ಕನ್ನಡ ಚಿತ್ರರಂಗದಲ್ಲಿ ಈಗ ಎಲ್ಲರಿಗಿಂತ ಹೆಚ್ಚು ಸದ್ಧು ಮಾಡುತ್ತಿರುವುದು ನಟಿಯರ ಸಂಭಾವನೆ ವಿಷಯ.ಇಷ್ಟು ವರ್ಷಗಳಿಂದ ಬರಿ ರಮ್ಯಾ ಒಬ್ಬರೇ ಹೆಚ್ಚು ಸಂಭಾವನೆ ಪಡೆಯುತ್ತಿದ್ದು ಮೊನ್ನೆಯಷ್ಟೇ ಕಿರಿಕ್ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ ಅವರು ಹೆಚ್ಚು ಸಂಭಾವನೆ ಪಡೆದು ನಟಿ ರಮ್ಯಾ ದಾಖಲೆಯನ್ನೇ ಮುರಿದುಬಿಟ್ಟರು.

ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗಕ್ಕೆ ಹೋದ ಮೇಲೆ ಅವರ ಸಂಭಾವನೆ ಇನ್ನು ಹೆಚ್ಚಾಗಿದೆ,ಅಂದಹಾಗೆ ಅವರು ಮೊನ್ನೆ ಅವರು ಪೊಗರು ಚಿತ್ರಕ್ಕೆ ಬರೋಬ್ಬರಿ ಅರವತ್ತು ಲಕ್ಷ ಸಂಭಾವನೆ ಪಡೆದು ನಟಿ ರಮ್ಯಾ ಅವರನ್ನೇ ಹಿಂದಿಕ್ಕಿದ್ದು ನಿಮಗೆಲ್ಲಾ ಗೊತ್ತಿರುವ ವಿಷಯವೇ ಸರಿ.

ಇದೀಗ ನಾವು ಹೇಳ ಹೊರಟಿರುವುದು ನಟಿ ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ.ಇದು ಚಂದನವನದ ನಟಿಮಣಿಯರೆಲ್ಲ ಓದಲೇಬೇಕಾದ ವೆರಿ ವೆರಿ ಇಂಟರೆಸ್ಟಿಂಗ್ ಸ್ಟೋರಿ.ಈ ಸುದ್ದಿ ಕೇಳಿ ಗಾಂಧೀನಗರದ ನಿರ್ಮಾಪಕರು ಹೌಹಾರಿದ್ರು ಅಚ್ಚರಿ ಏನಿಲ್ಲ ಬಿಡಿ.ಯಾಕಂದ್ರೆ ಸ್ವೀಟಿ ರಾಧಿಕಾ ಸಂಭಾವನೆ ಕೇಳಿದ್ರೆ ಇದು ಎಲ್ಲರ ಕಾಮನ್ ರಿಯಾಕ್ಷನ್ ಆಗಿರುತ್ತೆ.

ರಾಧಿಕಾ ಕುಮಾರಸ್ವಾಮಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ಕೋಟಿ ಗಡಿ ಮುಟ್ಟಿದ್ದಾರೆ.ವೈರಾ ಚಿತ್ರ ಖ್ಯಾತಿಯ ನಟ ನವರಸನ್ ನಿರ್ದೇಶನದ ಮೊದಲ ಚಿತ್ರ ದಮಯಂತಿ ಚಿತ್ರದಲ್ಲಿ ರಾಧಿಕಾ ನಟಿಸುತ್ತಿದ್ದಾರೆ.ಈಗಾಗಲೇ ಫಸ್ಟ್ ಲುಕ್ ಮೂಲಕ ಎಂಟ್ರಿ ಕೊಟ್ಟಿರೋ ದಮಯಂತಿ ಟಾಲಿವುಡ್​​ ಅರುಂಧತಿಯನ್ನು ನೆನಪಿಸಿದ್ದು ನಿಮ್ಗೆ ಗೊತ್ತೆ ಇದೆ.

