ಇತ್ತೀಚಿನ ದಿನಗಳಲ್ಲಿ ಜನರು ಹಲವಾರು ಬಾರಿ ಮೊಬೈಲ್ ನಂಬರನ್ನು ಬದಲಾಯಿಸುತ್ತಲೇ ಇರುತ್ತಾರೆ.ಆಗ ಆಧಾರ್ ಗೆ ನಮ್ಮ ಮೊಬೈಲ್ ನಂಬರನ್ನು ಬದಲಾಯಿಸಬೇಕಾಗುತ್ತದೆ.ಆದರೆ ಕೆಲವರಿಗೆ ಅದನ್ನು ಬದಲಾಯಿಸಿಕೊಳ್ಳುವುದು ಹೇಗೆ ಎನ್ನುವುದು ಗೊತ್ತಿಲ್ಲ.

ಹೊಸ ಮೊಬೈಲ್ ನಂಬರ್ ಆಧಾರ್ ಗೆ ಹೇಗೆ ಲಿಂಕ್ ಮಾಡೋದು ಎಂಬ ಚಿಂತೆಯಲ್ಲಿದ್ದೀರಾ?ಇದಕ್ಕಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಹತ್ತಿರವಿರುವ ಆಧಾರ್ ಸೆಂಟರ್ ಗೆ ಹೋದ್ರೆ ನಿಮ್ಮ ಕೆಲಸ ಆದಂತೆ.ಆಧಾರ್ ವೆಬ್ಸೈಟ್ ಮಾಹಿತಿ ಪ್ರಕಾರ,ಆಧಾರ್ ನವೀಕರಣ ಕೇಂದ್ರಕ್ಕೆ ಹೋಗಿ ಹೊಸ ಮೊಬೈಲ್ ಸಂಖ್ಯೆನೀಡಿದ್ರೆ ಮುಗಿಯಿತು.

ಪೋಸ್ಟ್ ಮೂಲಕ ಅಥವಾ ಆನ್ಲೈನ್ ಮೂಲಕ ಮೊಬೈಲ್ ನಂಬರ್ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಆಧಾರ್ ವೆಬ್ಸೈಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ.ಆಧಾರ್ ನವೀಕರಣ ಸೆಂಟರ್ ಹತ್ತಿರದಲ್ಲಿ ಎಲ್ಲಿದೆ ಎಂಬುದು ನಿಮಗೆ ಗೊತ್ತಿಲ್ಲದೆ ಹೋದ್ರೆ https://uidai.gov.in/ ಗೆ ಹೋಗಿ.ಅಲ್ಲಿ ಅಪ್ಡೇಟ್ ಆಯ್ಕೆ ಸಿಗಲಿದೆ.ಅದ್ರಲ್ಲಿರುವ Update at Enrolment Centre ಮೇಲೆ ಕ್ಲಿಕ್ ಮಾಡಿ.

ಆಗ ಹೊಸದೊಂದು ಪೇಜ್ ತೆರೆದುಕೊಳ್ಳಲಿದೆ. ಅಲ್ಲಿ ದೇಶ,ರಾಜ್ಯ,ಗ್ರಾಮದ ಹೆಸರು ಹಾಕಿ ಇಲ್ಲವೆ ಪಿನ್ ಕೋಡ್ ಹಾಕಿ ಇಲ್ಲವೆ ಇಲಾಖೆ ಹೆಸರು ಸರ್ಚ್ ಮಾಡಿದ್ರೆ ನಿಮಗೆ ಹತ್ತಿರದಲ್ಲಿರುವ ಆಧಾರ್ ನವೀಕರಣ ಸೆಂಟರ್ ವಿಳಾಸ ಸಿಗಲಿದೆ.

ಆಧಾರ್ ಸೆಂಟರ್ ಗೆ ಹೋಗಿ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ನೀವು ಹಣ ಖರ್ಚು ಮಾಡಬೇಕು.25 ರೂಪಾಯಿ ಮೊಬೈಲ್ ನಂಬರ್ ನವೀಕರಣಕ್ಕೆ ನೀಡಬೇಕು.ಜಿಎಸ್ಟಿ ಸೇರಿ 30 ರೂಪಾಯಿ ನೀಡಬೇಕಾಗುತ್ತದೆ.

LEAVE A REPLY

Please enter your comment!
Please enter your name here