ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಅಭಿನಯದ “ಪೈಲ್ವಾನ್” ಸಿನಿಮಾದ ಪೋಸ್ಟರ್ ಒಂದು ವೈರಲ್ ಆಗಿತ್ತು ಆದರೆ ಈಗ ಕೆಲವರು ಆ ಪೋಸ್ಟರ್ ನಕಲಿ ಎಂದು ಹೇಳಲು ಶುರು ಮಾಡಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

“ಪೋಸ್ಟರ್ ನಲ್ಲಿರುವುದು ನನ್ನ ನಕಲಿ ದೇಹ ಎನ್ನುವವರಿಗೆ ನಾನು ಏನು ಹೇಳುವುದಿಲ್ಲ.ಬಹುಶಃ ನಾನೇ ಅವರಿಗೆ ಈ ಅಭಿಪ್ರಾಯವನ್ನು ನೀಡಿದ್ದೇನೆ.ಪೈಲ್ವಾನ್ ಚಿತ್ರ ನನಗೆ ಸಾಕಷ್ಟು ಉತ್ಸಾಹ ನೀಡಿದೆ. ಅಲ್ಲದೇ ನಾನು ಈ ಚಿತ್ರದ ಎಲ್ಲ ಪ್ರಕ್ರಿಯೆಯನ್ನು ಎಂಜಾಯ್ ಮಾಡುತ್ತಿದ್ದೇನೆ.ಚಿತ್ರದ ಸ್ಕ್ರಿಪ್ಟ್ ಗಾಗಿ ನಾನು ಜಿಮ್‍ಗೆ ಹೋಗಿದ್ದೇನೆ ಹೊರತು ಬೇರೆ ವಿಷಯವನ್ನು ಸಾಬೀತು ಮಾಡಲು ಅಲ್ಲ.ಕುಸ್ತಿಪಟುವಿನ ಅವತಾರದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪೈಲ್ವಾನ್ ಸಿನಿಮಾಕ್ಕಾಗಿ ಸುದೀಪ್ ಮಾಂಸಾಹಾರ ವನ್ನ ಸಂಪೂರ್ಣ ತ್ಯಜಿಸಿ ತಮ್ಮ ದೇಹವನ್ನ ಹುರಿಗೊಳಿಸಿದ್ದಾರೆ ಆದರೆ ಕೆಲವರು ಕುಸ್ತಿ ಆಕಾಡದ ಚಿತ್ರಗಳು ನಕಲಿ ಎನ್ನುತ್ತಿದ್ದಾರೆ.

ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು,ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ,ಪಂಜಾಬಿ,ಬೆಂಗಾಲಿ,ಮರಾಠಿ,ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಪೈಲ್ವಾನ್ ಚಿತ್ರದ ನಿರದೀಶಕ ಕೃಷ್ಣ ಅವರ ಟ್ವೀಟ್ ಹೀಗಿದೆ…

LEAVE A REPLY

Please enter your comment!
Please enter your name here