ಕೆಜಿಎಫ್ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗ್ತಿರುವುದು ಬಾಲಿವುಡ್ ನಲ್ಲಿ ತೀರಾ ಕುತೂಹಲ ಮೂಡಿಸಿದೆ.ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ.

ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ ಎಷ್ಟೋ ಸಲ ಕನ್ನಡದ ಸಿನಿಮಾಗಳನ್ನ ತೆಗೆದು ಬೇರೆ ಭಾಷೆಯ ಸಿನಿಮಾಗಳಿಗೆ ಅವಕಾಶ ಮಾಡಿಕೊಟ್ಟಿರುವ ಉದಾಹರಣೆಗಳು ಸಹ ಇದೆ.ಈ ಮಧ್ಯೆ ಶಾರೂಖ್ ಸಿನಿಮಾದ ಎದುರು ಕನ್ನಡ ಸಿನಿಮಾ ಬರ್ತಿದೆ ಎಂದು ಕಾಲೆಳೆದವರು ಇದ್ದಾರೆ.

ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಶ್ ಬಾಲಿವುಡ್ ಸಂದರ್ಶನಗಳಲ್ಲಿ ಶಾರೂಖ್ ಬಗ್ಗೆ ಮೆಚ್ಚುಗೆ ಮಾತುಗಳನ್ನೇ ಹೇಳುತ್ತಿದ್ದಾರೆ.ನಾನು ಕೂಡ ಶಾರೂಖ್ ಖಾನ್ ಅವರ ಫ್ಯಾನ್ ಅವರ ಸಿನಿಮಾಗಳನ್ನ ನೋಡಿ ಸ್ಫೂರ್ತಿಯಾಗಿದ್ದೇನೆ.

ನಮಗೆ ಅವರು ಸ್ಫೂರ್ತಿ ಎಂದು ಹೆಮ್ಮೆಯಿಂದ ಹೇಳ್ತಿದ್ದಾರೆ.ಇದೀಗ ಕನ್ನಡ ಸುದ್ದಿಪತ್ರಿಕೆಯೊಂದಕ್ಕೆ ಶಾರೂಖ್ ಸಂದರ್ಶನ ನೀಡಿದ್ದು ಕೆಜಿಎಫ್ ಚಿತ್ರಕ್ಕೆ ಏನು ಹೇಳಿದ್ದಾರೆ ಗೊತ್ತೇ?

ಕೆಜಿಎಫ್ ಚಿತ್ರದ ಬಗ್ಗೆ ಶಾರೂಖ್ ಖಾನ್ ಮಾತನಾಡಿದ್ದು ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ.ಕೆಜಿಎಫ್ ಟ್ರೈಲರ್ ನೋಡಿದ್ದೇನೆ ತುಂಬಾ ಚೆನ್ನಾಗಿದೆ.ಬಾಕ್ಸ್ ಆಫೀಸ್ ನಲ್ಲು ಯಶಸ್ಸು ಕಾಣಲಿದೆ ಎಂದು ನನಗೆ ಅನಿಸುತ್ತಿದೆ.ಈ ಚಿತ್ರದ ಬಗ್ಗೆ ನಾನು ಕೆಲವರ ಬಳಿ ಕೇಳಿ ತಿಳಿದುಕೊಂಡೆ ಮೇಕಿಂಗ್ ಗೆ ಮೂರು ವರ್ಷ ಶ್ರಮ ಹಾಕಿದ್ದಾರೆ ಎಂಬುದು ಗೊತ್ತಾಯಿತು.

ಹೀರೋ ಯಶ್ ಮತ್ತು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದು ಶಾರೂಖ್ ಖಾನ್ ತಿಳಿಸಿದ್ದಾರೆ.ನಟ ಯಶ್ ಹಾಗೂ ಶಾರೂಖ್ ಖಾನ್ ಮುಖಾಮುಖಿಯಾಗಿಲ್ಲ.ಸ್ವತಃ ಯಶ್ ಅವರೇ ಹೇಳಿರುವ ಪ್ರಕಾರ ಅವರು ಶಾರೂಖ್ ಗೆ ಫ್ಯಾನ್.ಈಗ ಶಾರೂಖ್ ಕೂಡ ಯಶ್ ಅವರನ್ನ ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಮುಂದಿನ ಸಲ ಮುಂಬೈಗೆ ಬಂದಾಗ ಯಶ್ ಅವರನ್ನ ಭೇಟಿ ಮಾಡುತ್ತೇನೆ ಎಂದು ಕಿಂಗ್ ಖಾನ್ ಹೇಳಿದ್ದಾರೆ.ಇದೆ ಡಿಸೆಂಬರ್ 21 ರಂದು ದೇಶಾದ್ಯಂತ ತೆರೆ ಕಾಣಲು ಕೆ.ಜಿ.ಎಫ್ ಚಿತ್ರ ತಂಡ ಸಿದ್ದತೆಯನ್ನ ಮಾಡಿಕೊಂಡಿದೆ.ಸದ್ಯ ಏಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಲಿದೆ.ಕನ್ನಡ ಸಿನಿಮಾವೊ೦ದು ಪ್ಯಾನ್ ಇಂಡೀಯಾ ಬಿಡುಗಡೆ ಆಗುತ್ತಿದೆ ಹಾಗೆಯೆ ಸಿನಿಮಾ ರಂಗದ ಅನೇಕರು ಸಿನಿಮಾದ ಎರಡು ಟ್ರೈಲರ್ ಗಳನ್ನ ಹೊಗಳಿದ್ದಾರೆ.

