ಇತ್ತೀಚಿನ ದಿನಗಳಲ್ಲಿ ನಮ್ಮ ದೇಶಾದ್ಯಂತ ಲೈಂಗಿಕ ಕಿರುಕುಳದ ವಿರುದ್ಧ ಹಲವಾರು ಬಾಲಿವುಡ್,ಸ್ಯಾಂಡಲ್ ವುಡ್ ನಟಿಯರು,ಕ್ರೀಡಾ ತಾರೆಗಳು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು “ಮೀಟೂ” ಅಭಿಯಾನದ ಮೂಲಕ ಬಹಿರಂಗಪಡಿಸುತ್ತಿದ್ದಾರೆ.ಆದರೆ ಈ ಮೀ ಟೂ ಅಭಿಯಾನ ಪ್ರಾರಂಭವಾದದ್ದು ಹೇಗೆ?ಇದನ್ನು ಪ್ರಾರಂಭಿಸಿದ್ದು ಯಾರು ಗೊತ್ತೇ?

ಮುಂದೆ ಇದರ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿರಿ…

“ಮೀಟೂ” ಬಗ್ಗೆ ಪ್ರಪ್ರಥಮವಾಗಿ 2006ರಲ್ಲಿ  ಪ್ರಾರಂಭ ಮಾಡಿದ್ದು,ಪ್ರಥಮ ಬಾರಿಗೆ ಕಡಿಮೆ ಆದಾಯ ಪಡೆಯುವ ಸಮುದಾಯದ ಮಹಿಳೆಯರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರಿಗೆ ನೆರವಾಗುವ ಉದ್ದೇಶದೊಡನೆ ಪ್ರಾರಂಭಿಸಿದವರು ತರಾನಾ ಬರ್ಕ್ ಎನ್ನುವ ಮಹಿಳೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಹಾನುಭೂತಿ ವ್ಯಕ್ತಪಡಿಸುವ ಜತೆಗೇ ಅವರು ಏಕಾಂಗಿಯಲ್ಲ ಎನ್ನುವ ಧೈರ್ಯ ತುಂಬುವ ಉದ್ದೇಶ ಇದರ ಹಿಂದಿತ್ತು.

ಮತ್ತೆ ಈ ಅಭಿಯಾನ ಪ್ರಾರಂಭವಾಗಿದ್ದು 2017 ರಲ್ಲಿ ಅಲಿಸಾ ಮಿಲಾನೊ ಹಾರ್ಸ್ ವೈನ್ಸ್ಟೈನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ರೋಸ್ ಮ್ಯಾಕ್ಗೊವಾನ್ರ ಸ್ನೇಹಿತರ ಬೆಂಬಲಕ್ಕಾಗಿ  ಇದನ್ನು ಬಳಸಿದಾಗ.

ಯಾರು ಈ ತರಾನಾ ಬರ್ಕ್?

ಮೂಲತಃ ಆಫ್ರಿಕಾ ದೇಶದವರಾದ ಬರ್ಕ್ ಆಫ್ರಿಕನ್ ಅಮೇರಿಕನ್ ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾದ ಬರ್ಕ್ ಗರ್ಲ್ಸ್ ಫಾರ್ ಜಂಡರ್ ಈಕ್ವಾಲಿಟಿ ಇನ್ ಬ್ರೋಕ್ಲಿನ್ ನ ನಿರ್ದೇಶಕಿಯಾಗಿದ್ದಾರೆ.ಈಗ ನ್ಯೂಯಾರ್ಕ್ ನಲ್ಲಿದ್ದು ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಈ ಮೂಲಕ ಅವರು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಜನಜಾಗೃತಿ ಮೂಡಿಸಲು ನೆರವಾಗುತ್ತಿದ್ದಾರೆ.2017 ರಲ್ಲಿ ಇವರು ಇತರೆ ಕಾರ್ಯಕರ್ತರೊಡನೆ “ಟೈಮ್ಸ್ ವರ್ಷದ ವ್ಯಕ್ತಿ” ಆಗಿ ಗುರುತಿಸಿಕೊಂಡಿದ್ದರು.

