ಹಣ್ಣುಗಳಲ್ಲೇ ಬಾಳೆಹಣ್ಣು ತುಂಬಾ ಶ್ರೇಷ್ಠ,ಈ ಹಣ್ಣು ತಿನ್ನುವುದಕ್ಕೂ ಕಷ್ಟವಾಗಲ್ಲ ಸಿಪ್ಪೆ ಸುಲಿದು ಬಾಯಿಗೆ ಇಟ್ತರಾಯಿತಷ್ಟೇ, ಇನ್ನು ನೀವು ಪ್ರತಿದಿನ ಬರಿ 2 ಬಾಳೆ ಹಣ್ಣು ತಿಂದರೆ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭ ಇದೆ ಗೊತ್ತಾ ???ನೀವೇ ನೋಡಿನಿಮ್ಮ ದೇಹದ ರಕ್ತದೊತ್ತಡ ಹೆಚ್ಚಾಗಿದ್ರೆ,ಬಾಳೇಹಣ್ಣಿನಲ್ಲಿರುವ ಸುಮಾರು ೪೦೦ ಎಂ ಜಿ ಪೊಟಾಷಿಯಮ್ ನಿಮ್ಮ ದೇಹದ ರಕ್ತದೊತ್ತಡವನ್ನ ಸಾಮಾನ್ಯ ಸ್ತಿತಿಗೆ ತಂದುಬಿಡುತ್ತದೆ.

ನಿಮ್ಮ ತೂಕ ಜಾಸ್ತಿ ಇದ್ದರೆ ಪ್ರತಿದಿನ ಬಾಳೇಹಣ್ಣು ತಿಂದರೆ ಸಾಕು ನಿಮ್ಮ ದೇಹಕ್ಕೆ ಸಿಗಬೇಕಾದ ಪೌಷ್ಟಿಕಾಂಶಗಳು ಸಿಗುತ್ತದೆ ಹಾಗೆಯೇ ನೀವು ಸಣ್ಣ ಆಗುವುದಕ್ಕೂ ಸಹಕಾರಿ.

ಗ್ಯಾಸ್ಟ್ರಿಕ್ ಮತ್ತೆ ಎದೆ ಉರಿ ಇರುವವರು ಬಾಳೆಹಣ್ಣು ತಿನ್ನುವುದರಿಂದ ತುಂಬಾ ಲಾಭ ಇದೆ,ಹಾಗೇನೆ ಬೇಧಿ ಮತ್ತೆ ಅತಿಸಾರದಿಂದ ನರಳುತ್ತಿರುವವರಿಗೆ ಬಾಳೇಹಣ್ಣು ತುಂಬಾ ಒಳ್ಳೆಯದು.

ಈ ಹಣ್ಣಿನಲ್ಲಿ ನಾರಿನಂಶ ಜಾಸ್ತಿ ಇರೋದ್ರಿಂದ,ಒಂದೇ ಸಲಕ್ಕೆ ಎರಡು ಹಣ್ಣು ತಿಂದರೆ ಸಾಕು ತುಂಬ ಹೊತ್ತು ಹಸಿವಾಗಲ್ಲ. ಹಾಗೇನೆ ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿ ಮಾಡಿ,ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಮಾಡುತ್ತೆ.

ದೇಹದ ಕಣಗಳು : ಗ್ಲುಕೋಸ್ ಹಿರಿಕೊಳ್ಳಕ್ಕೆ ಆಗಲ್ಲ, ಆಗ ಮೀದೊಜೀರಕ ಗ್ರಂಥಿ ಜಾಸ್ತಿ ಪ್ರಮಾಣದಲ್ಲಿ ಗ್ಲುಕೋಸ್ ಬಿಡುಗಡೆ ಮಾಡುತ್ತದೆ, ನಮ್ಮ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆ ಆಗುತ್ತಿದೆಯೋ ಇಲ್ಲವೋ ಅನ್ನೋದು ಈ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಬಾಳೇಹಣ್ಣು ಮಾಡುತ್ತೆ.

