ಹೌದು ಎಲ್ಲರಲ್ಲೂ ಈ ಒಂದು ಕುತೂಹಲ ಇದ್ದೇ ಇರತ್ತೆ ಯಾಕಂದ್ರೆ ಪ್ರಧಾನಿಯವರ ಬಳಿ ಅಥವಾ ಅವರ ಬಾಡಿಗಾರ್ಡ್ ಹತ್ತಿರ ಕಪ್ಪು ಬ್ರಿಫ್ ಕೇಸ್ ಇದ್ದೆ ಇರುತ್ತದೆ,ಎಲ್ಲರಲ್ಲೂ ಈ ಪ್ರಶ್ನೆಗಳು ಕುತೂಹಲವನ್ನು ಮೂಡಿಸಿರುತ್ತದೆ.

ಯಾಕೆ,ಏನು ಅನ್ನೋ ನಿಮ್ಮ ಪ್ರಶ್ನೆಗಳಿಗೆ ಉತ್ತರ ಮುಂದೆ ಹೇಳುತ್ತ ಹೋಗುತ್ತೇವೆ ನೋಡಿ.ಪ್ರಧಾನಿಯವರ ಬಳಿ ಇರುವಂತ ಬಾಡಿಗಾರ್ಡ್ ಗಳು SPG – ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಕಮಾಂಡೋಗಳಾಗಿದ್ದಾರೆ.ಇವರುಗಳು ಪ್ರಧಾನಮಂತ್ರಿ,ಮಾಜೀ ಪ್ರಧಾನಮಂತ್ರಿಗಳು ,ಹಾಗು VVIP ಗಳ ಸಂಪೂರ್ಣ ಸುರಕ್ಷತೆಯ ಜವಾಬ್ದಾರಿವಹಿಸುವುದು ಇವರ ಸಂಪೂರ್ಣ ಕರ್ತವ್ಯವಾಗಿದೆ.

ಕಮಾಂಡೋರ್ಗಳ ಆಯ್ಕೆ ವಿಧಾನ ಯಾವ ರೀತಿಯಲ್ಲಿರುತ್ತದೆ ಗೊತ್ತ ?

ಇವರನ್ನು CRPF , RPF ಮುಂತಾದ ಅರ್ಧಸೈನಿಕ ವಿಭಾಗದಿಂದ ಆಯ್ಕೆ ಮಾಡಿರುತ್ತಾರೆ ಹಾಗು ಇವರನ್ನು ಬಹಳ ಕಠಿಣ ಮತ್ತು ಕರಾರುವಕ್ಕಾದ ಪರಿಶೀಲನೆಗಳನ್ನು ಕೊಟ್ಟು ಕಮಾಂಡೋಗಳಾಗಿ ಆಯ್ಕೆ ಮಾಡುತ್ತಾರೆ.

ಯಾವ ಆಪತ್ಕಾಲದಲ್ಲೂ ಸಂದರ್ಭಕ್ಕೆ ತಕ್ಕಂತೆ ವಿಶಿಷ್ಟ ವ್ಯಕ್ತಿಯನ್ನು ರಕ್ಷಿಸುತ್ತಾ ಶತ್ರುವಿನ ಮೇಲೆ ಮಿಂಚಿನ ದಾಳಿ ನಡೆಸಲು ಇವರು ನಿಪುಣರಾಗಿರಬೇಕುತ್ತದೆ ಅಂತಹ ತರಬೇತಿಯನ್ನು ಪಡೆದಿರುತ್ತಾರೆ.

ಇವರುಗಳು ಮೈಯೆಲ್ಲಾ ಕಣ್ಣಾಗಿರಬೇಕು ಅಂತಾರಲ್ಲ ಹಾಗೆ ಇವರುಗಳು ಇರಬೇಕಾಗುತ್ತದೆ.ಈ ಕಮಾಂಡೋಗಳ ಕೈಯಲ್ಲಿ FNF – 2000 ಅಸಾಲ್ಟ್ ರೈಫಲ್,ಆಟೋಮ್ಯಾಟಿಕ್ ಗನ್,17 –ಎಂ ಆಧುನಿಕ ಪಿಸ್ತೂಲ್ ಇತ್ಯಾದಿ ಆಯುಧಗಳು ತಕ್ಷಣ ಪ್ರಯೋಗಿಸುವ ರೀತಿಯಲ್ಲಿ ಸಜ್ಜಾಗಿರಬೇಕು.

