ಶಬರಿಮಲೆ ಬಳಿಯ ಪಂಪಾಗೆ ಖಾಸಗಿ ವಾಹನದಲ್ಲಿ ಹೋಗಲು ಅವಕಾಶ ನೀಡಬೇಕೆಂದು ಕೇಂದ್ರ ಸಚಿವ ಪೋನ್ ರಾಧಾಕೃಷ್ಣನ್ಗೆ ಸಿಂಗಂ ಖ್ಯಾತಿಯ ಐ ಪಿ ಎಸ್ ಅಧಿಕಾರಿ ಯತೀಶ್ ಚಂದ್ರ ಬೆವರಿಳಿಸಿದರು.

ಸಚಿವರಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದ ಯತೀಶ್ ಚಂದ್ರ ಪ್ರವಾಹದಿಂದಾಗಿ ಪಂಪಾದಲ್ಲಿನ ವಾಹನ ನಿಲುಗಡೆ ತಾಣ ಕೊಚ್ಚಿ ಹೋಗಿದೆ.ಹಾಗಾಗಿ ಬಸ್ ಮಾತ್ರ ಹೋಗಲು ಅವಕಾಶವಿದೆ.ಖಾಸಗಿ ವಾಹನ ಬಿಟ್ಟರೆ ಸಂಚಾರ ದಟ್ಟಣೆಯಾಗಿ ಕಷ್ಟವಾಗುತ್ತದೆ ಎಂದರು.ಈ ಮಾತನ್ನು ಕೇಳದ ಸಚಿವರು ಮತ್ತೆ ವಾಕ್ಸಮರ ನಡೆಸಿದಾಗ ಯತೀಶ್ ಹಾಗಿದ್ದರೆ ಈ ಬಗ್ಗೆ ಲಿಖಿತ ಹೇಳಿಕೆ ಕೊಟ್ಟರೆ ಅನುಮತಿ ನೀಡುವುದಾಗಿ ಹೇಳಿದರು.ನಂತರ ಮಾತಿನ ಚಕಮಕಿ ನಡೆದು ಸಚಿವರು ಬಸ್ ನಲ್ಲಿಯೇ ಪಂಪಾ ಕಡೆಗೆ ತೆರಳಿದರು.

ಬೆಂಬಲಿಗರ ವಾಹನಗಳನ್ನ ಬಿಡಲು ಆಗದು ಎಂದ ಸೂಪರ್ ಕಾಪ್ ಇದರಿ ಸಮಾಧಾನವಾಗದ ಸಚಿವರು ತಮ್ಮ ವಾಹನ ಹಾಗೂ ಬೆಂಬಲಿಗರ ವಾಹನವನ್ನು ಪಂಪಾಕ್ಕೆ ಬಿಡುವಂತೆ ಒತ್ತಾಯ ಮಾಡಿದ್ದಾರೆ.ನೀವು ಭಕ್ತಾದಿಗಳಿಗೆ ಕಿರುಕುಳ ನೀಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.ಇದರಿಂದ ಉತ್ತರಿಸಿದ ಯತೀಶ್ ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳನ್ನು ಪಂಪಾಕ್ಕೆ ಬಿಡುವುದಿಲ್ಲವೆಂದು,ನಿಮ್ಮ ವಾಹನವನ್ನು ಬಿಡುತ್ತೇವೆ ಆದರೆ ಬೆಂಬಲಿಗರ ವಾಹನ ಬಿಡುವುದಿಲ್ಲ.ಇಲ್ಲದಿದ್ದರೆ ತಾವು ಸರ್ಕಾರಿ ಬಸ್‌ನಲ್ಲೇ ಹೋಗಬೇಕಾಗುತ್ತದೆ ಎಂದು ಯತೀಶ್ ಹೇಳಿದ್ದಾರೆ.

ಘಟನೆಯಿಂದ ಬಿಜೆಪಿ ಗರಂ

ಈ ಘಟನೆಯಿಂದ ಕೇರಳ ಬಿಜೆಪಿ ಗರಂ ಆಗಿದ್ದು, ಕಾಂಗ್ರೆಸ್‌ನ ರಮೇಶ್ ಚೆನ್ನಿತ್ತಲ ಶಬರಿಮಲೆಗೆ ಹೋಗಿದ್ದಾಗ ಇದೇ ಯತೀಶ್ ಗುಲಾಮನಂತೆ ಅವರ ಸೇವೆ ಮಾಡಿದ್ದರು ಎಂದು ಕಠು ವಾಗ್ದಾಳಿ ನಡೆಸಿದೆ.ಈ ಹಿಂದೆ ಕೇರಳ ಬಿಜೆಪಿ ಯತೀಶ್ ಚಂದ್ರ ಪರ ಮಾತನಾಡಿತ್ತು.

ಟೆಕ್ಕಿಯಾಗಿ ಲಕ್ಷಾಂತರ ಸಂಪಾದಿಸುವ ಉದ್ಯೋಗ ತೊರೆದು,ಜನಸೇವೆ ಮಾಡಲು ಸಿವಿಎಲ್ ಸರ್ವೀಸ್ ಸೇರಿ,ಈಗ ಕೇರಳದಲ್ಲಿ ಸಮರ್ಥ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ.ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೀತಿಗೆ ಶ್ಲಾಘನೆ ವ್ಯಕ್ತವಾಗಿದೆ.

ಇತ್ತೀಚೆಗೆ ಜನಪ್ರಿಯಗೊಂಡಿದ್ದ ಫಿಟ್ನೆಸ್ ಚಾಲೆಂಜ್ ನಲ್ಲಿ ಪ್ರಧಾನಿ ಮೋದಿ ಅವರಿಂದ ಸವಾಲು ಸ್ವೀಕರಿಸಿ,ವರ್ಕೌಟ್ ಮಾಡುವ ವಿಡಿಯೋ ಹಾಕಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯಗೊಂಡಿತ್ತು.

LEAVE A REPLY

Please enter your comment!
Please enter your name here