ಜೀರ್ಣಶಕ್ತಿ ಹೆಚ್ಚಾಗುತ್ತದೆ : ಈ ಬಾಳೆಹಣ್ಣು ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ, ಜೊತೆಗೆ ಹೊಟ್ಟೆ ಕುರುಳಿಗೆ ಯಾವ ರೀತಿಯ ತೊಂದರೆಯೂ ನೀಡಲ್ಲ, ಇದರಲ್ಲಿರೋ ಪಿಷ್ಟ ಹೊಟ್ಟೆಯಲ್ಲಿ ಜೀರ್ಣ ಆಗಲ್ಲ. ಬದಲಾಗಿ ದೊಡ್ಡ ಕರುಳಿನವರೆಗೂ ಹೋಗಿ ಆರೋಗ್ಯಕರ ಬ್ಯಾಕ್ಟೀರಿಯಾಗೆ ಪೌಷ್ಟಿಕಾಂಶ ಕೊಡುತ್ತದೆ.

ವಿಟಮಿನ್ ಕೊರತೆ ಬರಲ್ಲ : ದಿನ ಒಂದು ಬಾಳೇಹಣ್ಣು ತಿಂದರೆ ನಿಮ್ಮ ದೇಹಕ್ಕೆ ಬೇಕಿರೋ ಸುಮಾರು 20% ನಷ್ಟು ವಿಟಮಿನ್ ಬಿ6 ಸಿಗುತ್ತದೆ ಹಾಗು ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದಕ್ಕೆ ಹಾಗು ಆರೋಗ್ಯ ಕಣಗಳು ಹೊಸದಾಗಿ ಬೆಳೆಯುವುದಕ್ಕೆ ಸಹಾಯ ಮಾಡಲಿದೆ.

ನಾವು ಸಾಮಾನ್ಯವಾಗಿ ಕಿತ್ತಳೆ ಹಣ್ಣು, ನೆಲ್ಲಿಕಾಯಿ ಹಾಗು ಸ್ಟ್ರಾಬೇರಿಯಲ್ಲಿ ವಿಟಮಿನ್ ಸಿ ಜಾಸ್ತಿಯಿದೆ ಅಂದುಕೊಂದ್ದೆವು ಆದರೆ ಬಾಳೇಹಣ್ಣಿನಲ್ಲಿ ದಿನನಿತ್ಯ ನಮಗೆ ಬೇಕಿರೋ ಶೇಕಡ 15% ವಿಟಮಿನ್ ಸಿ ಇದೆ.ನಮ್ಮ ದೇಹಕ್ಕೆ ವಿಟಮಿನ್ ಸಿ ತುಂಬಾ ಮುಖ್ಯ ಇದು ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚು ಮಾಡುವುದರ ಜೊತೆಗೆ ಹಾನಿ ಮಾಡೋ ಫ್ರೀ ರಾಡಿಕಲ್ಸ್ ಕಡಿಮೆ ಮಾಡುತ್ತದೆ.ಅಷ್ಟೇ ಅಲ್ಲ ರಕ್ತನಾಳಗಳು ಆರೋಗ್ಯಕರವಾಗಿರುವುದಕ್ಕೆ ಮತ್ತೆ ಕೊಲ್ಯಾಜನ್ ಉತ್ಪತ್ತಿಯಗಕ್ಕೆ ಸಹಾಯ ಮಾಡುತ್ತದೆ.

ದೇಹದಲ್ಲಿ ಶಕ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ ಈಗಿನ ಕಾಲದಲ್ಲಿ ನಾವು ತಿನ್ನೋ ಆಹಾರದಲ್ಲಿ ಯಾವ ರೀತಿಯ ಶಕ್ತಿಯೂ ಸಿಗುವುದಿಲ್ಲ, ಸಮಯಕ್ಕೆ ಸರಿಯಾಗಿ ಊಟನೇ ಮಾಡಲ್ಲ ಇನ್ನು ಶಕ್ತಿ ಎಲ್ಲಿಂದ ಬರಬೇಕು ಹೇಳಿ ??

