ಬಾಳೆಕಾಯಿಯಲ್ಲಿರುವ ಕಠಿಣ ಪಿಷ್ಟ ಹಾಗೂ ಚಿಕ್ಕ ಸಂಕಲೆಯ ಕೊಬ್ಬಿನ ಆಮ್ಲಗಳು ಹಾಗೂ ಬಾಳೆಹಣ್ಣಿನಲ್ಲಿರುವಂತಹ ಇತರ ವಿಟಮಿನ್ ಮತ್ತು ಖನಿಜಗಳು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳಾಗಿವೆ ಖನಿಜಗಳಲ್ಲಿ ಪ್ರಮುಖವಾಗಿ ಸೋಡಿಯಂ ಪೊಟ್ಯಾಶಿಯಂ ಹಾಗೂ ಅಲ್ಪ ಪ್ರಮಾಣದ ಪ್ರೋಟೀನ್ ಸಹಾ ಇದೆ.

ಊಟವಾದ ಮೇಲೆ ಎಷ್ಟೋ ಜನರು ಬಾಳೆ ಹಣ್ಣು ತಿನ್ನುತ್ತಾರೆ.ಎರಡೂ ಕೂಡಾ ದೇಹಕ್ಕೆ ಒಳ್ಳೆಯದೇ ಆಗಿದೆ.ಆದರೆ ಇದೀಗ ಬೆಚ್ಚಿ ಬೀಳವ ಸುದ್ದಿ ಒಂದು ಕೆಳತೊಡಗಿದೆ.

ಇನ್ನು ಈಗ ಸ್ವಲ್ಪ ಮೊಟ್ಟೆಯಲ್ಲಿರುವ ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ, ಮೊಟ್ಟೆಯಲ್ಲಿ ಏನೆಲ್ಲಾ ಇರುತ್ತದೆ ಮತ್ತು ಇದಕ್ಕೂ ಬಾಳೆಹಣ್ಣಿಗೂ ಏನ್ ಸಂಬಂಧ ಅಂತ ನೋಡೋಣ.

ಮೊಟ್ಟೆ ಅಲ್ಲಿ ದೇಹ ಗಟ್ಟಿ ಆಗೋಕೆ ಅಂತಾನೆ ಕ್ಯಾಲ್ಸಿಯಮ್ ಇರುತ್ತದೆ ಮತ್ತು ಅದರಲ್ಲಿ ಕೊಬ್ಬಿನಾಂಶವೂ ಇರುತ್ತದೆ ಹೀಗಾಗಿ ಇದು ಒಂದು ಒಳ್ಳೆಯ ಆಹಾರ ಪದಾರ್ಥ.

ಬಾಳೆ ಹಣ್ಣು ಮತ್ತು ಮೊಟ್ಟೆ ತಿಂದ ವ್ಯಕ್ತಿ ಒಬ್ಬ ಸತ್ತು ಹೋಗಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.ಈ ಸುದ್ದಿ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹರಡತೊಡಗಿತ್ತು.

ನಿಜವಾಗಿಯೂ ಬಾಳೆ ಹಣ್ಣು ಹಾಗೂ ಮೊಟ್ಟೆ ತಿಂದರೆ ಸತ್ತು ಹೋಗುತ್ತಾರೆಯೇ? ಓದಿ ತಿಳಿಯಿರಿ.

ಕೆಲ ತಿಂಗಳುಗಳ ಹಿಂದೆ ವ್ಯಕ್ತಿಯೊಬ್ಬ ಬಾಳೆ ಹಣ್ಣಿನ ಜೊತೆ ಮೊಟ್ಟೆ ತಿಂದು ಅಸು ನೀಗಿದ ಎಂಬ ಸುದ್ದಿ ಎಷ್ಟೋ ಜನರ ತಲೆ ಕೆಡಿಸಿತ್ತು.

ಹಂಗಾದರೆ ನಿಜಕ್ಕೂ ಬಾಳೆ ಹಣ್ಣು ಮತ್ತು ಮೊಟ್ಟೆಯ ಸೇವನೆ ಜೀವಕ್ಕೆ ತೊಂದರೆನಾ?

ಇದಕ್ಕೆ ಹಲವಾರು ಜನರು ಪ್ರತಿಕ್ರಿಯಿಸಿದ್ದು ಆ ಥರಾ ಆಗೋಕೆ ಸಾಧ್ಯಾನೇ ಇಲ್ಲ ಎಂದು ಹೇಳುತ್ತಿದ್ದಾರೆ.

ಏನಿದು ಸುದ್ದಿ:?