ಲೇಟೆಸ್ಟ್ ಸ್ಟೋರಿ ಏನಪ್ಪಾ ಅಂದ್ರೆ ಇದೇ ಸಿನಿಮಾಗೆ ಸ್ವೀಟಿ ಬರೋಬ್ಬರಿ ಒಂದು ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಅನ್ನೋ ಸುದ್ದಿ ಬೇಜಾನ್ ಸದ್ದು ಮಾಡುತ್ತಿದೆ.ಅಷ್ಟೇ ಅಲ್ಲ ಈಗಾಗಲೇ 80 ಲಕ್ಷ ಸ್ವೀಟಿ ಅಕೌಂಟ್ ಕೂಡ ಸೇರಿದೆಯಂತೆ.ಇತ್ತೀಚೆಗೆ ರಶ್ಮಿಕಾ ಮಂದಣ್ಣ ಪೊಗರು ಚಿತ್ರಕ್ಕೆ 60 ಲಕ್ಷ ಸಂಭಾವನೆ ಪಡೆಯೋ ಮೂಲಕ ಸ್ಯಾಂಡಲ್​​​ವುಡ್​ನಲ್ಲಿ ಗರಿಷ್ಠ ಸಂಭಾವನೆ ಪಡೆದ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ರು.ಈ ಮೂಲಕ ಮೋಹಕ ತಾರೆ ರಮ್ಯ ಅವರ ಸಂಭಾವನೆಯನ್ನು ಮೀರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು ಸಾನ್ವಿ.ಆದ್ರೀಗ ರಾಧಿಕಾ ಕುಮಾರಸ್ವಾಮಿ ಸಂಭಾವನೆ ಸಾನ್ವಿ ಸಂಭಾವನೆ ಮೀರಿಸಿದೆ.

ಯಾಕಿಷ್ಟು ಸಂಭಾವನೆ ಗೊತ್ತೇ:

ಈ ಬಗ್ಗೆ ದಮಯಂತಿ ನಿರ್ದೇಶಕ ಮತ್ತು ನಿರ್ಮಾಪಕ ನವರಸನ್ ಕೇಳಿದ್ರೆ ಇದು ನಾಯಕಿ ಪ್ರಧಾನ ಚಿತ್ರ. ರಾಧಿಕಾ ಪಾತ್ರದಲ್ಲಿ ಬಹಳ ವಿಶೇಷತೆ ಇದೆ ಇದರಿಂದಾಗಿ ಸಂಭಾವನೆ ಹೆಚ್ಚು ಕೊಟ್ಟಿರೊದು ನಿಜ.ಈ ಸಂಭಾವನೆಯನ್ನ ಚಂದನವನದಲ್ಲಿ ಇಲ್ಲಿವರೆಗೆ ಬಂದ ಯಾವ ಸ್ಟಾರ್ ನಟಿಯೂ ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ದಮಯಂತಿ ಕಥೆಯನ್ನ ಅರುಂಧತಿ ಅನುಷ್ಕಾ ಶೆಟ್ಟಿಗೆ ಮಾಡಿದ್ದಂತೆ ಅವ್ರ ಡೇಟ್ಸ್ ಸಿಗದೇ ದಮಯಂತಿ ಪಾತ್ರ ರಾಧಿಕಾ ಕುಮಾರಸ್ವಾಮಿ ಕೈಸೇರಿತು ಹಾಗಾಗಿ ಇಷ್ಟೊಂದು ಸಂಭಾವನೆ ಅಂತಿದ್ದಾರೆ.

ಇದೀಗ ದಮಯಂತಿ ಚಿತ್ರಕ್ಕಾಗಿ ಒಂದು ಕೋಟಿ ಪಡೆಯುವ ಮೂಲಕ ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ನಟಿ ಎಂಬ ಕೀರ್ತಿಗೆ ಪಾತ್ರವಾಗಲಿದ್ದಾರೆ.

LEAVE A REPLY

Please enter your comment!
Please enter your name here