ಇಬ್ಬರು ಬಾಲ ಜೈನ ಮುನಿಗಳಾದ ನೇಮಿಚಂದ್ರ ಸಾಗರ್ ಮಹಾರಾಜ್ ಸಾಹೇಬ್ ಹಾಗೂ ನೇಮಿಚಂದ್ರ ಮಹಾರಾಜ್ ಸಾಹೇಬ್ ಅವರು ಸೂರತ್ ನಿಂದ ಕಾಲ್ನಡಿಗೆಯಲ್ಲೆ ಬೆಂಗಳೂರಿಗೆ ಆಗಮಿಸಿದ್ದಾರೆ.ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ್ದಾರೆ.

ಇವರ ನೆನಪಿನ ಶಕ್ತಿ 4ಜಿ ಸ್ಪೀಡ್ ಗಿಂತಲೂ ಫಾಸ್ಟ್.

ಅಚ್ಚರಿ ಆದ್ರೂ ಸತ್ಯ,ಅತ್ಯಂತ ಕಿರಿ ವಯಸ್ಸಿನ ಈ ಜೈನ ಮುನಿಗಳು ತಮ್ಮಲ್ಲಿರುವ ಅತ್ಯಂತ ವಿಶಿಷ್ಟವಾದ ನೆನಪಿನ ಶಕ್ತಿಯ “ಶಾತವಾದನ” ಎಂಬ ಕೌಶಲ್ಯ ವನ್ನು ಈ ಅವಳಿ ಸನ್ಯಾಸಿಗಳು ಸಾದರಪಡಿಸಲ್ಲಿದ್ದಾರೆ.ಶಾತವಾದನ ಇದೊಂದು ವಿಶಿಷ್ಟ ಕೌಶಲ್ಯ ಅಂದ್ರೆ ಏಕ ಕಾಲಕ್ಕೆ 100 ವಿಷಯಗಳನ್ನ ನೆನಪಿಟ್ಟುಕೊಳ್ಳುವುದು.

ಈ ವಿಶಿಷ್ಟ ಕೌಶಲ್ಯವನ್ನ ಬಾಲ ಮುನಿಗಳು ಇಲ್ಲಿ ಪ್ರಸ್ತುತ ಪಡಿಸಲಿದ್ದಾರೆ.ಬಾಲ ಮುನಿಗಳಿಗೆ 100 ಪದಸಮುಚ್ಚಯ,ವಸ್ತು,ಹಾಗೂ ಹೆಸರುಗಳನ್ನ ಕೊಟ್ಟರು ಅವ್ರು ಅದನ್ನ ನೆನಪಿನಲ್ಲಿ ಇಟ್ಟುಕೊಂಡು ಹೇಳುತ್ತಾರೆ ಹಾಗೆಯೇ ಅದನ್ನು ಹಿಂದೆಯಿಂದ (ರಿವರ್ಸ್ ಒರ್ಡರ್)ಹೇಳುವ ಸಾಮರ್ಥ್ಯ ಹೊಂದಿದ್ದಾರೆ.ಜೈನ ಗ್ರಂಥದ 5000 ಶ್ಲೋಕ, ಭಗವದ್ಗೀತೆ,ಬೈಬಲ್​,ಕುರಾನ್​, ಶ್ರೀಗುರು ಗ್ರಂಥ ಸಾಹೇಬ್​ ಶ್ಲೋಕಗಳನ್ನು ಈ ಬಾಲ ಸನ್ಯಾಸಿಗಳು ಮನದಟ್ಟು ಮಾಡಿಕೊಂಡಿದ್ದಾರೆ.

ಇಂಗ್ಲಿಷ್​,ಸಂಸ್ಕೃತ, ಪ್ರಾಕೃತ್​,ಹಿಂದಿ,ಮರಾಠಿ,ಗುಜರಾತಿ,ಪಂಜಾಬ್​, ಕನ್ನಡ, ಮಾರ್ವಾಡಿ ಮತ್ತು ಉರ್ದು ಭಾಷೆಯಲ್ಲಿ ಪರಿಣತಿ ಹೊಂದಿದ್ದಾರೆ.ಪೂರ್ವಾಶ್ರಮದಲ್ಲಿ ದೃವ ಹಾಗೂ ದೈರ್ಯ ಎಂಬ ಹೆಸರಿನ ಈ ಅವಳಿ ಮುನಿಗಳು ಗುಜಾರಿತಿನ ವಜ್ರದ ವ್ಯಾಪಾರಿಯಾದ ಪಿಯೂಷ್ ಮೆಹ್ತಾ ಅವರ ಮಕ್ಕಳು.

ಅತಿ ಚಿಕ್ಕ ಯಸ್ಸಿನಲ್ಲೇ ಆಧ್ಯಾತ್ಮ ಮಾರ್ಗವನ್ನು ಹಿಡಿದಿರುವ ಇವರು 10 ಭಾಷೆಗಳ ಜೊತೆಗೆ ಕನ್ನಡದ ವಚನಗಳನ್ನು ಕೂಡ ಕಲಿತಿದ್ದಾರೆ.2017ರಲ್ಲಿ ಜೈನ ಧೀಕ್ಷೆ ಪಡೆದ ಇವರು ಅಂದಿನಿಂದಲೆ ಹೊರಗಿನ ಆಹಾರ, ಕೃತಕ ಬೆಳಕಿನ ಬಳಕೆ, ಮೊಬೈಲ್​ಗಳ ಬಳಕೆ ಸೂರ್ಯಾಸ್ತದ ನಂತರ ಊಟ ಉಪಹಾರಗಳನ್ನು ತ್ಯಜಿಸಿದ್ದಾರೆ.

LEAVE A REPLY

Please enter your comment!
Please enter your name here