ಕೆ.ಜಿ.ಎಫ್ ಚಿತ್ರದಲ್ಲಿ ವಿಲನ್ ಒಬ್ಬ ಕ್ಯಾ ಛಾಹೀರೇ ತೇರೇ ಕೋ ಅಂತ ಕೇಳ್ತಾನೆ ಅದಕ್ಕೆ ಹುಡುಗ ದುನಿಯಾ ಎಂದು ಉತ್ತರ ನೀಡುತ್ತಾನೆ. ಒಂದು ಮಾತು ಇಡೀ ಭಾರತವೇ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ.

ಹೌದು,ಕೆ.ಜಿ.ಎಫ್ ಚಿತ್ರದಲ್ಲಿ ಬರುವ ಒಂದು ಸನ್ನಿವೇಶ ಕೆ.ಜಿ.ಎಫ್ ಸಿನಿಮಾದ ಟ್ರೈಲರ್ ರಿಲೀಸ್ ಆದಾಗ ಟ್ರೈಲರ್ ನಲ್ಲಿ ಯಶ್ ನಂತೆ ಕಾಣಿಸಿಕೊಂಡ ಇನ್ನೊಬ್ಬ ನಟ ಅಂದರೆ ಪುಟ್ಟ ಹುಡುಗ.

ಹುಡುಗ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ.ಆದರೆ ಸಿನೆಮಾ ತಂಡ ಮಾತ್ರ ಬಗ್ಗೆ ಏನು ಮಾಹಿತಿ ಬಿಟ್ಟುಕೊಟ್ಟಿಲ್ಲ.ಆದರೆ ಹುಡುಗ ಯಾರು ಅನ್ನುವ ಇಂಟೆರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ.

ಕೆ.ಜಿ.ಎಫ್ ಚಿತ್ರದಲ್ಲಿ ಯಶ್ ಅವರ ಚಿಕ್ಕ ವಯಸ್ಸಿನ ಪಾತ್ರ ಮಾಡಿದ ಹುಡುಗನ ಹೆಸರು ಹನ್ ಮುಳ್ಗ್ ಜಯಭಟ್ಕರ್ ಅಂತ.ಕೆ.ಜಿ.ಎಫ್ ಸಿನಿಮಾದಲ್ಲಿ ಇತ ಹದಿನಾಲ್ಕು ವರ್ಷದ ಹುಡುಗನ ಪಾತ್ರ ಮಾಡಿದ್ದಾನೆ.

ಈತ ಈಗ ಒಂಬತ್ತನೆ ತರಗತಿಯ ವಿದ್ಯಾರ್ಥಿ.ಕಳೆದ ಒಂಬತ್ತು ವರ್ಷಗಳಿಂದ ಇವನು ಡಾನ್ಸ್ ಪ್ರಾಕ್ಟೀಸ್ ಮಾಡ್ತಾಯಿದ್ರು ಒಂದು ತಿಂಗಳ ಕಾಲ ಕೆ.ಜಿ.ಎಫ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾನೆ. ನನಗೆ ಆಕ್ಟಿಂಗ್ ಅಂದರೆ ತುಂಬಾ ಇಷ್ಟ.

ನನ್ನ ಚಾಮರಾಜ್ ಮೇಸ್ಟ್ರು ಪಾತ್ರ ಮಾಡೋದಕ್ಕೆ ಅವಕಾಶವನ್ನ ಮಾಡಿಕೊಟ್ಟರು.ಅಷ್ಟೇ ಅಲ್ಲದೆ ನನಗೆ ಒಂದು ತಿಂಗಳಗಳ ಕಾಲ ರಜೆ ಕೊಟ್ಟು ನನ್ನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು.

ಟ್ರೈಲರ್ ನಲ್ಲಿ ನಾನು ಮಡಿದ ಆಕ್ಟಿಂಗ್ ನೋಡಿ ನನಗೆ ತುಂಬಾ ಖುಷಿಯಾಗಿದೆ.ಎಲ್ಲರು ಚೆನ್ನಾಗಿ ಆಕ್ಟ್ ಮಾಡಿದ್ದೀಯಾ ಅಂತ ಹೇಳ್ತಾಯಿದ್ದಾರೆ.

ಈತನನ್ನ ಸಿನೆಮಾಕ್ಕೆ ಸೇರಿಸಿದ್ರೋ ಗೊತ್ತಿಲ್ಲಾ ಆದರೆ ಕೆ.ಜಿ.ಎಫ್ ಸಿನಿಮಾದ ಟ್ರೈಲರ್ ನೋಡಿದವರು ಈತನ ಆಯ್ಕೆ ಮಾತ್ರ ತುಂಬಾ ಸೂಕ್ತವಾಗಿದೆ ಅಂತ ಯೋಚಿಸಿದ್ದು ಸುಳ್ಳಲ್ಲ.

LEAVE A REPLY

Please enter your comment!
Please enter your name here