ಸ್ವಿಮ್ಮಿಂಗ್ ಪೂಲ್ ನಲ್ಲಿ ತನ್ನ ಕಟ್ಟು ಮಸ್ತಾದ ದೇಹವನ್ನು ಪ್ರದರ್ಶಿಸುತ್ತ ನಿಂತುಕೊಂಡಿರುವವರು ಗೊತ್ತಾ?ಮುಂದೆ ಓದಿ ನೀವೇ ಶಾಕ್ ಆಗ್ತೀರಾ…
ಸುದೀಪ್,ಪೈಲ್ವಾನ್ ಚಿತ್ರಕ್ಕಾಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹದಗೊಳಿಸಿದ್ದು ಗೊತ್ತೆ ಇದೆ.ಇತ್ತೀಚೆಗೆ ರಿಲೀಸ್ ಆಗಿದ್ದ ಪೈಲ್ವಾನ್ ಚಿತ್ರದ ನ್ಯೂ ಲುಕ್ನಲ್ಲಿ ಅವರ ಈ ಹೊಸ ಅವತಾರ ಬೆರಗು ಮೂಡಿಸಿತ್ತು.ಇದು ನಿಜವಾಗಿಯೂ ಸುದೀಪ್ ಅವರೇನಾ ಎಂದು ಆಶ್ಚರ್ಯ ಪಡುವಂತೆ ಮಾಡಿತ್ತು.
ಪೋಸ್ಟರ್ ನಲ್ಲಿರುವುದು ನನ್ನ ನಕಲಿ ದೇಹ ಎನ್ನುವವರಿಗೆ ನಾನು ಏನು ಹೇಳುವುದಿಲ್ಲ.ಬಹುಶಃ ನಾನೇ ಅವರಿಗೆ ಈ ಅಭಿಪ್ರಾಯವನ್ನು ನೀಡಿದ್ದೇನೆ.ಪೈಲ್ವಾನ್ ಚಿತ್ರ ನನಗೆ ಸಾಕಷ್ಟು ಉತ್ಸಾಹ ನೀಡಿದೆ. ಅಲ್ಲದೇ ನಾನು ಈ ಚಿತ್ರದ ಎಲ್ಲ ಪ್ರಕ್ರಿಯೆಯನ್ನು ಎಂಜಾಯ್ ಮಾಡುತ್ತಿದ್ದೇನೆ.
ಚಿತ್ರದ ಸ್ಕ್ರಿಪ್ಟ್ ಗಾಗಿ ನಾನು ಜಿಮ್ಗೆ ಹೋಗಿದ್ದೇನೆ ಹೊರತು ಬೇರೆ ವಿಷಯವನ್ನು ಸಾಬೀತು ಮಾಡಲು ಅಲ್ಲ.ಎಂದು ಅವತ್ತ್ತು ಸುದೀಪ್ ಅವರು ಹೇಳಿದ್ದರು.
ಆದರೆ ಈಗ ಇನ್ನೊಂದು ಫೋಟೋ ಬಿಟ್ಟಿದ್ದಾರೆ.ಕುಸ್ತಿಪಟುವಿನ ಅವತಾರದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈಗ ಅಭಿಮಾನಿಗಳಿಗಾಗಿ ಮತ್ತೊಂದು ಲುಕ್ ರಿಲೀಸ್ ಮಾಡಿದ್ದಾರೆ ನಿರ್ದೇಶಕರು.
ಈ ಚಿತ್ರದಲ್ಲಿ ಸುದೀಪ್ ಸ್ವಿಮ್ಮಿಂಗ್ ಪೂಲ್ನಲ್ಲಿ ಹಿಮ್ಮುಖವಾಗಿ ನಿಂತು ಉಕ್ಕಿನಂತಹ ದೇಹವನ್ನು ಪ್ರದರ್ಶಿಸಿದ್ದಾರೆ.ಅವರು ಈ ರೀತಿ ಬಾಡಿ ಬಿಲ್ಡ್ ಮಾಡಿದ್ದು ಇದೇ ಮೊದಲು. ಅವರ ಈ ಡೆಡಿಕೇಶನ್ಗೆ ಕೃಷ್ಣಾ ಫಿದಾ ಆಗಿದ್ದಾರೆ.ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳು ಹುಚ್ಚೇದು ಕುಣಿದಾಡೋದು ಪಕ್ಕಾ.
ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು,ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು,ಮಲೆಯಾಳಂ,ಪಂಜಾಬಿ,ಬೆಂಗಾಲಿ,ಮರಾಠಿ,ಭೋಜ್ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ.
ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ.ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.