ಡಿಸಿಎಂ ಡಾ.ಜಿ ಪರಮೇಶ್ವರ್ ಅವರ ಮಗಳು ಈಗ ಸ್ವದೇಶಕ್ಕೆ ಮರಳಿದ್ದಾರೆ.ಶನಾ ಪರಮೇಶ್ವರ್ ವಿದೇಶದಿಂದ ಮರಳಿ ಬಂದು ಬೆಂಗಳೂರಿನಲ್ಲೇ ಇರೋ ಅವರು ಇಲ್ಲಿ ಸಕತ್ ಹವಾ ಕ್ರಿಯೇಟ್ ಮಾಡ್ತಿದ್ದಾರೆ.

ಕಾರ್ ಕ್ರೇಜ್

ಹೌದು ಶನಾ ಅವರಿಗೆ ಕಾರ್ ಅಂದ್ರೆ ತುಂಬಾನೇ ಇಷ್ಟ.ಅದರಲ್ಲೂ ಅವ್ರ ಪೊರ್ಶೆ ಕಾರ್ ಅಂದ್ರೆ ಸಕತ್ ಲವ್.ಅವರಿಗೆ ಡ್ರೈಫ್ಟಿಂಗ್ ಕ್ವೀನ್ ಅಂತಾ ಬಿರುದನ್ನೂ ನೀಡಲಾಗಿದೆ.

ಆಡಿ,ಪಾರ್ಶೆ,ಜಾಗ್ವಾರ್ ಹೀಗೆ ಹಲವು ಹೈ ಎಂಡ್ ಕಾರ್​​ನಲ್ಲಿ ಓಡಾಡೋ ಶನಾ,ಬೆಂಗಳೂರು ರೋಡ್ನಲ್ಲಿ ಕಾರ್ಡ್ರಿಫ್ಟ್,ಸಡನ್ ಯೂ ಟರ್ನ್,ಸ್ಪೀಡ್ ಡ್ರೈವ್ ಹೀಗೆ ಹಲವು ಹತ್ತು ಸ್ಟಂಟ್ಗಳನ್ನ ಮಾಡ್ತಾರೆ ಅಂದರೆ ನಂಬಲೇಬೇಕು.ಅದೂ ಕೂಡ ಪ್ರೊಫೆಷನಲ್ ಡ್ರೈವಿಂಗ್ ಜೊತೆಗೆ ಅದನ್ನು ಯೂಟ್ಯೂಬ್ಚಾನೆಲ್ನಲ್ಲಿ ಹಾಕಲಾಗಿದ್ದು,ಡ್ರೈವ್ ಲೈಕ್ ಶನಾ ಅಂತಾ ಟ್ಯಾಗ್ಲೈನ್ ಕೂಡ ಕೊಡಲಾಗಿದೆ.

ಅಷ್ಟಕ್ಕೂ ಡ್ರಿಫ್ಟಿಂಗ್ ಅನ್ನೋದು ಡೇಂಜರ್ಡ್ರೈವಿಂಗ್ ಮೆಥಡ್ ಆಗಿದ್ದು, ವಿಧಾನದಲ್ಲಿ ಕಾರ್ಸ್ಪೀಡ್ ಆಗಿ ಇರೋವಾಗಲೇ ಅದನ್ನು ಟರ್ನ್ ಮಾಡಲಾಗುತ್ತೆ. ವಿಧದಲ್ಲಿ ಎಕ್ಸ್ಪರ್ಟ್ ಆಗಿರೋ ಶನಾ, 360 ಡಿಗ್ರೀ ಕಾರ್ ಟರ್ನ್ ಮಾಡ್ತಾರೆ ಅಂದರೆ ನಂಬಲೇ ಬೇಕು.

ಒಟ್ಟಿನಲ್ಲಿ ಮೊದಲು ಹುಡುಗನಾಗಿದ್ದ ಡಾ.ಜಿ ಪರಮೇಶ್ವರ್ ಪುತ್ರ ಶಶಾಂಕ್,ಕಳೆದ ವರ್ಷ ತಾನೆ ಯುವತಿಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡು,ತಮ್ಮ ಹೆಸರನ್ನು ಶನಾ ಪರಮೇಶ್ವರ್ ಅಂತಾ ಬದಲಿಸಿಕೊಂಡಿದ್ದರು. ಸದ್ಯಕ್ಕಂತೂ ತಮ್ಮ ಹೊಸ ಲಿಂಗವನ್ನು,ಹೊಸ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡ್ತಿರೋ ಶನಾ,ಸ್ವರ್ಗಕ್ಕೇ ಕಿಚ್ಚು ಹಚ್ಚುವ ಹಾಗಿ ಲೈಫ್​​ ಕಳೆಯುತ್ತಿರೋದು ಸುಳ್ಳಲ್ಲ.

ಲಿಂಗ ಪರಿವರ್ತನೆಯ ನಂತರ ತನ್ನ ಹೆಸರನ್ನು ಶನಾ ಎಂದು ಬದಲಿಸಿಕೊಂಡಿರುವ ಶಶಾಂಕ್,ಕೆಲ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು,ಇದು ಯಾವುದೇ ರೀತಿ ಫೋಟೋಶಾಪ್ ಮಾಡಿರುವ ಫೋಟೋಗಳಲ್ಲ,ಖಂಡಿತವಾಗಿ ನನ್ನದೇ ಎಂದು ಹೇಳಿದ್ದಾರೆ.

ಪರಮೇಶ್ವರ್ ಕನ್ನಿಕಾ ದಂಪತಿಗಳ ಅವರ ಏಕೈಕ ಪುತ್ರನಾಗಿದ್ದ ಶಶಾಂಕ್ ಹಿಂದೆ ತನ್ನ ಹೆಸರನ್ನು ಶಾನ್ ಆಗಿ ಬದಲಿಸಿಕೊಳ್ಳುತ್ತಿರುವಂತೆ ತಂದೆಗೆ ಫೋನ್ ಮಾಡಿ ಹೇಳಿದ್ದರು.ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಉತ್ಸಾಹಿಯಾಗಿದ್ದ ಶಶಾಂಕ್,ನಂತರ ತಮ್ಮದೇ ಆದ ಕಾರ್ ಶೋರೂಮ್ ಆರಂಭಿಸಿದ್ದರು.

LEAVE A REPLY

Please enter your comment!
Please enter your name here