ರೆಬೆಲ್ ಸ್ಟಾರ್ ಅಂಬರೀಶ್ ನಾಯಕ ನಟನಾಗಿ ಅಭಿನಯದ ಕೊನೆಯ ಚಿತ್ರಅಂಬಿ ನಿಂಗ್ ವಯಸ್ಸಾಯ್ತೋಸಿನಿಮಾ ಮತ್ತೆ ರಿರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ರೇಬಲ್ ಸ್ಟಾರ್ ಅಂಬರೀಶ್ ಅವರ ಕನಸಿನ ಚಿತ್ರ ಕೂಡ ಆಗಿತ್ತು

ಅವರ ಆಪ್ತ ಮಿತ್ರರಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಿತ್ರವನ್ನ ಅಂಬಿ ಮಾಡಲು ಪ್ರೇರೇಪಿಸಿದ್ದರು.ತಮಿಳಿನಲ್ಲಿ ತೆರೆಕಂಡಿದ್ದ ಪಾ ಪಾಂಡಿ ಚಿತ್ರ ವೀಕ್ಷಿಸಿದ್ದ ರಜಿನಿ, ಸಿನಿಮಾ ಅಂಬರೀಶ್ಗೆ ಹೇಳಿ ಮಾಡಿಸಿದಂತಿದೆ ಅವರು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದಿದ್ದರು.

ಗೆಳೆಯನ ಮಾತನ್ನು ಪಾಲಿಸಿದ್ದ ಅಂಬರೀಶ್ ಚಿತ್ರದಲ್ಲಿ ಬಣ್ಣ ಹಚ್ಚಲು ಒಪ್ಪಿಕೊಂಡರು.ಶನಿವಾರ ನಡೆದ ಮಂಡ್ಯ ಬಸ್ ದುರಂತದಿಂದ ಅಂಬಿ ಆಘಾತಗೊಳಗಾಗಿದ್ದರು ಹಾಗೆಯೇ ಮಾಧ್ಯಮದವರ ಜೊತೆ ಮಾತಾಡಿ ಸಂತಾಪವನ್ನು ಸೂಚಿಸಿದ್ದರು.ಹಾಗೆಯೇ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಅಂಬಿ ಬಯಸಿದ್ದರು.

ಅಂಬಿಯವರ ಆಸೆಯಂತೆಅಂಬಿ ನಿಂಗ್ ವಯಸಾಯ್ತೋಸಿನಿಮಾವನ್ನ ಮತ್ತೆ ರಿರಿಲೀಸ್ ಮಾಡಿ ಅದರಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರಿಗೆ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ.

ಚಿತ್ರವನ್ನ ಕಿಚ್ಚ ಸುದೀಪ್ ಹಾಗೂ ಜಾಕ್ ಮಂಜು ಅವರ ಕಿಚ್ಚ ಕ್ರಿಯೇಷನ್ ಅಡಿಯಲ್ಲಿ ನಿರ್ಮಿಸಿ ಹಾಗೂ ಗುರುದತ್ ಗಾಣಿಗ ಅವರ ನಿರ್ದೇಶನವಿದೆ.ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾವನ್ನ ಇದೆ ಶುಕ್ರವಾರದಂದು ಮಂಡ್ಯ,ಬೆಂಗಳೂರು,ಮೈಸೂರಿನಲ್ಲಿ ಮತ್ತು ಅಮೆರಿಕಾದಲ್ಲಿ ಸಿನಿಮಾವನ್ನ ರಿರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.

ರೆಬಲ್ ಸ್ಟಾರ್ ಅಂಬರೀಶ್ ಅಂತಿಮ ದರ್ಶನ ಪಡೆಯಲು ಎಲ್ಲೆಲ್ಲಿಂದಲೋ ನಟರು ನಟಿಯರು ರಾಜಕೀಯ ಪಕ್ಷದವರು ಬಂದರು ಆದರೆ ಮಾಜಿ ಸಂಸದೆ,ನಟಿ ರಮ್ಯಾ ದೂರ ಉಳಿದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.ಅಂಬರೀಶ್ ಅಂಕಲ್ ಎನ್ನುತಿದ್ದ ರಮ್ಯಾ ಯಾಕೆ ಬರಲಿಲ್ಲ ಎಂಬುದಕ್ಕೆ ಕಾರಣ ಏನು ಗೊತ್ತೇ?

ರಮ್ಯಾ ಅವರು ಅಂಬರೀಶ್ ಅಂತ್ಯಕ್ರಿಯೆಗೆ ಗೈರಾಗಲು ಕಾರಣ ತಿಳಿದು ಬಂದಿದೆ.ಅವರು ಅಪರೂಪದಲ್ಲಿ ಅಪರೂಪ ಅಂದರೆ 10 ಲಕ್ಷ ಮಂದಿಯಲ್ಲಿ ಒಬ್ಬರನ್ನು ಕಾಡುವ ಕಾಯಿಲೆಗೆ ತುತ್ತಾಗಿದ್ದಾರಂತೆ.ಹಾಗಂತ ಸ್ವತಃ ಅವರೇ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here