ರಕ್ಷಿತ್​ ಶೆಟ್ಟಿ,ರಶ್ಮಿಕಾ ಮಂದಣ್ಣ ಬ್ರೇಕ್​ಅಪ್​ ಸುದ್ದಿ ಸದ್ಯದ ಸ್ಯಾಂಡಲ್ವುಡ್ ಹಾಟ್ ಟಾಪಿಕ್.ಕಿರಿಕ್​ ಪಾರ್ಟಿ ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್​,ರಶ್ಮಿಕಾ ಈಗ ಬೇರೆಬೇರೆಯಾಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾ ಇಬ್ಬರು ಸೆಲೆಬ್ರಿಟಿಗಳ ಹಿಂದೆ ಬಿದ್ದಿದ್ದವು.

ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾವನ್ನು ನೋಡಬೇಕೆಂಬ ಕಾತುರವನ್ನು ವ್ಯಕ್ತಪಡಿಸಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ರಶ್ಮಿಕಾ ಮಂದನ್ನ ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಕನ್ನಡಿಗರ ಮನ ಗೆದ್ದ ಚಲುವೆ.

ಕಿರಿಕ್ ಪಾರ್ಟಿ ಚಿತ್ರ ಮೂಲಕ ರಕ್ಷಿತ್ ಹಾಗೂ ರಶ್ಮಿಕಾ ಜೋಡಿ ಪ್ರೀತಿಸಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.ಆದರೆ ಕೆಲ ಕಾರಣಾಂತರಗಳಿಂದ ಇವರಿಬ್ಬರ ಸಂಬಂಧ ಮುರಿದು ಬಿತ್ತು.ಇದರಿಂದ ಇವರಿಬ್ಬರು ದೂರವಾಗಿದ್ದರು.

ಇದೀಗ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದ ಸಚಿನ್ ರವಿಯರು ರಶ್ಮಿಕಾ ಮಂದಣ್ಣರವರ ಆತ್ಮೀಯ ಸ್ನೇಹಿತರಾಗಿದ್ದರಿಂದ ಸಚಿನ್ ರವಿರವರ ಹುಟ್ಟುಹಬ್ಬದ ಸಲುವಾಗಿ ರಶ್ಮಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದರ ಜೊತೆಗೆ ನಾನು ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದೇನೆಂದು ಹಂಚಿಕೊಂಡಿದ್ದಾರೆ.

ಇದೀಗ ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದ್ದು, ರಶ್ಮಿಕಾ ಮತ್ತು ರಕ್ಷಿತ್ ಮತ್ತೆ ಒಂದಾಗುತ್ತಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

LEAVE A REPLY

Please enter your comment!
Please enter your name here