ಜಮ್ಮು ಕಾಶ್ಮೀರದಲ್ಲಿ ಉಗ್ರರ ಕಾರ್ಯಚರಣೆ ವೇಳೆ ಗಾಯ ಗೊಂಡಿದ್ದ ಸಿನಿಕರೊಬ್ಬರಿಗೆ ನೇರವಾದ ಫೋಟೋಗ್ರಾಫರ್ ವಾಸಿಮ್ ಅಂದ್ರಾಭಿಯವರಿಗೆ ಸಿಆರ್ ಪಿ ಎಫ್ ಧನ್ಯವಾದ ಸಲ್ಲಿಸಿದೆ.

ವಾಸಿಮ್ ಅಂದ್ರಾಭಿ ಸ್ಥಳೀಯ ಸುದ್ದಿ ಸಂಸ್ಥೆಯಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಾರೆ ಹಾಗೆಯೇ ಗಾಯಗೊಂಡ ಸಿನಿಕರೊಬ್ಬರಿಗೆ ಸಹಾಯ ಮಾಡಿದ್ದಾರೆ.ಲಷ್ಕರ್ ಎ ತೊಯ್ಬಾ ನಾಯಕ ನವೀದ್ ಜಾಟ್ ಹತ್ಯೆಗೈಯಲ್ಪಟ್ಟ ನವೆಂಬರ್ 28ರ ಸೇನಾ ಕಾರ್ಯಾಚರಣೆ ವೇಳೆ ಸೈನಿಕ ಪ್ರಣಾಮ್ ಸಿಂಗ್ ಗಾಯಗೊಂಡಿದ್ದರು. ಕೂಡಲೇ ವಸೀಂ ಧಾವಿಸಿ ಪ್ರಣಾಮ್ ರಿಗೆ ನೆರವಾದರು. ತಲೆಗೆ ಕಲ್ಲು ಬಿದ್ದದ್ದರಿಂದ ಪ್ರಣಾಮ್ ಸಿಂಗ್ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಕಲ್ಲುತೂರಾಟ ಮುಂದುವರಿದಿತ್ತು

ಪ್ರಣಾಮ್ ರಿಗೆ ಕಲ್ಲೇಟು ಬಿದ್ದಾಗ ಸ್ಥಳಕ್ಕೆ ಧಾವಿಸಿದ್ದ ವಸೀಂ ಒಂದು ಭುಜದಲ್ಲಿ ಕ್ಯಾಮರಾ ನೇತಾಡಿಸಿ ಪ್ರಣಾಮ್ ರಿಗೆ ಹೆಗಲು ಕೊಟ್ಟಿದ್ದರು. “ಗಾಯಗೊಂಡ ಸೈನಿಕನಿಗೆ ನೆರವಾದ ಫೋಟೊಗ್ರಾಫರ್ ಗೆ ನಾವು ಅಭಾರಿಯಾಗಿದ್ದೇವೆ” ಎಂದು ಸಿಆರ್ ಪಿಎಫ್ ಡಿಜಿ ಆರ್.ಆರ್. ಭಟ್ನಾಗರ್ ಹೇಳಿದ್ದಾರೆ.

ಇಂಥಹ ಸಂದಿಗ್ನ ಪರಿಸ್ಥಿತಿಯಲ್ಲಿ ಯೋಧ ರೊಬ್ಬರನ್ನು ಕಾಪಾಡಿದಿದ ವಾಸಿಮ್ ಅಂದ್ರಾಭಿ ಅವರ ಕೆಲಸಕ್ಕೆ ದೇಶದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here