ಆಗ ಸಹಾಯವಾಗೊದೆ ನಮ್ಮ ಸ್ನೇಹಿತ ಬಾಳೆಹಣ್ಣು ಇದರಲ್ಲಿ ಪೊಟಾಷಿಯಮ್ ಇದೆ,ಹಾಗಾಗಿ ಮಾಂಸಖಂಡ ಬಿಗಿಹಿಡಿಯೋದ್ರಿಂದ ಕಾಪಾಡುತ್ತದೆ ಜೊತೆಗೆ ಇದರಲ್ಲಿರೋ ಕಾರ್ಬೋಹೈದ್ರೆಟ್ಸ್ ಎಂತಹ ಕಷ್ಟದ ಕೆಲಸನಾದ್ರೂ ಮಾಡುವ ಶಕ್ತಿ ಸಾಮರ್ಥ್ಯ ಕೊಡುತ್ತದೆ.

ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ.ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ.

ಇದರಿಂದ ಖಿನ್ನತೆ,ಬೇಜಾರು,ಮುಂತಾದವೆಲ್ಲ ಕಡಿಮೆಯಾಗುತ್ತವೆ. ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ ನೇರವಾಗಿ ಬಾಳೆಹಣ್ಣು ತಿನ್ನುವುದೇ ಒಳ್ಳೇದು ಅಂತ ಡಾಕ್ಟರುಗಳೂ ಒಪ್ತಾರೆ.

ಬಾಳೆಹಣ್ಣು ದೇಹಕ್ಕೆ ಬಹಳ ಶಕ್ತಿ ಕೊಡುತ್ತೆ. ಎರಡೇ ಎರಡು ತಿಂದರೆ ಸಾಕು, 90 ನಿಮಿಷ ಜಿಮ್ಮಲ್ಲಿ ಕಸರತ್ತು ಮಾಡಕ್ಕೆ ಬೇಕಾಗುವಷ್ಟು ಶಕ್ತಿ ಸಿಗುತ್ತೆ. ಕೋತಿಗಳಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತು ತಾನೆ?

ಹಿಂದಿನ ದಿನ ಕುಡಿದಿದ್ದರೆ ಬೆಳಗ್ಗೆ ಬಾಳೆಹಣ್ಣು ತಿನ್ನೋದರಿಂದ ಕುಡಿತದ ಅಮಲು ಕಡಿಮೆಯಾಗುತ್ತೆ. ಯಾಕಂದ್ರೆ ಅದರಲ್ಲಿ ಪೊಟಾಸಿಯಂ ಇರುತ್ತದೆ.

ಮನುಷ್ಯನ DNAಗೂ ಬಾಳೆಹಣ್ಣಿನ DNAಗೂ 50% ಸಾಮ್ಯತೆ ಇರುತ್ತಂತೆ! ಯಾರಿಗಾದರೂ ಬಾಳೆಹಣ್ಣು ಕೊಟ್ಟರೆ ಅದರಲ್ಲಿ ನಮ್ಮ ಅಂಶವೂ ಇರುತ್ತೆ ಅಂತ ಆಯಿತು!

ದೇಹದಲ್ಲಿ ಪೊಟಾಸಿಯಂ ಮಟ್ಟ ಮಿತಿಮೀರಿ ಮನುಷ್ಯ ಸಾಯಕ್ಕೆ 480 ಬಾಳೆಹಣ್ಣು ತಿನ್ನಬೇಕಾಗುತ್ತೆ. ಅಂದರೆ ಎಂತೆಂಥಾ ಹೊಟ್ಟೇಬಾಕರಿಗೂ ಬಾಳೆಹಣ್ಣಿಂದ ಏನೂ ಆಗಲ್ಲ, ಎಷ್ಟು ತಿಂದರೂ ತೊಂದರೆ ಇಲ್ಲ ಅಂತ ಅರ್ಥ

ನೈಸರ್ಗಿಕವಾಗಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒತ್ತಡದಿಂದ ಆಗುವ ಎಲ್ಲಾ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೂ ಇದು ಸಿದ್ಧೌಷಧ. ಅದಕ್ಕೇ ಬಾಳೆಹಣ್ಣು ಪ್ರಪಂಚದಲ್ಲೆಲ್ಲ ಜನ ಇಷ್ಟ ಪಟ್ಟು ತಿನ್ನೋದು.

