ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ.

ಇದೆ ಡಿಸೆಂಬರ್ 21 ರಂದು ದೇಶಾದ್ಯಂತ ತೆರೆ ಕಾಣಲು ಸಿದ್ದತೆಯನ್ನ ಮಾಡಿಕೊಂಡಿದೆ.ಸದ್ಯ ಏಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಲಿದೆ.ಕನ್ನಡ ಸಿನಿಮಾವೊ೦ದು ಪ್ಯಾನ್ ಇಂಡೀಯಾ ರಿಲೀಸ್ ಆಗುತ್ತಿದೆ ಹಾಗೆಯೆ ಸಿನಿಮಾ ರಂಗದ ಅನೆಕರು ಸಿನಿಮಾದ ಎರಡು ಟ್ರೈಲರ್ ಗಳನ್ನ ಹೊಗಳಿದ್ದಾರೆ.

ಮೊದಲ ಟ್ರೈಲರ್ ನೋಡಿ ಸುದೀಪ್ ಅವರಿಂದ ಹಿಡಿದು ದೊಡ್ಡ ದೊಡ್ಡ ನಟರು ಟ್ರೈಲರ್ ಗೆ ಪಿಧಾ ಆಗಿದ್ದಾರೆ. ಈಗ ಕೆ.ಜಿ.ಎಫ್.ನ ಎರಡನೇ ಟ್ರೈಲರ್ ಬಿಡುಗಡೆ ಆಗಿದ್ದು ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದ ಅತೀ ದೊಡ್ಡ ದೊಡ್ಡ ಯೂಟ್ಯೂಬರ್ ಗಳಾದ ಹಿಂದಿಯ ಆಶಿಶ್ ಚಂಚಲಾನಿ, ಕ್ಯಾರಿನಿನನ್ತಿ ಎಲ್ಲರು ಹಾಡಿ ಹೊಗಳಿದ್ದಾರೆ.

ಕೆ.ಜಿ.ಎಫ್.ಮೊದಲ ಟ್ರೈಲರ್ ಅನ್ನು ಅಂಬರೀಷ್ ಅವರು ಬಿಡುಗಡೆ ಮಾಡಿದ್ದರು.ಆದರೆ ಸಿನಿಮಾ ನೋಡುವುದಕ್ಕೆ ಅಂಬಿಯವರೇ ಇಲ್ಲಾ.ಇನ್ನು ಕೆ.ಜಿ.ಎಫ್. ನ ಎರಡನೇ ಟ್ರೈಲರ್ ಬಗ್ಗೆ ದರ್ಶನ್ ಅವರು ಮಾತನಾಡಿದ್ದಾರೆ,ಅಂಬಿ ಅಪ್ಪಾಜಿ ಅವರಿಗೆ ಕುರುಕ್ಷೇತ್ರ ಮತ್ತು ಕೆ.ಜಿ.ಎಫ್.ಗಳನ್ನೂ ನೋಡಬೇಕೆನ್ನುವ ದೊಡ್ಡ ಆಸೆ ಇತ್ತು,ಆದರೆ ವಿಧಿವಶಾತ್ ಅಂಬಿ ನಮ್ಮ ಮುಂದೆ ಇಲ್ಲಾ.ಕೆ.ಜಿ.ಎಫ್.ನ ಎರಡನೇ ಕೂಡ ತುಂಬಾ ಚೆನ್ನಾಗಿದೆ.ಪ್ರತಿಯೋಬ್ಬರ ಶ್ರಮ ಎದ್ದು ಕಾಣುತ್ತಿದೆ.ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.”ಆಲ್ ದಿ ಬೆಸ್ಟ್ ಯಶ್ ” ಎಂದು ವಿಶ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here