ಭಾರತದಲ್ಲಿ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ತಮ್ಮ ಹೊಸ ಬೈಕ್‍ಗಳನ್ನು ಪರಿಚಯಿಸುವುದರ ಬಗ್ಗೆ ಸುಳಿವು ನೀಡಿತ್ತು. ಇದೀಗ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಂದಲ್ಲ, ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿ ರಾಯಲ್‍ ಎನ್‍ಫೀಲ್ಟ್ ಗೆ ಟಕ್ಕರ್ ನೀಡಲು ರೀ-ಎಂಟ್ರಿ ಕೊಟ್ಟಿದೆ.

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರೋ ಈ ಬೈಕ್ ಜಾವಾ, ಜಾವ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾಡೆಲ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಕಾತರದಿಂದ ಕಾಯುತ್ತಿದ್ದ ಬೈಕ್ ಪ್ರಿಯರ ಸಂತಸ ಇಮ್ಮಡಿಗೊಂಡಿದೆ.

ಹೊಸ ಬೈಕಿನ ಬೆಲೆಗಳು
ಜಾವಾ, ಜಾವಾ 42 ಮತ್ತು ಪೆರಾಕ್ ಎಂಬ ಮೂರು ಹೊಸ ಬೈಕ್‍ಗಳನ್ನು ಜಾವಾ ಪರಿಚಯಿಸಿಲಿದ್ದು, ಆಕರ್ಷಕ ಬೆಲೆಯನ್ನು ಪಡೆದುಕೊಂಡಿದೆ. ಎಂಟ್ರಿ ಲೆವೆಲ್ ಜಾವಾ 42 ಬೈಕ್ ಮುಂಬೈ ಎಕ್ಸ್ ಶೋರಂ ಪ್ರಕಾರ ರೂ.1.55 ಲಕ್ಷ ಮತ್ತು ಜಾವಾ ಬೈಕ್ ರೂ. 1.65 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಆದರೆ ಮೂರನೆಯ ಬೈಕ್ ಆದ ಬಾಬರ್ ಮಾದರಿಯ ಜಾವಾ ಪೆರಾಕ್ ಬೈಕ್ ಅನ್ನು ಕೇವಲ ಅನಾವರಣಗೊಳಿಸಿದ್ದು, ಶೀಘ್ರವೇ ಈ ಬೈಕ್ ಅನ್ನು ಸಹ ಬಿಡುಗಡೆಗೊಳಿಸುವುದರ ಬಗ್ಗೆ ಹೇಳಿಕೊಂಡಿದೆ.
ಒಟ್ಟು 6 ಬಣ್ಣಗಳಲ್ಲಿ ಜಾವಾ ಬೈಕ್ ಮೋಟರ್‌ಬೈಕ್ ಲಭ್ಯವಿದೆ. ಜಾವಾ ಹಾಗೂ ಜಾವಾ 42 ಬೈಕ್ ಮೋಟರ್‍ ‌ಬೈಕ್ 293 ಸಿಸಿ ಎಂಜಿನ್ ಹೊಂದಿದ್ದರೆ, ಜಾವಾ ಪೆರಾಕ್ 334 ಸಿಸಿ ಎಂಜಿನ್ ಹೊಂದಿದೆ. ಸದ್ಯ ಅನಾವರಣಗೊಂಡಿರುವ ಕಸ್ಟಮೈಸ್‌ಡ್ ಜಾವಾ ಬೊಬರ್(ಜಾವಾ ಪೆರಾಕ್) 2019ರಲ್ಲಿ ಮಾರುಕ್ಟಟೆ ಪ್ರವೇಶಿಸಲಿದೆ.

