ಅಂಬರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ,ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ಧಾವಿಸಿದರು.ಚಿತ್ರರಂಗ ಮತ್ತು ರಾಜಕೀಯ ರಂಗದ ದಿಗ್ಗಜರು ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸಿದರು.ಆದರೆ ಕನ್ನಡದ ಖ್ಯಾತ ನಟಿ ಹರ್ಷಿಕಾ ಪೂಣಚ್ಚಗೆ ಅಂಬಿ ನಿಧನರಾಗಿದ್ದೆ ಗೊತ್ತಿಲ್ವಂತೆ.ಹೀಗಂತಾ ಅವರೇ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.ಹರ್ಷಿಕಾ ಅವರು ನವೆಂಬರ್ 23 ರಿಂದ ನೇಟ್ವರ್ಕ್ ಇಲ್ಲದ ಜಾಗದಲ್ಲಿ ಶೂಟಿಂಗ್ ನಲ್ಲಿ ನಿರತರಾಗಿದ್ದರಂತೆ.

ಆದ್ರೆ ಹರ್ಷಿಕಾ ನ 25 ರಂದೆ ಟ್ವಿಟ್ ಮಾಡಿ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು,ಹೌದು ಹರ್ಷಿಕಾ ಟ್ವಿಟ್ ಗೆ ಅಭಿಮಾನಿಗಳು ಗರಂ ಆಗಿದ್ದಾರೆ.

ಎಷ್ಟು ಚೆನ್ನಾಗಿ ನಟನೆ ಮಾಡ್ತಿ ಇದಿಯಾ ಅಲ್ವಾ.ಅಕೌಂಟ್ ಹ್ಯಾಕ್ ಆಗಿತ್ತು ಅಂತ ಮಾತ್ರ ಹೇಳ್ಬೆಡ ಈಗ.ಬರುವುದಕ್ಕೆ ಆಗದೆ ಇದ್ರೆ ಸುಮ್ಮನಿದ್ದು ಬಿಡಬೇಕು,ಅದ ಬಿಟ್ಟು ತಿರಿಕೊಂಡಿದ್ದು ಗೊತ್ತೆ ಇಲ್ಲ ಅಂದ್ರೆ ಹೇಗೆ. ಸಂತಾಪ ಸೂಚಿಸಿ ಅವತ್ತು ನಿಮ್ಮ ಖಾತೆಯಿಂದ ಟ್ವಿಟ್ ಮಾಡಿದ್ದು ಯಾರು.ಟ್ವಿಟ್ ಮಾಡೊವಾಗ ಅವರಿಗೆ ಹೇಗೆ ನೆಟ್ವರ್ಕ್ ಸಿಕ್ತು???

 

LEAVE A REPLY

Please enter your comment!
Please enter your name here