಾಡಿದ್ದಾರೆ ಇದು 2019ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಯೋಜನೆಗಳನ್ನು ಹಂಗಾಮಿ ವಿತ್ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ಏನು ಈ ಯೋಜನೆ ಯಾರು ಯಾರಿಗೆ ಈ ಯೋಜನೆಯ ಪಿಂಚಣಿ ದೊರೆಯುತ್ತದೆ, ತಿಳ್ಕೊಬೇಕಾ  ಹಾಗಾದರೆ ಮುಂದೆ ಓದಿ..

ಖಾಸಗಿ ವಲಯದಲ್ಲಿ ಸುಮಾರು 10 ಕೋಟಿ ಕಾರ್ಮಿಕರು ಶ್ರಮಪಡುತ್ತಿದ್ದಾರೆ ಇವರಿಗೆಲ್ಲ ಪಯೋಗವಾಗುವಂತೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದೆ.

ಈ ಯೋಜನೆಯಡಿ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತದೆ ಒಂದು ವೇಳೆ ಹದಿನೆಂಟನೇ ವಯಸ್ಸಿಗೆ ಕೆಲಸಕ್ಕೆ ಸೇರುವ ಕಾರ್ಮಿಕರು ಪ್ರತಿ ತಿಂಗಳು 55 ರೂಪಾಯಿ ಪಾವತಿ ಮಾಡಬೇಕು ಒಂದು ವೇಳೆ 29 ನೇ ವಯಸ್ಸಿಗೆ ಕೆಲಸಕ್ಕೆ ಸೇರುವ ಕಾರ್ಮಿಕರು ನೂರು ರೂಪಾಯಿಗಳನ್ನು ಪ್ರತಿ ತಿಂಗಳು ಚಾಚು ತಪ್ಪದೆ ಪಾವತಿ ಮಾಡಬೇಕಾಗುತ್ತದೆ ಈ ರೀತಿಯಾಗಿ ಪ್ರತಿ ತಿಂಗಳು ಪಿಂಚಣಿ ಯೋಜನೆಗೆ ಪ್ರತಿ ತಿಂಗಳು ಪಾವತಿ ಮಾಡಿರುವ ದುಡ್ಡಿನಿಂದ ಕಾರ್ಮಿಕರಿಗೆ ಅರವತ್ತು ವರ್ಷದ ವೇಳೆಗೆ ಮೂರು ಸಾವಿರ ರೂಪಾಯಿ ಪ್ರತಿ ತಿಂಗಳು ಪಿಂಚಣಿ ಲಭ್ಯವಾಗಲಿದೆ ಎಂದು ಪಿಯುಷ್ ಗೊಯಲ್ ಬಜೆಟ್ ನಲ್ಲಿ ತಿಳಿಸಿದ್ದಾರೆ.

2019 ಮತ್ತು 20 ನೇ ಸಾಲಿನ ಬಜೆಟ್ನಲ್ಲಿ ಘೋಷಣೆಯಾದ ಯೋಜನೆ ಅನುದಾನಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಪ್ರತಿ ಕಾರ್ಮಿಕನಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತದೆ

ಕಾರ್ಮಿಕ ಕನಿಷ್ಠ ಆದಾಯ 21 ಸಾವಿರಕ್ಕೆ ಏರಿಕೆ

ಇ ಎಸ್ ಐ ಆದಾಯ ಮಿತಿ ಏರಿಕೆ 15 ಸಾವಿರದಿಂದ 21 ಸಾವಿರಕ್ಕೆ ಮಿತಿ ಏರಿಕೆ ಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಮೀನುಗಾರರು ಪಶು ಸಂಗೋಪನಾ ಕ್ಷೇತ್ರದವರಿಗೆ ಶೇ ಎರಡರಷ್ಟು ಬಡ್ಡಿ ವಿನಾಯ್ತಿ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.

LEAVE A REPLY

Please enter your comment!
Please enter your name here