ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್ ,ಅಂತೂ ದುರ್ಯೋಧನ ನ ದರ್ಶನವನ್ನ ಕರುನಾಡ ಜನತೆಗೆ ತೋರಿಸಲು ನಿರ್ಮಾಪಕ ಮುನಿರತ್ನ ತಯಾರಿಯನ್ನ ಮಾಡಿದ್ದಾರೆ.

ಕುರುಕ್ಷೇತ್ರ ಈ ಸಿನಿಮಾ ಕೇವಲ ದರ್ಶನ್ ಪಾಲಿಗೆ ಮಾತ್ರ ಅಲ್ಲ,ಚಂದನವನಕ್ಕೇ ಒಂದು ಪ್ರತಿಷ್ಠೆಯ ಚಿತ್ರ.ಸದ್ಯ ಸೆನ್ಸಾರ್ ಬಾಗಿಲು ತಟ್ಟಲು ಸಜ್ಜಾಗಿದೆ.

ಕನ್ನಡದ ಚಿತ್ರಗಳು ಯಾವ ಪರಭಾಷೆಯ ಚಿತ್ರಕ್ಕೂ ಕಮ್ಮಿಯಲ್ಲ.ತಾಂತ್ರಿಕ ಗುಣ ಮಟ್ಟದ ವಿಷಯದಲ್ಲಾಗಲಿ,ಬಜೆಟ್‍ನ ವಿಷಯದಲ್ಲಾಗಲಿ,ಪರಭಾಷೆಯ ದೊಡ್ಡ ಚಿತ್ರಗಳಿಗೆ ನಾವು ಸರಿ ಸಾಟಿಯಾಗಿ ನಿಲ್ಲಬಲ್ಲೆವು ಎಂದು ಸಿನಿ ಜಗತ್ತಿಗೆ ತೋರಿಸಲು ಹೊರಟಿರೋ ಸಿನಿಮಾ ಕುರುಕ್ಷೇತ್ರ.ಇಂತಹ ಸಿನಿಮಾ ಯಾವಾಗ ತೆರೆಕಾಣಲಿದೆ ಅಂತ ಅಭಿಮಾನಿಗಳು ಕಾಯುತ್ತಾ ಇದ್ದರು.

ಕನ್ನಡದ ದೊಡ್ಡ ಬಜೆಟ್ ನ ಚಿತ್ರವನ್ನ ಬಾಹುಬಲಿ ಚಿತ್ರಕ್ಕೆ ದುಡಿದ ತಂಡವೇ ಕುರುಕ್ಷೇತ್ರ ಕ್ಕೂ ಕೆಲಸ ಮಾಡಿದೆ.ವಿ.ಎಫ್.ಎಕ್ಸ್ ಎಫೆಕ್ಟ್ ಅಂತೂ,ತೆರೆಯ ಮೇಲೊಂದು ಜಾದೂ ನಡೀತಿದೆಯೇನೋ ಎಂಬ ಭಾವ ಕೊಡಲಿದೆ ಎಂಬುದು ಚಿತ್ರತಂಡದ ಭರವಸೆ.

ಡಿ ಫ್ಯಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್.ಕುರುಕ್ಷೇತ್ರ ಸಿನಿಮಾ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ನಿರ್ಮಾಪಕ ಮುನಿರತ್ನ.ಫೆಬ್ರವರಿ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here