ನಾ ನಿನ್ನ ಮರೆಯಲಾರೆ ಎಂದೆ ರೀ-ಎಂಟ್ರಿ ಕೊಟ್ಟ ಜಾವ

ಕನ್ನಡ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ನಾ ನಿನ್ನ ಮರೆಯಲಾರೆ ಸಿನಿಮಾದ ದೃಶ್ಯವನ್ನ ಟ್ವಿಟ್ ಮಾಡಿ ತನ್ನ ಮರು ಬಿಡುಗಡೆಯನ್ನ ಅಧಿಕೃತವಾಗಿ ಹೇಳಿದೆ.ನಾ ನಿನ್ನ ಮರೆಯಲಾರೆ ಸಿನಿಮಾವು 1976 ರಲ್ಲಿ ಬಿಡುಗಡೆ ಹೊಂದಿ 25 ವಾರಗಳ ಅಮೋಘ ಪ್ರದರ್ಶನ ಗೊಂಡಿದೆ.

70-80ರ ದಶಕದಲ್ಲಿ ಭಾರತದಲ್ಲಿ ಕಿಂಗ್ ಆಗಿ ಮೆರೆದ ಜಾವಾ 1996ರಲ್ಲಿ ನಿರ್ಮಾಣ ಅಂತ್ಯಗೊಳಿಸಿತು. ಬಳಿಕ 2016ರಲ್ಲಿ ಮಹೀಂದ್ರ ಮೋಟಾರು ಸಂಸ್ಥೆ ಜಾವಾ ಮೋಟಾರ್ ಸೈಕಲ್ ನಿರ್ಮಾಣದ ಹಕ್ಕನ್ನ ಪಡೆಯಿತು. ಇದೀಗ 2 ವರ್ಷಗಳ ಬಳಿಕ ಮಹೀಂದ್ರ & ಮಹೀಂದ್ರ ಕಂಪೆನಿ ಜಾವಾ ಬೈಕ್ ಬಿಡುಗಡೆ ಮಾಡಿದೆ.

ಜಾವ ಬೈಕ್ಗೂ ಮೈಸೂರಿಗೂ ಇದೆ ನಂಟು

ಜಾವ ಮೋಟಾರ್ ಬೈಕ್ ಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ .ಜಾವ ಸಂಸ್ಥೆ ಭಾರತಕ್ಕೆ ಎಂಟ್ರಿ   ಕೊಟ್ಟಿದ್ದು 1950ರಲ್ಲಿ,ಪ್ಯಾರಿಸ್ ನ ಇಬ್ಬರು ರುಸ್ಟಂ ಹಾಗೂ ಫಾರೂಕ್ ಇರಾನಿ ಜಾವ ಬೈಕ್ ಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ.

1961ರಲ್ಲಿ ಭಾರತದಲ್ಲಿ ಜಾವಾ ಮೊತ್ತ ಮೊದಲ ಫ್ಯಾಕ್ಟರಿ ಆರಂಭಿಸಿತು. ವಿಶೇಷ ಅಂದರೆ ಜಾವಾ ಕಂಪೆನಿಯ ಮೊದಲ ಫ್ಯಾಕ್ಟರಿ ಆರಂಭವಾಗಿದ್ದು ಮೈಸೂರನಲ್ಲಿ. ಮೈಸೂರು ಮಹರಾಜ ಜಯಚಾಮರಾಜ ಒಡೆಯರ್ ಜಾವಾ ಫ್ಯಾಕ್ಟರಿಯನ್ನ ಉದ್ಘಾಟನೆಗೊಳಿಸಿದ್ದರು

25 ಏಕರೆ ಪ್ರದೇಶದಲ್ಲಿರು ಈ ಫ್ಯಾಕ್ಟರಿಯಲ್ಲಿ 250 ಟೈಪ್, 353/04 ಬೈಕ್‌ಗಳನ್ನ ತಯಾರಿಸಲಾಯಿತು. 1961ರಿಂದ 1971ರ ಅವಧಿಯಲ್ಲಿ ಜಾವಾ ಮೋಟರ್ ಬೈಕ್ ಭಾರತದಲ್ಲೇ ಹೆಚ್ಚು ಪ್ರಸಿದ್ದಿಯಾಯಿತು.

LEAVE A REPLY

Please enter your comment!
Please enter your name here