#MeToo ಅಭಿಯಾನ ಹುಟ್ಟಿದ ಬಗೆ
ಜಸ್ಟ್ ಬಿ ಇನ್ ಕಾರ್ಪೋರೇಷನ್ ಎನ್ನುವ ಸಂಸ್ಥೆಯಲ್ಲಿ ಬರ್ಕ್ ಉದ್ಯೋಗಿಯಾಗಿದ್ದ ವೇಳೆ 2003 ರಲ್ಲಿ “ಮೈ ಸ್ಪೇಸ್” ನಲ್ಲಿ ಬರ್ಕ್ ಮೊದಲ ಬಾರಿಗೆ “ಮೀಟೂ” ಎನ್ನುವ ಪದಪುಂಜವನ್ನು ಸೃಷ್ಟಿಸಿದ್ದರು.

ಕಪ್ಪು ಬಣ್ಣದ ಮಹಿಳೆಯರ ಕಲ್ಯಾಣ ಯೋಜನೆ ಪ್ರಾರಂಭಿಸಿದ್ದ ಬರ್ಕ್ ಬಳಿ ಬಂದ ಬಾಲಕಿಯೊಬ್ಬಳು ತಾಯಿಯ ಸ್ನೇಹಿತನೊಬ್ಬ ನನ್ನ ಮೇಲೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿದಾಗ ಈ ಚಳವಳಿಯನ್ನು ಹುಟ್ಟು ಹಾಕಿದ್ದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ತಮ್ಮ ಅನುಭವಗಳನ್ನು ಹೊರಜಗತ್ತಿಗೆ ತಿಳಿಸಲು ಲೆಕ್ಕವಿಲ್ಲದಷ್ಟು ಮಹಿಳೆಯರು ಮತ್ತು ಯುವತಿಯರಿಗೆ ಬರ್ಕ್ ಒಂದು ಪದಪುಂಜ ಸೃಷ್ಟಿಸಿ ಚಳವಳಿಯನ್ನು ಹುಟ್ಟುಹಾಕಿದರು.

ಕೇವಲ 500 ಟ್ವಿಟರ್ ಅನುಯಾಯಿಗಳೊಡನೆ ಸೇರಿ ಈ ಬಿರುಗಾಳಿಯನ್ನು ಸೃಷ್ಟಿ ಮಾಡಿದ್ದ ಮೀಟೂ” ಅಭಿಯಾನ ಈ ಮೂಲಕ ಯಾವುದೇ ಮಹಿಳೆ “ನೀವು ಏಕಾಂಗಿಯಲ್ಲ ಇದರ ಅನುಭವ ನನಗೂ ಕೂಡಾ ಆಗಿದೆ.”ಎನ್ನುವುದನ್ನು ಧೈರ್ಯವಾಗಿ ಹೊರಹೊಮ್ಮಿಸಲು ಬರ್ಕ್ ಕಾರಣಕರ್ತರಾದರು.

ಹಾಲಿವುಡ್ ನಟಿ ಆಲಿಸಾ ಮಿಲಾನೊ ಈ ನುಡಿಗಟ್ಟು ಬಳಸಿ ಟ್ವೀಟ್ ಮಾಡಿದಾಗ “ಮೀಟೂ” ಅಭಿಯಾನ ಅಂತರ್ಜಾಲ ಜಗತ್ತಿನಲ್ಲಿ ಸುಂಟರಗಾಳಿ ಎಬ್ಬಿಸಿತು ಈ ಮೂಲಕ ಅದು ಹಲವರ ಗಮನ ಸೆಳೆದಿತ್ತು.

ಈ ಐತಿಹಾಸಿಕ ಚಳುವಳಿ ಸುಮಾರು 12 ವರ್ಷಗಳ ಹಿಂದೆ ಪ್ರಾರಂಭವಾದರೂ,ಇದು ಕೇವಲ ಎರಡು ವರ್ಷಗಳ ಹಿಂದೆ ಪ್ರಸಿದ್ಧವಾಯಿತು.ಈಗ, ಇದು ಬದಲಾವಣೆಯ ಸಮಯವಾಗಿದ್ದು ಲೈಂಗಿಕ ಕಿರುಕುಳದ ವಿರುದ್ಧ ತಮ್ಮ ದುಃಖವನ್ನು ಹಂಚಿಕೊಳ್ಳಲು ಪ್ರಪಂಚದಾದ್ಯಂತ ಮಹಿಳೆಯರು ಬಳಸುತ್ತಿದ್ದಾರೆ.

LEAVE A REPLY

Please enter your comment!
Please enter your name here