ಸುಮಾರು ದಿನಗಳ ಹಿಂದೆ ಯುವಕನೊಬ್ಬ ಮೊಟ್ಟೆ ತಿಂದ ಮೇಲೆ ಬಾಳೆ ಹಣ್ಣು ಸೇವಿಸಿ ತಕ್ಷಣವೇ ಸತ್ತ ಎಂಬ ಸುದ್ದಿ ಬಂದಿತ್ತು. ಈ ಸುದ್ದಿ ಎಷ್ಟರ ಮಟ್ಟಿಗೆ ವ್ಯಾಪಕ ಆಗಿತ್ತಂದರೆ ಎಷ್ಟೋ ಜನ ಬಾಳೆ ಹಣ್ಣು ಮತ್ತು ಮೊಟ್ಟೆಯನ್ನು ಜೊತೆಗೆ ಸೇವಿಸಲು ಹಿಂಜರಿಯುವ ಮಟ್ಟಿಗೆ.

ಕಾರಣ ಕಂಡು ಹಿಡಿದಾಗ ಅದು ಮೊಟ್ಟೆ ಮತ್ತು ಬಾಳೆ ಹಣ್ಣು ಮಿಶ್ರಣ ಗಆಗಿ ಹೊಟ್ಟೆಯಲ್ಲಿ ವಿಷವಾಗಿ ಪರಿಣಮಿಸಿತ್ತು ಎಂಬ ಸುದ್ದಿಯೂ ಬಂದಿತ್ತು.

ಆದರೆ ಈಗ ಇದು ಸುಳ್ಳು ಸುದ್ದಿ ಎಂದು ಮೂಲಗಳು ತಿಳಿಸಿವೆ. ನಿಮಗೆಲ್ಲಾ ಗೊತ್ತೇ ಇರೋ ಹಾಗೆ ಬಾಳೆ ಹಣ್ಣು ಒಂದು ಒಳ್ಳೆಯ ಆಹಾರ ಅದರಿಂದ ದೇಹಕ್ಕೆ ತುಂಬಾ ಉಪಯೋಗಗಳಿವೆ.

ಬಾಳೆ ಹಣ್ಣಿನಲ್ಲಿ ಫೈಬರ್ ಕಂಟೆಂಟ್ ಇರುವುದರಿಂದ ಅದನ್ನು ಹೆಚ್ಚಾಗಿ ಕ್ರೀಡಾ ಪಟುಗಳಿಗೆ ಕೊಡುತ್ತಾರೆ.

ಬಾಳೆ ಹಣ್ಣಿನಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಗುಣಗಳು ಕೂಡಾ ಇದ್ದು ಇದೊಂದು ಪೌಷ್ಟಿಕ ಆಹಾರ.

ಇಷ್ಟೆಲ್ಲಾ ಗುಣಗಳಿರುವ ಬಾಳೆ ಹಣ್ಣು ಸೇವನೆ ಜೀವಕ್ಕೆ ಕುತ್ತು ತರೋಕೆ ಸಾಧ್ಯಾನೇ ಇಲ್ಲ ಬಿಡಿ.

ಇನ್ನು ಮೊಟ್ಟೆ ವಿಷಯಕ್ಕೆ ಬಂದರೆ, ಮೊಟ್ಟೆ ಒಂದು ಪ್ರೋಟೀನ್‌ ತುಂಬಿದ ಆಹಾರ.

ಮೊಟ್ಟೆಯಲ್ಲಿ ಕಬ್ಬಿಣ ಅಂಶ ಹೆಚ್ಚಿಸುವ ಗುಣಗಳಿವೆ.

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸುದ್ದಿ ಸುಳ್ಳು ಎಂದು ಹೇಳಲಾಗಿದೆ.

ಹೀಗಾಗಿ ಮೊಟ್ಟೆ ಮತ್ತು ಬಾಳೆ ಹಣ್ಣನ್ನು ಜೊತಯಾಗಿ ತಿನ್ನುವುದರಿಂದ ಯಾವ ತೊಂದರೆಗಳು ಇಲ್ಲ ಎಂದಿದ್ದಾರೆ ನುರಿತ ವೈದ್ಯರು.

ಒಂದು ಮಾತು ನೆನಪಿನಲ್ಲಿಡಿ ಈ ರೀತಿಯ ಘಟನೆಗಳು ನಡೆದಿಲ್ಲವಾದರೂ ಅತಿಯಾದ ಮೊಟ್ಟೆ ಮತ್ತು ಬಾಳೆ ಹಣ್ಣು ಸೇವನೆ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here