ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಹಕ್ಕು ಎಂಬುದು ಗೊತ್ತಿದ್ದರೂ ಎಷ್ಟೋ ಜನಸಾಮಾನ್ಯರು ಮತದಾರರ ಗುರುತಿನ ಚೀಟಿ(Voter Id)ಯೇ ಇಲ್ಲದೆ ಮತ ಚಲಾಯಿಸದ ಉದಾಹರಣೆಗಳಿವೆ.ಕೇವಲ ಮತ ಚಲಾವಣೆಗೆ ಮಾತ್ರವಲ್ಲದೆ ಹಲವು ಕೆಲಸಗಳಿಗೆ ವೋಟರ್ ಐಡಿಯನ್ನು ಗುರುತಿನ ಚೀಟಿಯಾಗಿ ಬಳಸಬಹುದು.

18 ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯರೂ ಹೊಂದಿರಲೇಬೇಕಾದ ಈ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವುದು ಹೇಗೆ?

ವೋಟರ್ ಐಡಿಯನ್ನು ಭಾರತೀಯ ಚುನಾವಣಾ ಆಯೋಗ ನೀಡುತ್ತದೆ.ಮೊದಲು ಕೇವಲ ಮತ ಚಲಾವಣೆಗಾಗಿ ಮಾತ್ರ ನೀಡಲಾಗುತ್ತಿದ್ದ ಈ ವೋಟರ್ ಐಡಿಯನ್ನು ಈಗ ಗುರುತಿನ ಚೀಟಿಯಾಗಿ,ವಿಳಾಸ,ವಯಸ್ಸಿನ ದೃಢೀಕರಣವಾಗಿ ಸಹ ಬಳಸಬಹುದು.ಅಷ್ಟೇ ಅಲ್ಲ,ಪಾಸ್ ಪೋರ್ಟ್ ಪಡೆಯುವುದಕ್ಕೆ,ಸಿಮ್ ಪಡೆಯುವುದಕ್ಕೆ, ವಿದ್ಯುತ್ ಸಂಪರ್ಕಕ್ಕೆ ಮುಂತಾಗಿ ಹಲವು ಕೆಲಸಗಳಿಗೂ ಇದನ್ನು ಬಳಸಬಹುದು.

ವೋಟರ್ ಐಡಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡು ರೀತಿಯಲ್ಲೂ ಅರ್ಜಿ ಸಲ್ಲಿಸಬಹುದು

ಕರ್ನಾಟಕದಲ್ಲಿ ವೋಟರ್ ಐಡಿ ಪಡೆಯುವುದು ಹೇಗೆ?

ಅರ್ಜಿ ಅಲ್ಲಿಸುವವರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.ಕರ್ನಾಟಕದಲ್ಲಿ ಅರ್ಜಿದಾರರಿಗೆ ಶಾಶ್ವತ ವಿಳಾಸವಿರಬೇಕು.ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಅರ್ಜಿದಾರರ ಹೆಸರು ಸೇರಿರಬೇಕು.

ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದಕ್ಕೆ ಅಗತ್ಯವಿರುವ ದಾಖಲೆಗಳು

ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ವಯಸ್ಸಿನ ದಾಖಲೆಗೆ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಜನನ ಪ್ರಮಾಣಪತ್ರ, ಪಾಸ್ ಪೋರ್ಟ್, ಪ್ಯಾನ್ ಕಾರ್ಡ್,ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು ವಿಳಾಸ ದಾಖಲೆಗೆ ರೇಶನ್ ಕಾರ್ಡ್,ಪಾಸ್ ಪೋರ್ಟ್,ಡ್ರೈವಿಂಗ್ ಲೈಸೆನ್ಸ್,ಟೆಲಿಫೋನ್ ಬಿಲ್ ಅಥವಾ ವಿದ್ಯುತ್ ಬಿಲ್ ಇವುಗಳಲ್ಲಿ ಯಾವುದಾದರೂ ಒಂದು.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ವೆಬ್ ಸೈಟ್ ಗೆ ತೆರಳಿ.ವೆಬ್ ಸೈಟ್ ವಿಳಾಸ: www.ceokarnataka.kar.nic.in

Enroll Online as a voterಆಯ್ಕೆಯನ್ನು ಕ್ಲಿಕ್ ಮಾಡಿದರೆ www.voterreg.kar.nic.in ಎಂಬ ವೆಬ್ ಸೈಟ್ ತೆರೆದುಕೊಳ್ಳುತ್ತದೆ.www.voterreg.kar.nic.in ಗೆ ಸೈನ್ ಅಪ್ ಆಗಿ.ಇದರಲ್ಲಿ ನಿಮ್ಮ ಹೆಸರು,ಸಂಪರ್ಕ ಸಂಖ್ಯೆ ಮತ್ತು ಪ್ರಸ್ತುತ ಇಮೇಲ್ ವಿಳಾಸವನ್ನು ನೀಡಿ.ನಿಮಗೆ ಒಂದು ತಾತ್ಕಾಲಿಕ username ಮತ್ತು password ನೀಡಲಾಗುತ್ತದೆ.

