ಹೌದು, 2014 ರಲ್ಲಿ ತೆರೆಕಂಡ ಉಗ್ರಂ ಚಿತ್ರದ ಮೂಲಕ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ಆಗಲೇ ಉಗ್ರಂ ವೀರಂ ಎಂಬ ಟೈಟಲ್ ರಿಜಿಸ್ಟರ್ಡ್ ಮಾಡಿಸಿದ್ದರು.ಇದೀಗ ಈ ಚಿತ್ರಕ್ಕೆ ಕಾಲ ಕೂಡಿ ಬಂದಿದ್ದು,ಮತ್ತೊಮ್ಮೆ ಶ್ರೀಮುರುಳಿ ಪ್ರಶಾಂತ್ ನೀಲ್ ಜೊತೆಯಾಗಲಿದ್ದಾರೆ ಎನ್ನಲಾಗಿದೆ.

ಉಗ್ರಂ ವೀರಂ ಚಿತ್ರಕ್ಕೂ ಶ್ರೀ ಮುರಳಿ ಅವರೇ ಹೀರೋ ಎನ್ನಲಾಗುತ್ತಿದ್ದು,ಕೆಜಿಎಫ್ ನಂತರ ಉಗ್ರಂ ವೀರಂ ಸೆಲೆಬ್ರೇಷನ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಉಗ್ರಂ ವೀರಂ ಚಿತ್ರದ ಸ್ಕ್ರಿಫ್ಟ್ ರೆಡಿಯಾಗಿದ್ದು,ಮುಂದಿನ ವರ್ಷ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಜಿಎಫ್ ರಿಲೀಸ್ ಸೆಲಬ್ರೇಷನ್ ನೋಡಿ ಸಂಭ್ರಮವಾಗ್ತಿದೆ.ನಾವು ಅಂದುಕೊಂಡಂತೆಯೇ ನಡೆಯುತ್ತಿದೆ.ಪ್ರಶಾಂತ್ ಕನಸು ನನಸಾಗುತ್ತಿದೆ. ಅದನ್ನು ನೋಡಿಯೇ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ಶ್ರೀಮುರಳಿ.

LEAVE A REPLY

Please enter your comment!
Please enter your name here