ರಿಯಲ್ ಸ್ಟಾರ್ ಉಪೇಂದ್ರ ಸದ್ಯ ತಮ್ಮ ವೈಶಿಷ್ಟ್ಯ ಆಲೋಚನೆಗಳ ಮೂಲಕ ಪ್ರಜಾಕಿಯ ಎಂಬ ರಾಜಕೀಯ ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಅಭಿಮಾನಿಗಳ ನಡುವೆ ಇತ್ತೀಚೆಗೆ ಕೆಲವು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.ಪ್ರಜಾಕೀಯ ಮಾಡಲು ಹೋಗಿ ಅಭಿಮಾಣಿಗಳನ್ನ ಉಪ್ಪಿ ಮರೆತು ಬಿಟ್ಟರು,ಡೈರಿಕ್ಷನ್ ಮಾಡಿ,ಬರಿ ರಿಮೇಕ್ ಸಿನಿಮಾಗಳನ್ನೇ ಮಾಡ್ತೀರಾ ಎಂದು ಕಿಡಿಕಾರಿದ್ದರು.

ಇದು ಸಹಜವಾಗಿ ಉಪೇಂದ್ರ ಅವರಿಗೆ ಬೇಸರ ತರಿಸಿದೆ.ಹೀಗಾಗಿ ಆರಂಭದಲ್ಲಿ ಟ್ವಿಟ್ಟರ್ ಮೂಲಕವೇ ಇದಕ್ಕೆ ಉತ್ತರ ನೀಡಲು ಪ್ರಯತ್ನ ಪಟ್ಟರು. ಬಟ್ಅದು ಅಭಿಮಾನಿಗಳು ಸಮಾಧಾನವಾಗಿಲ್ಲ.ಹೀಗಾಗಿ ವಿಡಿಯೋ ಮೂಲಕ ತಮ್ಮ ಪ್ರಶ್ನೆಗಳಿಗೆ,ತಮ್ಮ ಅನುಮಾನಗಳಿಗೆ ಉತ್ತರಿಸಿದ್ದಾರೆ ಆದ್ರೆ, ಉತ್ತರಗಳ ಮೂಲಕವೇ ಮತ್ತಷ್ಟು ಪ್ರಶ್ನೆಗಳನ್ನ ಕೇಳಿರುವುದು ನಿಜಕ್ಕೂ ಚರ್ಚೆಯನ್ನ ಮತ್ತೆ ಮುಂದುವರಿಸುವಂತೆ ಮಾಡಿದೆ.ಅಷ್ಟಕ್ಕೂ ರೀಮೇಕ್ ಬಗ್ಗೆ ಕೇಳಿದ್ದಕ್ಕೆ ಉಪ್ಪಿ ಏನಂದ್ರು?ಅದಕ್ಕೆ ಏನು ಉತ್ತರ ನೀಡಿದ್ದಾರೆ.?ಮುಂದೆ ಓದಿ

ಡಬ್ಬಿಂಗ್ ಓಕೆ,ರೀಮೇಕೆ ಯಾಕೆ ಬೇಡ.?ರೀಮೇಕ್ ಬಗ್ಗೆ ಉಪೇಂದ್ರ ಭಕ್ತರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ,ಅವರನ್ನ ಮತ್ತೆ ಪ್ರಶ್ನಿಸಿದ್ದಾರೆ.ಡಬ್ಬಿಂಗ್ ಬೇಕು ಅಂತಾರೆ,ರೀಮೇಕ್ ಬೇಡ ಅಂತಾರೆ.ಬೇರೆ ಭಾಷೆಯ ಚಿತ್ರಗಳು ಡಬ್ ಆಗಿ ಬರಬಹುದು ಆದ್ರೆ ರೀಮೇಕ್ ಆಗಿ ಬರಬಾರದು ಎನ್ನುವುದು ಎಷ್ಟು ಸರಿ.?ಎಂದು ಪ್ರಶ್ನಿಸಿದ್ದಾರೆ.

ರೀಮೇಕ್ ಮಾಡೋದು ಸರಿ ಅಂದ್ರಾ ಉಪ್ಪಿ.!ನಾನು ಕೇಳುವ ಪ್ರಶ್ನೆಯಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದ್ದೀನಿ, ಸರಿಯಾಗಿ ಯೋಚನೆ ಮಾಡಿ ನೋಡಿ ಎಂದು ಸುಳಿವು ನೀಡಿದ್ದ ಉಪೇಂದ್ರ,ರೀಮೇಕ್ ಮಾಡೋದನ್ನ ಸಮರ್ಥಿಸಿಕೊಂಡಿದ್ದಾರೆ ಎನ್ನಬಹುದು.ಬೇರೆ ಕಲಾವಿದರು, ಬೇರೆ ನಿರ್ಮಾಪಕರು ಮಾಡಿದ ಚಿತ್ರವನ್ನ ಕನ್ನಡ ಭಾಷೆ ಬಳಸಿ ತರಬಹುದು,

ರೀಮೇಕ್ ಮಾಡಿದ್ರೆ ಬೇಡ ಅಂತಾರೆ ಎಂದಿರುವುದರ ಅರ್ಥ,ಡಬ್ಬಿಂಗ್ ಗಿಂತ ರೀಮೇಕ್ ಮಾಡುವುದು ಉತ್ತಮ ಎಂಬ ಅರ್ಥ ನೀಡುತ್ತಿರಬಹುದು.ಇನ್ನು ಕನ್ನಡದಲ್ಲಿ ಡಬ್ಬಿಂಗ್ ಬೇಕಾ ಅಥವಾ ಬೇಡ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ ಅವರು,ಬೇರೆ ಎಲ್ಲ ಭಾಷೆಗಳ ಚಿತ್ರಗಳು ಬರಿ ಡಬ್ಬಿಂಗ್ ಮೂಲಕವೇ ಕರ್ನಾಟಕದಲ್ಲಿ ಬರಬೇಕಾ ಅಥವಾ ಪರಭಾಷೆಯಲ್ಲೂ ತೆರೆಕಂಡು,ಕನ್ನಡದಲ್ಲೂ ಡಬ್ ಆಗಿ ಬರಬೇಕಾ…?ಎಂದು ಪ್ರಶ್ನಿಸಿದ್ದಾರೆ. ಎರಡನೇ ಆಯ್ಕೆ ಗಮನಿಸಿದ್ರೆ,ಪರಭಾಷೆಯಲ್ಲೂ ಬಂದು,ಕನ್ನಡದಲ್ಲೂ ಡಬ್ಬಿಂಗ್ ಆಗಿ ಬಂದ್ರೆ ನಮ್ಮ ಕನ್ನಡ ಸಿನಿಮಾಗೆ ಸಮಸ್ಯೆಯಾಗಲ್ವಾ.? ಎಂದಿದ್ದಾರೆ.
 ವಿಡಿಯೋ ನೋಡಿ

LEAVE A REPLY

Please enter your comment!
Please enter your name here