ಗೇಮಿಂಗ್ ಪ್ರಿಯರ ನೆಚ್ಚಿನ ಶೂಟಿಂಗ್ ಗೇಮ್ ಪಬ್-ಜಿ, ಇದೊಂದು ಯುದ್ಧದ ಆಟ ಹಾಗೂ ನೈಜತೆಗೆ ಹತ್ತಿರವಾಗಿ ರೂಪಿಸಲಾಗಿರುವ ಗೇಮ್ ಇದಾಗಿದ್ದು ಇಲ್ಲಿ ಯುದ್ಧ ಭೂಮಿಯಲ್ಲಿ ನಡೆಯುವ ಕಾಳಗದಂತೆ ಭಾಸವಾಗುತ್ತದೆ.

ಪಬ್-ಜಿಯ ವಿಶೇಷತೆಯೇ ಅದರ ಗ್ರಾಫಿಕ್ಸ್ , ನೈಜತೆಗೆ ಹತ್ತಿರವಾಗಿರುವ ಇದರ ಗಾರ್ಫಿಕ್ಸ್ ಗೇಮಿಂಗ್ ಪ್ರಿಯರ ಮನವನ್ನ ಗೆದ್ದಿದೆ.ಈ ಗೇಮ್ ನಲ್ಲಿ ಒಮ್ಮೆ ನಾಲ್ವರು ಜೊತೆಗೂಡಿ ಆಡಬಹುದು,100 ಜನ ಒಂದೇ ವಿಮಾನದಿಂದ ಜಿಗಿದು ತಮಗೆ ಬೇಕಾದ ಸಲಕರಣೆಗಳನ್ನು ತೆಗೆದುಕೊಳ್ಳುತ್ತಾರೆ.

ಅಲ್ಲಿ ಸಿಕ್ಕ ಶಸ್ತ್ರಗಳನ್ನ,ಮೆಡಿಕಲ್ ಕಿಟ್​​ಗಳನ್ನ,ಯುದ್ಧಕ್ಕೆ ಅಗತ್ಯ ವಸ್ತುಗಳನ್ನಆಯ್ದುಕೊಂಡು ಮುಂದುವರೀತಾರೆ.ಅವರು ಇಳಿದ ಜಾಗದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ.ಆಗ ಅಲ್ಲಿರುವ ನೂರಾರು ಜನರ ನಡುವೆ ಹೋರಾಡಿ ಉಳಿದರೆ ಗೆದ್ದಂತೆ,ಮೃತಪಟ್ಟರೆ ಸೋತಂತೆ.

ವಿಶೇಷ ಅಂದ್ರೆ ಈ ಯುದ್ಧ ಭೂಮಿಯ ಆಟದಲ್ಲಿ ಪರಸ್ಪರ ಮಾತಾಡಿಕೊಂಡು ಮುಂದಿನ ನಡೆಗಳ ಬಗ್ಗೆ ಚರ್ಚಿಸಬಹುದು,ಇದು ತಂತ್ರಜ್ಞಾನವನ್ನ ಬಹಳ ದೊಡ್ಡಮಟ್ಟದಲ್ಲಿ ಸದುಪಯೋಗ ಮಾಡಿಕೊಂಡಿದೆ ಅಂದ್ರೆ ತಪ್ಪಿಲ್ಲ.

ಸದ್ಯ ಭಾರತದಲ್ಲಿ ಭಾರಿ ಟ್ರೆಂಡಿಂಗ್ ನಲ್ಲಿರುವ ಈ ಗೇಮ್ ಇದೀಗ ಒಂದು ಕುಖ್ಯಾತಿಗೆ ಗುರಿಯಾಗಿದೆ.ಪಬ್ ಜಿ ಆಡುವವರಲ್ಲಿ ನಿದ್ರಾಹೀನತೆ,ಮಾನಸಿಕವಾಗಿ ದುರ್ಬಲ ಹೊಂದುವ ಅನೇಕ ಜನ ಇಂದು ನಿಮಾನ್ಸ್ಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ಪಬ್-ಜಿ ಗೇಮ್ ಆಡುವವರು ಬಹುಪಟ್ಟು ಯುವಕರೇ,ಕಳೆದ ಮೂರು ತಿಂಗಳಲ್ಲಿ ನಿಮ್ಹಾನ್ಸ್ ನ ಮಾನಸಿಕ ಆರೋಗ್ಯ ವಿಭಾಗದಲ್ಲಿ 120 ಕೇಸ್ ಗಳು ಪಬ್​ಜಿಯಿಂದಾಗಿ ದಾಖಲಾಗಿದೆ. ಪಬ್‌-ಜೀ ಗೇಮ್‌ಗೆ ಅಡಿಕ್ಟ್ ಆದವರು ನಿಮ್ಹಾನ್ಸ್‌ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ ಅನ್ನೋ ಬೆಚ್ಚಿಬೀಳುವ ಮಾಹಿತಿ ಹೊರಬಿದ್ದಿದೆ.

LEAVE A REPLY

Please enter your comment!
Please enter your name here