ಈಗಿನ ಕಾಲದಲ್ಲಿ ಜನರಿಗೆ ಸ್ವಲ್ಪ ಬಂಡವಾಳ ಹಾಕಿ ಹೆಚ್ಚು ಹಣ ಗಳಿಸುವ ಆಸೆ,ಬೃಹತ್ ಮೊತ್ತವನ್ನು ಹೂಡಿಕೆ ಮಾಡದೇ ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಮಾಡಲು ಹಲವಾರು  ಮಾರ್ಗಗಳಿವೆ. ಅಂತಹ ಐಡಿಯಾಗಳಿಗಾಗಿ ನಮ್ಮಲ್ಲಿ ತುಂಬಾ ಜನ ಎದುರು ನೋಡುತ್ತಿರುತ್ತಾರೆ.ಅಂಥವರಿಗೆ ಒಂದೊಳ್ಳೆ ಐಡಿಯಾ ಇಲ್ಲಿದೆ ನೋಡಿ.. ಅಲೋವೆರಾ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೆ ಇದೆ.ಇದೀಗ ಜಗತ್ತಿನಾದ್ಯಂತ ಆಯುವೇದಿಕ್ ಔಷಧಿಗಳು ಹೆಚ್ಚು ಬೇಡಿಕೆ ಹೊಂದಿವೆ.

ಅಲೋವೆರಾವನ್ನು ಕೂಡ ಔಷಧಿಯಾಗಿ ಬಳಸಲಾಗುತ್ತದೆ. ಅಲೋವೆರಾಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳವರೆಗೆ ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಅಮುಲ್ ಬಿಸಿನೆಸ್ ಪ್ರಾರಂಭಿಸಿ. ಪ್ರತಿ ತಿಂಗಳು ರೂ 8-10 ಲಕ್ಷದವರೆಗೆ ಹಣ ಗಳಿಸಿ.

ಅಲೋವೆರಾ ಇಂದ ಹಣ ಮಾಡುವುದು ಹೇಗೆ:

ಅಲೋವೆರಾದಿಂದ ಹಣ ಗಳಿಕೆ ಹೇಗೆ ಮಾಡಬಹುದು ಎಂಬ ಪ್ರಶ್ನೆ ನಿಮಗಿದ್ದರೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದ್ದು, ಒಂದು ಅಲೋವೆರಾ ಬೆಳೆದು ಅದನ್ನು ಮಾರಾಟ ಮಾಡಿ ಸುಮಾರು 8 ರಿಂದ 10 ಲಕ್ಷದವರೆಗೆ ವಾರ್ಷಿಕ ಗಳಿಕೆ ಮಾಡಬಹುದು.

ಇನ್ನೊಂದು ಅಲೋವೆರಾ ಪ್ರೊಸೆಸಿಂಗ್ ಯುನಿಟ್ ಸ್ಥಾಪಿಸಿ ಜ್ಯೂಸ್ ಮಾಡಿ ಮಾರಾಟ ಮಾಡಿ ಗಳಿಕೆ ಮಾಡಬಹುದು. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು.

ಅಲೋವೆರಾ ಬೆಳೆದು ಮಾರಾಟ ಮಾಡಿ ಹಣ ಗಳಿಸುತ್ತೇನೆ ಎನ್ನುವವರಿಗೆ ಆರಂಭದಲ್ಲಿ ರೂ. 50 ಸಾವಿರ ಖರ್ಚು ಬರಬಹುದು. ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆದು ಮೂರು ವರ್ಷಗಳ ಕಾಲ ಫಲ ಪಡೆಯಬಹುದಾಗಿದೆ.

ಐವತ್ತು ಸಾವಿರ ಖರ್ಚು ಮಾಡಿ ಜಾತಿಯ ಅಲೋವೆರಾವನ್ನು ಎಲ್ಲಿ ಬೇಕಾದ್ರೂ ಬೆಳೆಯಬಹುದಾಗಿದ್ದು, ಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್ ಹೇಳುವಂತೆ ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆ ತೆಗೆಯಲು ರೂ 27,500 ಖರ್ಚಾಗುತ್ತದೆ ಮತ್ತುಗೊಬ್ಬರ, ಕೂಲಿ ಎಲ್ಲ ಸೇರಿ ಇದು ರೂಪಾಯಿ 50 ಸಾವಿರದವರೆಗೆ ಆಗಬಹುದು.

40-45 ಟನ್ ಅಲೋವೆರಾ ಬೆಳೆಯಬಹುದು ಒಂದು ವರ್ಷದಲ್ಲಿ ಒಂದು ಹೆಕ್ಟೇರ್ ಜಾಗದಲ್ಲಿ ಸುಮಾರು 40-45 ಟನ್ ಅಲೋವೆರಾ ಎಲೆಗಳನ್ನು ಬೆಳೆಯಬಹುದು. ಬೇರೆ ಬೇರೆ ಕಡೆ ಅಲೋವೆರಾ ಎಲೆಗೆ ಬೇರೆ ಬೇರೆ ದರವಿದೆ. ಸುಮಾರು ಒಂದು ಟನ್ ಎಲೆಗೆ ರೂ 20000 ರೂಪಾಯಿಯಿದೆ.

10 ಲಕ್ಷ ಗಳಿಕೆ ಒಂದು ಹೆಕ್ಟೇರ್ ಜಾಗದಲ್ಲಿ ಸುಮಾರು 40-45 ಟನ್ ಅಲೋವೆರಾ ಬೆಳೆಯಲು ಸಾದ್ಯವಿರುವುದರಿಂದ ವರ್ಷಕ್ಕೆ ಸುಮಾರು 10 ಲಕ್ಷ ಗಳಿಕೆ ಮಾಡಬಹುದು. ಇನ್ನು 2-3 ವರ್ಷದಲ್ಲಿ ಬೆಳೆ ಹೆಚ್ಚಿರುತ್ತದೆ. ಆದರೆ ಐದನೇ ವರ್ಷದಲ್ಲಿ ಬೆಳೆ ಪ್ರಮಾಣ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here