ಬಾಳೆಹಣ್ಣಲ್ಲಿ ಒಂದು ಚೂರೂ ಕೊಬ್ಬು, ಸೋಡಿಯಂ ಅಥವಾ ಕೊಲೆಸ್ಟ್ರಾಲ್ ಇರೋದಿಲ್ಲ. ಬದಲಾಗಿ ನಾರಿನಂಶ, ವಿಟಮಿನ್ ಸಿ ಮತ್ತು ಬಿ-6, ಪೊಟಾಸಿಯಂ ಮತ್ತು ಮ್ಯಾಂಗನೀಸ್ ಇರುತ್ತವೆ. ಎಂದರೆ ಬಹಳ ಒಳ್ಳೇದು ಅಂತ ಅರ್ಥ!

ಬಾಳೆಹಣ್ಣು ತಿನ್ನೋದರಿಂದ ಹೃದಯಾಘಾತ, ಲಕ್ವಾ ಹೊಡೆಯುವುದು, ಕ್ಯಾನ್ಸರ್ ಬರುವುದುಇವೆಲ್ಲದರ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಯಾಕೆ ಕಾಯ್ತಿದೀರಿ? ಬೇರೆಬೇರೆ ರೀತಿಯಲ್ಲಿ ಹಣ್ಣು ತಿನ್ನೋ ಪ್ರಯೋಗಗಳನ್ನ ಮಾಡಿ!

ಬಾಳೆಹಣ್ಣಲ್ಲಿ 75% ನೀರು ತುಂಬಿರುತ್ತದೆ! ಗೊತ್ತಾಗುವುದೇ ಇಲ್ಲ,ಅಲ್ಲವಾ?ಪ್ರಪಂಚದ 100ಕ್ಕಿಂತ ಹೆಚ್ಚು ದೇಶಗಳಲ್ಲಿ ಬಾಳೆಹಣ್ಣು ಬೆಳೆಯುತ್ತದೆ. ಸುಮಾರು 300 ಬೇರೆಬೇರೆಯ ತಳಿಗಳು ಸಿಗುತ್ತವೆ.

ಬಾಳೆಗಿಡ ನಿಜಕ್ಕೂ ಒಂದು ಗಿಡ. 20-25 ಅಡಿ ಎತ್ತರ ಬೆಳೆದರೂ ಇದನ್ನ ಮರ ಅನ್ನೋದಕ್ಕೆ ಆಗಲ್ಲ, ಯಾಕಂದರೆ ಬೇರೆ ಮರದಂತೆ ಇದಕ್ಕೆ ಮರದ ಕಾಂಡ ಇರೋದಿಲ್ಲ, ದಿಂಡಿರುತ್ತದೆ. ಅಷ್ಟೇ ಅಲ್ಲ, ದಿಂಡನ್ನು ಕೂಡ ನಾವು ತಿನ್ತೀವಿ.ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಮೇಲಿನ ಹಲವು ಒಳ್ಳೆಯ ಅಂಶಗಳ ಲಾಭ ಪಡೆದುಕೊಳ್ಳಬಹುದು

ಪ್ರತಿದಿನ ಬಾಳೇಹಣ್ಣು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಲಾಭ ನೋಡಿ.. ಇಂದಿನಿಂದಲೇ ಪ್ರತಿದಿನ ಎರಡೆರಡು ಬಾಳೇಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.. ಉಪಯೋಗವೆನಿಸಿದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here