ಮೊದಲು ಹುಡುಗನಾಗಿದ್ದ ಡಾ.ಜಿ ಪರಮೇಶ್ವರ್ ಪುತ್ರ ಶಶಾಂಕ್,ಕಳೆದ ವರ್ಷ ತಾನೆ ಯುವತಿಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡು,ತಮ್ಮ ಹೆಸರನ್ನು ಶನಾ ಪರಮೇಶ್ವರ್ ಅಂತಾ ಬದಲಿಸಿಕೊಂಡಿದ್ದರು.ಸದ್ಯಕ್ಕಂತೂ ತಮ್ಮ ಹೊಸ ಲಿಂಗವನ್ನು,ಹೊಸ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡ್ತಿರೋ ಶನಾ,ಸ್ವರ್ಗಕ್ಕೇ ಕಿಚ್ಚು ಹಚ್ಚುವ ಹಾಗಿ ಲೈಫ್​​ನ ಕಳೆಯುತ್ತಿರೋದು ಸುಳ್ಳಲ್ಲ.

ಕಾರ್ ಕ್ರೇಜ್

ಹೌದು ಶನಾ ಅವರಿಗೆ ಕಾರ್ ಅಂದ್ರೆ ತುಂಬಾನೇ ಇಷ್ಟ.ಅದರಲ್ಲೂ ಅವ್ರ ಪೊರ್ಶೆ ಕಾರ್ ಅಂದ್ರೆ ಸಕತ್ ಲವ್.ಅವರಿಗೆ ಡ್ರೈಫ್ಟಿಂಗ್ ಕ್ವೀನ್ ಅಂತಾ ಬಿರುದನ್ನೂ ನೀಡಲಾಗಿದೆ

ಆಡಿ,ಪಾರ್ಶೆ,ಜಾಗ್ವಾರ್ ಹೀಗೆ ಹಲವು ಹೈ ಎಂಡ್ ಕಾರ್​​ನಲ್ಲಿ ಓಡಾಡೋ ಶನಾ,ಬೆಂಗಳೂರು ರೋಡ್​ನಲ್ಲಿ ಕಾರ್​ ಡ್ರಿಫ್ಟ್,ಸಡನ್ ಯೂ ಟರ್ನ್,ಸ್ಪೀಡ್ ಡ್ರೈವ್ ಹೀಗೆ ಹಲವು ಹತ್ತು ಸ್ಟಂಟ್​ಗಳನ್ನ ಮಾಡ್ತಾರೆ ಅಂದರೆ ನಂಬಲೇಬೇಕು.ಅದೂ ಕೂಡ ಪ್ರೊಫೆಷನಲ್ ಡ್ರೈವಿಂಗ್ ಜೊತೆಗೆ ಅದನ್ನು ಯೂಟ್ಯೂಬ್​ ಚಾನೆಲ್​ನಲ್ಲಿ ಹಾಕಲಾಗಿದ್ದು,ಡ್ರೈವ್ ಲೈಕ್ ಶನಾ ಅಂತಾ ಟ್ಯಾಗ್​ ಲೈನ್ ಕೂಡ ಕೊಡಲಾಗಿದೆ.

ಇದೀಗ ರಸ್ತೆಯಲ್ಲಿ ಕಾರ್ ಡ್ರಿಫ್ಟ್ ಮಾಡುವ ವಿಡಿಯೋ ವೈರಲ್ ಆಗಿದೆ,ರಸ್ತೆಯಲ್ಲಿ ಅಡ್ಡಾದಿಡ್ಡಿ ಯಾಗಿ ಓಡಿಸುವ ಈ ವಿಡಿಯೋ ಸದ್ಯ ಚರ್ಚೆಯ ಕೇಂದ್ರಬಿಂದುವಾಗಿದೆ,ಸಾಮಾನ್ಯ ಜನರು ಈ ರೀತಿಯಾಗಿ ಕಾರ್ ಗಳನ್ನು ಡ್ರೈವ್ ಮಾಡೋ ಹಾಗೆ ಇಲ್ಲ ಹಾಗೂ ಇದೊಂದು ಅಪರಾಧ.

ಶನಾ ರ್‍ಯಾಷ್ ಡ್ರೈವ್ ಮಾಡುತ್ತಿರುವ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ ಬೆಂಗಳೂರು ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡಬೇಕಿದೆ.

LEAVE A REPLY

Please enter your comment!
Please enter your name here