ಫಾರ್ಮ್ ನಂ 6ನ್ನು ತುಂಬಿ: ಹಂತ- 2 ನಿಮಗೆ ನೀಡಿದ username ಮತ್ತು password ಮೂಲಕ www.voterreg.kar.nic.in ಗೆ ಮತ್ತೆ ಲಾಗ್ ಇನ್ ಆಗಿ.ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಫಾರ್ಮ್ ನಂ.6 ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ,ಇದರಲ್ಲಿ ಅಗತ್ಯವಿರುವ ಹೆಸರು,ವಯಸ್ಸು,ವಿಳಾಸ ಇತ್ಯಾದಿ ತಪ್ಪಿಲ್ಲದಂತೆ ತುಂಬಿ.ನೆನಪಿರಲಿ,ಈ ಎಲ್ಲ ವಿವರಗಳೂ ನಿಮ್ಮ ದಾಖಲೆಯಲ್ಲಿದ್ದಂತೆಯೇ ಇರಬೇಕು.ನಿಮ್ಮ ಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.ಫಾರ್ಮ್ 6 ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲೂ ಲಭ್ಯವಿರುತ್ತದೆ.Submitt ಎಂಬ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಆಫ್ ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸುವವರಿಗೆ

ನಿಮ್ಮ ಏರಿಯಾದಲ್ಲಿರುವ ಕರ್ನಾಟಕ ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಪಾರ್ಮ್ 6 ಅನ್ನು ಪಡೆಯಿರಿ.ಫಾರ್ಮ್ 6 ರಲ್ಲಿ ನಿಮ್ಮ ಹೆಸರು,ವಯಸ್ಸು,ವಿಳಾಸ ಇತ್ಯಾದಿ ವಿವರಗಳನ್ನು ತಪ್ಪಿಲ್ಲದಂತೆ ತುಂಬಿ.ಚಿತ್ರ ಅಂಟಿಸುವುದಕ್ಕೆ ಇರುವ ಜಾಗದಲ್ಲಿ ನಿಮ್ಮ ಚಿತ್ರವನ್ನು ಅರ್ಪಿಸಿ,ನಿಮ್ಮ ಸಹಿ ಹಾಕಿ.ವಿಳಾಸ, ವಯಸ್ಸುಗಳ ದಾಖಲೆಗಳ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಏರಿಯಾದಲ್ಲಿರುವ ಕರ್ನಾಟಕ ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಅರ್ಜಿಯನ್ನು ನೀಡಿ.

ವೋಟರ್ ಐಡಿ ಹೇಗೆ ಸಿಗುತ್ತದೆ?

ನೀವು ಫಾರ್ಮ್ 6 ಅನ್ನು ನೀಡುತ್ತಿದ್ದಂತೆಯೇ ಚುನಾವಣಾ ಆಯೋಗ ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ. ನೀವು ನೀಡಿದ ದಾಖಲೆಗಳು ಸರಿ ಇವೆಯೇ ಎಂದು ಪರಿಶೀಲಿಸಲು ಒಬ್ಬ ಅಧಿಕಾರಿ ನೀವು ನೀಡಿದ ವಿಳಾಸಕ್ಕೆ ಬರುತ್ತಾರೆ.ನಂತರ ನೀವು ನೀದಿದ ದಾಖಲೆಗಳೆಲ್ಲ ಸರಿಯಾಗಿವೆ ಎಂದರೆ ನಿಮ್ಮ ಓಟರ್ ಐಡಿಯ ಅರ್ಜಿಯ ಮನವಿಗೆ ಸಮ್ಮತಿ ಸಿಕ್ಕಂತೆ.ಎಲ್ಲಾ ಔಪಚಾರಿಕ ವಿಧಾನಗಳೂ ಮುಗಿದ ಕೆಲವೇ ದಿನಗಳಲ್ಲಿ ನೀವು ನೀಡಿದ ವಿಳಾಸಕ್ಕೆ ವೋಟರ್ ಐಡಿ ಪೋಸ್ಟ್ ಮೂಲಕ ಬರುತ್ತದೆ.

LEAVE A REPLY

Please enter your comment!
Please enter your name here