ಹಿರಿಯ ನಟ ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು.

ಚಿತ್ರರಂಗದ ಗಣ್ಯರು ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನಿಗೆ ಕಣ್ಣೀರ ವಿದಾಯ ಹೇಳಿದರು.ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ರಮ್ಯಾ ಬಾರದೇ ಇದ್ದುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.ಆಕೆಯ ಮೇಲೆ ಟೀಕಾಸ್ತ್ರ ಪ್ರಯೋಗಗಳೇ ನಡೆದವು.

ದೇಶಾದ್ಯಂತ ಅಂಬಿ ಸ್ನೇಹಿತರೆಲ್ಲರೂ ಅಂತಿಮ ದರ್ಶನ ಪಡೆದರು. ಸ್ವೀಡನ್ನಲ್ಲಿ ಚಿತ್ರೀಕರಣದಲ್ಲಿದ್ದ ದರ್ಶನ್ ಕೂಡ ಶೂಟಿಂಗ್ ನಿಲ್ಲಿಸಿ ಓಡೋಡಿ ಬಂದರು.ಆದರೆ ಎಲ್ಲಾ ಅದ್ಯಾಕೋ ಮಾಜಿ ಸಂಸದೆ ರಮ್ಯಾ ಮಾತ್ರ ಎಲ್ಲಿಯೂ ಕಾಣಲೇ ಇಲ್ಲ.

ಕೊನೆಗೆ ಮೌನ ಮುರಿದ ರಮ್ಯಾ ಅಂಬಿ ಅಂತಿಮ ಸಂಸ್ಕಾರಕ್ಕೆ ಬರದೇ ಇರಲು ಕಾಲು ನೋವೇ ಕಾರಣ ಎಂದು ಸ್ಪಷ್ಟನೆ ನೀಡಿದರು. ಜೊತೆಗೆ ಕಾಲಿಗೆ ಬ್ಯಾಂಡೇಜ್ ಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.ಅಂಬರೀಶ್ ಸಾವನ್ನಪ್ಪಿದ ದಿನ ರಾತ್ರಿ ರಮ್ಯಾ ಅಂಬರೀಷ್ ಅಂಕಲ್ ಅವರ ಸಾವು ಅಪಾರವಾದ ನೋವುಂಟು ಮಾಡಿದೆ.

ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲಿ.ಅವರನ್ನು ನಾನು ಎಂದೆಂದಿಗೂ ಪ್ರೀತಿಯಿಂದ ನೆನೆಯುತ್ತೇನೆ ಎಂದು ಟ್ವೀಟ್ ಮಾಡಿದ್ದೇನೋ ಹೌದು.

ಆದರೆ ಆನಂತರ ಅವರು ಅಂಬಿ ಅಂಕಲ್ ಅಂತಿಮ ದರ್ಶನಕ್ಕಾಗಿ ಮಂಡ್ಯಗೂ ಬರಲಿಲ್ಲ ಬೆಂಗಳೂರಿಗೂ ಬರಲಿಲ್ಲ.ರಮ್ಯಾ ವರ್ತನೆಗೆ ಅಂಬರೀಶ್ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ರಮ್ಯಾ ಯಾಕೆ ಗೈರು ಗೊತ್ತೇ

ಮಾಜಿ ಸಂಸದೆ ನಟಿ ರಮ್ಯಾ ಅಪರೂಪದ ಖಾಯಿಲೆಗೆ ತುತ್ತಾಗಿದ್ದು,ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಹೌದು ಹತ್ತು ಲಕ್ಷ ಮಂದಿ ಮಹಿಳೆಯರ ಪೈಕಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಮಾಜಿ ಸಂಸದೆ.ಇದು ರೋಗದ ಬಗೆಗೆ ಅನುಮಾನವನ್ನು ಹುಟ್ಟು ಹಾಕಿತ್ತು. ಕಾಲಿಗೆ ಬ್ಯಾಂಡೇಜ್ ಸುತ್ತಲಾಗಿದ್ದು ನಡೆಯಲಾಗದ ಸ್ಥಿತಿ ತಲುಪಿದ್ದರು.

ರಮ್ಯಾ ಆಸ್ಟಿಯೋಕ್ಲ್ಯಾಟೋಮಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದು ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಖಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ ರಮ್ಯಾ.Osteoclastoma ಎಂಬುದು ಮೂಳೆಗಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು ರಮ್ಯಾ ಕಾಲಿನ ಎಲುಬುಗಳ ನಡುವೆ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

 

ಇದೀಗ ಇನ್ಸ್ಟ್ರಾಗ್ರಾಮ್ ನಲ್ಲಿ ನಡೆದಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.ಈ ಫೋಟೋವನ್ನು ನೋಡಿದ್ರೆ ಗುಣಮುಖರಾದಂತೆ ಕಾಣಿಸುತ್ತದೆ.

ತುಸು ಸಮಾಧಾನ ನೀಡಿದೆ.ಪ್ರತಿಸಲ ಹೊಡತ ಬಿದ್ದಾಗಲೂ ನಾನು ಇನ್ನಷ್ಟು ಗಟ್ಟಿಯಾಗುತ್ತಿದ್ದೇನೆ. ನನ್ನ ಮನೋಸ್ಥೈರ್ಯ ಇನ್ನಷ್ಟು ಹೆಚ್ಚಾಗಿದೆ.ಯಾರೇನೇ ಅಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ.ಯಾರ ಟೀಕೆಗೂ ಬಗ್ಗುವುದಿಲ್ಲ ಎಂದು ಫೋಟೋ ಮೇಲೆ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here