ರಾಕಿಂಗ್ ಸ್ಟಾರ್ ಯಶ್ ಸದ್ಯ ಭಾರತ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಕನ್ನಡದ ತಾರೆ,ಕೆಜಿಎಫ್ ಟ್ರೈಲರ್ ನಿಂದ ಪರಭಾಷಾ ನಿರ್ದೇಶಕರು,ನಿರ್ಮಾಪಕರು,ಮತ್ತು ಪ್ರೇಕ್ಷಕರನ್ನ ಸೆಳೆಯುತ್ತಿರುವ ನಟ.

ಈ ಹಿಂದೆ ಸ್ಥಳೀಯ ಚಿತ್ರಗಳು ಹಿಂದಿ ಸಿನಿಮಾ ರಂಗದಲ್ಲಿ ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ ಆದ್ರೆ ಜಗತ್ತೇ ಸೌತ್ ಸಿನಿಮಾ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಭಾಹುಬಲಿ ಎಸ್.ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಎಲ್ಲಾ ರೆಕಾರ್ಡ್ ಗಳನ್ನ ಪುಡಿ ಮಾಡಿತ್ತು.

ಈ ಮದ್ಯೆ ಎಸ್ ಎಸ್ ರಾಜಮೌಳಿ ಕೆಜಿಎಫ್ ಟ್ರೈಲರ್ ನೋಡಿ ಫಿದಾ ಆಗಿದ್ದಾರಂತೆ.!!

ಸದ್ಯ,ಬಾಹುಬಲಿ ಚಿತ್ರದಂತೆ ಹವಾ ಮಾಡ್ತಿರುವ ಈ ಸಿನಿಮಾ ಮೇಕಿಂಗ್ ವಿಷ್ಯಕ್ಕೆ ಗಮನ ಸೆಳೆಯುತ್ತಿದೆ.ಹೀಗಾಗಿ,ಸ್ಟಾರ್ ಡೈರೆಕ್ಟರ್ ರಾಜಮೌಳಿ,ಕೆಜಿಎಫ್ ಚಿತ್ರಕ್ಕೆ ಎಷ್ಟು ಮಾರ್ಕ್ಸ್ ಕೊಡ್ತಾರೆ, ಏನ್ ಹೇಳ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಯಶ್ ಹಾಗೂ ರಾಜಮೌಳಿ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ್ದಾರೆ.

ಕೆಜಿಎಫ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರು ಮುಖಾಮುಖಿ ಆಗಲಿದ್ದು,ಈ ವೇಳೆ ಏನಾದರೂ ಹೊಸ ಸಿನಿಮಾ ಮಾಡುವ ಬಗ್ಗೆ ಅಥವಾ ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆಯಾಗಬಹುದು ಎಂಬ ಕುತೂಹಲವೂ ಇದೆ.

ಈ ಹಿಂದೆ ಯಶ್ ಅವರಿಗೆ ತಮ್ಮ ಚಿತ್ರದಲ್ಲಿ ನಟಿಸುವ ಆಫರ್ ಮಾಡಿದ್ದಾರೆ ಎನ್ನಲಾಗಿತ್ತು. ಆರ್.ಆರ್.ಆರ್ (RRR) ರಾಮ್ ಚರಣ್ ತೇಜ,ಎನ್.ಟಿ.ಆರ್ ಹಾಗೂ ರಾಜಮೌಳಿ ಜೋಡಿಯಲ್ಲಿ ಬರ್ತಿರುವ ಸಿನಿಮಾದಲ್ಲಿ ಯಶ್ ವಿಲನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಯ್ತು,ಆದರೆ ಯಶ್ ಇದನ್ನ ತಳ್ಳಿಹಾಕಿದ್ದರು.

ಕೆಜಿಎಫ್ ಸಿನಿಮಾದ ಎರಡನೇ ಟ್ರೈಲರ್ ಮೊದಲ ಟ್ರೈಲರ್ ಗಿಂತಲೂ ಸದ್ದು ಮಾಡುತ್ತಿದೆ ಈ ಮದ್ಯೆ ತೆಲುಗಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.ಡಿಸೆಂಬರ್ 9 ರಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಬಾಹುಬಲಿ ಖ್ಯಾತಿಯ ರಾಜಮೌಳಿ ಮುಖ್ಯ ಅತಿಥಿಯಾಗಿ ಬರಲಿದ್ದಾರೆ,ಇದನ್ನ ಸ್ವತಃ ನಿರ್ಮಾಪಕರೇ ಖಚಿತಪಡಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ರ ಕೆಜಿಎಫ್ ಕನ್ನಡ,ಹಿಂದಿ,ತಮಿಳು,ತೆಲಗು,ಮಲಯಾಳಂ ಭಾಷೆಯಲ್ಲಿ ಒಟ್ಟಿಗೆ ಡಿಸೆಂಬರ್ 21ರಂದು ದೇಶಾದ್ಯಂತ ರಿಲೀಸ್ ಆಗಲಿದೆ.ತನ್ನ ಮೇಕಿಂಗ್ ನಿಂದಲೇ ಸಡ್ಡು ಮಾಡುತ್ತಿರುವ ಕೆಜಿಎಫ್ ಚಿತ್ರಕ್ಕೆ ಎಸ್ ಎಸ್ ರಾಜಮೌಳಿ ಏನು ಹೇಳಲ್ಲಿದ್ದಾರೆ ಎಂದು ಕಾಡುನೋಡಬೇಕಾದೆ.

ಸುದೀಪ್ ರಂತೆ ಯಶ್ ಕೂಡಾ ರಾಜಮೌಳಿ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here