ಮೊದಲ ಟ್ರೈಲರ್ ನೋಡಿ ಸುದೀಪ್ ಅವರಿಂದ ಹಿಡಿದು ದೊಡ್ಡ ದೊಡ್ಡ ನಟರು ಟ್ರೈಲರ್ ಗೆ ಪಿಧಾ ಆಗಿದ್ದಾರೆ.ಈಗ ಕೆ.ಜಿ.ಎಫ್.ನ ಎರಡನೇ ಟ್ರೈಲರ್ ಬಿಡುಗಡೆ ಆಗಿದ್ದು ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.ಭಾರತದ ಅತೀ ದೊಡ್ಡ ದೊಡ್ಡ ಯೂಟ್ಯೂಬರ್ ಗಳಾದ ಹಿಂದಿಯ ಆಶಿಶ್ ಚಂಚಲಾನಿ, ಕ್ಯಾರಿನಿನನ್ತಿ ಎಲ್ಲರು ಹಾಡಿ ಹೊಗಳಿದ್ದಾರೆ.

ಕೆ.ಜಿ.ಎಫ್.ಮೊದಲ ಟ್ರೈಲರ್ ಅನ್ನು ಅಂಬರೀಷ್ ಅವರು ಬಿಡುಗಡೆ ಮಾಡಿದ್ದರು.ಆದರೆ ಸಿನಿಮಾ ನೋಡುವುದಕ್ಕೆ ಅಂಬಿಯವರೇ ಇಲ್ಲಾ.ಇನ್ನು ಕೆ.ಜಿ.ಎಫ್.ನ ಎರಡನೇ ಟ್ರೈಲರ್ ಬಗ್ಗೆ ದರ್ಶನ್ ಅವರು ಮಾತನಾಡಿದ್ದಾರೆ,ಅಂಬಿ ಅಪ್ಪಾಜಿ ಅವರಿಗೆ ಕುರುಕ್ಷೇತ್ರ ಮತ್ತು ಕೆ.ಜಿ.ಎಫ್.ಗಳನ್ನೂ ನೋಡಬೇಕೆನ್ನುವ ದೊಡ್ಡ ಆಸೆ ಇತ್ತು,

ಆದರೆ ವಿಧಿವಶಾತ್ ಅಂಬಿ ನಮ್ಮ ಮುಂದೆ ಇಲ್ಲಾ.ಕೆ.ಜಿ.ಎಫ್.ನ ಎರಡನೇ ಕೂಡ ತುಂಬಾ ಚೆನ್ನಾಗಿದೆ.ಪ್ರತಿಯೋಬ್ಬರ ಶ್ರಮ ಎದ್ದು ಕಾಣುತ್ತಿದೆ.ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ಆಲ್ ದಿ ಬೆಸ್ಟ್ ಯಶ್ಎಂದು ವಿಶ್ ಮಾಡಿದ್ದಾರೆ.ನಮ್ಮ ಕನ್ನಡ ಸಿನಿಮಾ ನಮ್ಮ ಹಿಂದಿ ಸಿನಿಮಾದ ಮುಂದೆ ಬಂದು ಬಾರಿ ಕ್ರೇಜ್ ಹುಟ್ಟುಹಾಕಿದೆ ಎನ್ನುವ ಹೊಟ್ಟೆ ಕಿಚ್ಚಿನಿಂದ ಹಿಂದಿಯ ಕೆಲವು ಪ್ರಮುಖ ಮಾಧ್ಯಮಗಳು ಕೆ.ಜಿ.ಎಫ್ ಪ್ರಚಾರದಿಂದ ಹಿಂದೆ ಸರಿದಿವೆ.

ಕನ್ನಡದ ಹುಡುಗ ಯಶ್ ಪ್ರೀತಿ ಎಷ್ಟು ಇತ್ತು ಅಂದರೆ ಬಂದಿದ್ದಂಥ ಚಿಕ್ಕ ಪುಟ್ಟ ಮಾಧ್ಯಮಗಳಿಗೂ ಸಹ ಪ್ರೀತಿ ಇಂದ ಕಂಡು ಉತ್ತಮ ಪ್ರತಿಕ್ರಿಯೆಯನ್ನ ನೀಡಿ ಕೆ.ಜಿ.ಎಫ್ ಗೆಲ್ಲಿಸಿ ಎಂದು ಭಾರತೀಯರಲ್ಲಿ ಕೇಳಿಕೊಂಡಿದ್ದಾರೆ.

ನಾವು ಕರ್ನಾಟಕ ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲದೆ ಪರ ಭಾಷೆಯ ಸಿನಿಮಾಗಳಿಗೆ ಕೂಡ ಚಿತ್ರಮಂದಿರಗಳಲ್ಲಿ ಹಾಕಲು ಅವಕಾಶ ಮಾಡಿಕೊಟ್ಟು ಉದಾರತೆಯನ್ನ ಮೆರೆಯುತ್ತಾರೆ ಕನ್ನಡಿಗರು

LEAVE A REPLY

Please enter your comment!
Please enter your name here