ಪ್ರಧಾನಮಂತ್ರಿ ಯ ಜೊತೆಯಲ್ಲಿ ಸಂಚರಿಸುವ SPG ಕಮಾಂಡೋಗಳಲ್ಲಿ ಕೆಲವರ ಹತ್ತಿರ ಬ್ರೀಫ್ ಕೇಸ್ ಇರುವುದನ್ನು ನೀವೆಲ್ಲರೂ ನೋಡಿರುತ್ತೀರ ಹಾಗು ಇದರ ಬಗ್ಗೆ ನಿಮ್ಮಲ್ಲಿ ಕುತೂಹಲ ಕೂಡ ಇರುತ್ತದೆ.

ಪ್ರದಾನ ಮಂತ್ರಿಯವರ ಜೊತೆಯಲ್ಲಿ ಈ ಬ್ರೀಫ್ ಕೇಸ್ ಇದ್ದೆ ಇರುತ್ತದೆ ಕಾರಣ? ಪ್ರಧಾನಮಂತ್ರಿಯವರ ಮುಖ್ಯ ಸುರಕ್ಷಣೆಗಾಗಿ.ಇದರ ವಿಶೇಷತೆ ಹಾಗು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಗೋತ್ತಾ? ಮುಂದೆ ನೋಡಿ ಇದು ಒಂದು Portable bullet proof shield ಪೋರ್ಟೇಬಲ್ ಬುಲ್ಲೆಟ್ ಪ್ರೂಫ್ ಶೀಲ್ಡ್ ಆಗಿದೆ

ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಇದರಲ್ಲಿರುವ ಅತ್ಯಂತ ಚಿಕ್ಕ ಬಟಣನ್ನು ಒತ್ತಿದರೆ ಈ ಬ್ರೀಫ್ ಕೇಸ್ ಒಂದು ಉದ್ದದ ಚಾಪೆಯ ಹಾಗೆ ತೆರೆಯಲ್ಪಡುತ್ತದೆ.ವಿಶೇಷ ವ್ಯಕ್ತಿಗೆ ಅಪಾಯದ ಸಮಯದಲ್ಲಿ ತಾತ್ಕಾಲಿಕವಾದ ಕವಚವನ್ನು ಸಜ್ಜುಗೊಳಿಸಿ ಪ್ರಾಣಾಪಾಯದಿಂದ ಪಾರುಮಾಡುವ ಬುಲ್ಲೆಟ್ ಪ್ರೂಫ್ ಉಪಕರಣವಾಗಿದೆ ಇದು.

ಆಪತ್ಕಾಲದಲ್ಲಿ ಉಪಯೋಗಿಸುವುದಕ್ಕೋಸ್ಕರ ಇದರ ಒಳಗಿನ ರಹಸ್ಯ ಡ್ರಾವರ್ ನಲ್ಲಿ ಅಥವಾ ಒಳಪದರದಲ್ಲಿ ಪಿಸ್ತೂಲ್ ಗಳನ್ನು ಅಡಗಿಸಿ ಇಡಲಾಗಿರುತ್ತದೆ.ಇದನ್ನು ತೆರೆಯುವ ಕಮಾಂಡೋಗೆ ಅದರಲ್ಲಿಟ್ಟಿರುವ ಪಿಸ್ತೋಲನ್ನು ತೆಗೆದು ಶತ್ರುವನ ಮೇಲೆ ಅನಾಯಾಸವಾಗಿ ಎಟ್ಯಾಕ್ ಮಾಡಲು ಸಾಧ್ಯವಾಗುತ್ತದೆ

LEAVE A REPLY

Please enter your comment!
Please enter your name here