ನೇರವಾದ ಕೂದಲು ಬೇಕು ಎಂಬುದು ಎಲ್ಲ ಹೆಣ್ಣು ಮಕ್ಕಳ ಸಾಮಾನ್ಯ ಬಯಕೆ. ಅದಕೋಸ್ಕರ ಪಾರ್ಲರಗೆ ಹೋಗಿ ಸಾಕಷ್ಟು ಹಣವನ್ನು ಕೊಟ್ಟು ನೇರ ಕೂದಲು ಮಾಡಿಸಿಕೊಂಡು ಬರುವುದು ನಾವು ನೋಡುತ್ತೇವೆ. ಆದರೆ ಆ ರೀತಿ ರಾಸಾಯನಿಕ ಬಳಸಿ ಕೂದಲನ್ನು ನೇರಗೊಳಿಸುವುದರ ಪರಿಣಾಮ ತುಂಬಾ ಕೆಟ್ಟದು, ಹೌದು ನಯಗೊಳಿಸಿದ ಮತ್ತು ಸುಂದರವಾಗಿ ಕಾಣುವಂತೆ ಕೂದಲನ್ನು ರಾಸಾಯನಿಕಗಳಿಂದ ಮಾಡುತ್ತಾರೆ. ಇದರಿಂದ ಕೂದಲಿನ ಬೆಳವಣಿಗೆ ಕುಂಟಿತವಾಗುತ್ತಾ ಹೋಗುತ್ತದೆ. ಆದ್ದರಿಂದ ಆದಷ್ಟು ನೈಸರ್ಗಿಕವಾಗಿ ನಿಮ್ಮ ಕೂದಲನ್ನು ನೇರಗೊಳಿಸಿ ಅದಕ್ಕೆ ಇಲ್ಲಿದೆ ಟಿಪ್ಸ.

ನೈಸರ್ಗಿಕ ಮಾರ್ಗಗಳು

ತೆಂಗಿನ ಹಾಲು/ನಿಂಬೆ ರಸ

¼ ಕಪ್ ತೆಂಗಿನಹಾಲು 1 ಟೀ ಸ್ಪೂನ್ ನಿಂಬೆ ರಸ
ತೆಂಗಿನಹಾಲು ಮತ್ತು ನಿಂಬೆರಸ ಚೆನ್ನಾಗಿ ಮಿಶ್ರಣ ಮಾಡಿ ಫ್ರೀಡ್ಜಲ್ಲಿಡಿ. ಬೆಳಗ್ಗೆ ಬೇರುಗಳಿಂದ ತುದಿಯ ತನಕ ನಿಮ್ಮ ಕೂದಲಿಗೆ ಮಿಶ್ರಣವನ್ನು ಹಚ್ಚಿ, ಸುಮಾರು 30 ನಿಮಿಷಗಳ ಕಾಲ ಬಿಟ್ಟು ತಂಪಾದ ನೀರು ಅಥವಾ ಸಲ್ಫೇಟ್ ಮುಕ್ತ ಶಾಂಪೂ ಬಳಸಿ ತೊಳೆಯಿರಿ ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು

ಬಿಸಿ ಎಣ್ಣೆ

1 ಟೀಸ್ಪೋನ್ ಕ್ಯಾಸ್ಟರ್ ಆಯಿಲ್
1 ಟೀಸ್ಪೋನ್ ತೆಂಗಿನ ಎಣ್ಣೆ
ಎರಡು ಎಣ್ಣೆ ಮಿಕ್ಸ ಮಾಡಿಕೊಂಡು ಮಿಶ್ರಣವನ್ನು ಬಿಸಿ ಮಾಡಿ. ತೈಲವನ್ನು ನಿಮ್ಮ ನೆತ್ತಿ ಮತ್ತು ಕೂದಲಿನ ಬುಡಕ್ಕೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ. ಹೆಚ್ಚುವರಿ 30 ನಿಮಿಷಗಳ ಕಾಲ ತೈಲವನ್ನು ಬಿಡಿ. ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಿ.

ಹಾಲಿನ ಸ್ಪ್ರೇ

¼ ಕಪ್ ಹಾಲು ಮತ್ತು ಸ್ಪ್ರೇ ಬಾಟಲ್
ಹಾಲನ್ನು ಸ್ಪ್ರೇ ಬಾಟಲಿಗೆ ಹಾಕಿ. ಅದನ್ನು ನಿಮ್ಮ ಕೂದಲಿಗೆ ನಿಟಾಗಿ ಸ್ಪ್ರೇ ಮಾಡಿಕೊಳ್ಳಿ 30 ನಿಮಿಷಗಳ ಬಳಿಕ ತಣ್ಣಗಿನ ನೀರಿನೊಂದಿಗೆ ತೊಳೆಯಿರಿ. ಇದನ್ನು ವಾರಕ್ಕೆ 1-2 ಬಾರಿ ಮಾಡಿಕೊಳ್ಳಿ.

ಮೊಟ್ಟೆ ಮತ್ತು ಆಲಿವ್ ಆಯಿಲ್

2 ಮೊಟ್ಟೆ
3 ಟೀಸ್ಪೋನ್ ಆಲಿವ್ ಆಯಿಲ್
ಚೆನ್ನಾಗಿ ಎರಡನ್ನು ಬೆರೆಸಿ ಒಟ್ಟಿಗೆ ಸೇರಿಸಿ. ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ಸುಮಾರು ಒಂದು ಗಂಟೆ ಕಾಲ ಬಿಟ್ಟು ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಇದನ್ನು ವಾರಕ್ಕೊಮ್ಮೆ ಮಾಡಿಕೊಳ್ಳಿ. ಈ ರೀತಿ ಮಾಡಿಕೊಳ್ಳುವುದರಿಂದ ನಿಮ್ಮ ಕೂದಲಿಗೆ ಪ್ರೋಟೀನ್ಗಳು ಹೇರಳವಾಗಿ ದೊರೆಯುತ್ತದೆ ಮತ್ತು ಕೂದಲು ಬೆಳೆಯುತ್ತವೆ.

LEAVE A REPLY

Please enter your comment!
Please enter your name here