ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಸ್ಯಾಂಡಲ್ ವುಡ್ ಮಂದಿಗೆ ಶಾಕ್ ನೀಡಿದ್ದಾರೆ, ಕನ್ನಡದ ಹಲವು ನಟ ನಿರ್ಮಾಪಕ ರ ಮನೆಯ ಮೇಲೆ ದಾಳಿ ನಡೆದಿದೆ ಐವತ್ತಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಎರಡು ನೂರಕ್ಕೂ ಹೆಚ್ಚು ಅಧಿಕಾರಿಗಳು ಕಲಾವಿದರ ಹಾಗೂ ನಿರ್ಮಾಪಕರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ವಿಲನ್ ಚಿತ್ರದ ನಿರ್ಮಾಪಕ ವಿಧಾನ ಪರಿಷತ್ ಸದಸ್ಯ ಸಿಆರ್ ಮನೋಹರ್ ಮನೆ ಮೇಲೆ ಐಟಿ ದಾಳಿ ನಡೆದಿದೆ ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಹಾಗೆ ಸದಾಶಿವ ನಗರದಲ್ಲಿರುವ ಪುನೀತ್ ರಾಜಕುಮಾರ್ ಮತ್ತು ನಟಸಾರ್ವಭೌಮ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ಹಾಗೂ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ನಿವಾಸದ ಮೇಲೆ ದಾಳಿ ನಡೆದಿದೆ.

ನಟರಾದ ಶಿವರಾಜಕುಮಾರ್ ಯಶ್ ಸುದೀಪ್ ಸೇರಿದಂತೆ ಹಲವು ನಟರ ಮನೆಯ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಖಾಸಗಿ ವಾಹನಗಳಲ್ಲಿ ಬಂದು ಬೆಳ್ಳಂಬೆಳಗ್ಗೆ ಸ್ಟಾರ್ ನಟರ ಬಾಗಿಲನ್ನು ತಟ್ಟಿದ್ದಾರೆ ಇದು ಸ್ಯಾಂಡಲ್ ವುಡ್ಡಲ್ಲಿ ಶಾಪ್ ಮಾಡುವ ಸುದ್ದಿಯಾಗಿದೆ.

LEAVE A REPLY

Please enter your comment!
Please enter your name here