ಮಹಿಳೆಯರು ಕೆಲಸದ ಒತ್ತಡದಲ್ಲಿ ತಮ್ಮ ದೇಹದಲ್ಲಿ ನಡೆಯುವ ಕ್ರಿಯೆಗಳ ಬಗ್ಗೆ ತಮಗೆ ಅರಿವಿರುವುದಿಲ್ಲ ಎಂದು ಹೇಳಲು ವಿಷಾಧಿಸುತ್ತೇವೆ. ಅಂತಹ ಪ್ರಮುಖ ವಿಷಯದ ಕುರಿತಾದ ಅವರ ಅಜ್ಞಾನವು ಕುಟುಂಬ, ಸ್ನೇಹಿತರು ಅಥವಾ ಅಂತರ್ಜಾಲದ ಸಹಾಯದಿಂದ ತಿಳಿದುಕೊಳ್ಳಲು ಅವರನ್ನು ತಳ್ಳುತ್ತದೆ. ಆದರೆ ಇಲ್ಲಿ ಗಂಭಿರವಾದ ಪರಿಣಾಮಗಳನ್ನು ಉಂಟುಮಾಡುವಂತಹ ಕೆಲವು ಸಾಮಾನ್ಯ ತಪ್ಪುಗ್ರಹಿಕೆಗಳನ್ನು ನಾವು ಬಯಲು ಮಾಡಿದ್ದೇವೆ.

ಗರ್ಭನಿರೋಧಕ ಮಾತ್ರೆಗಳು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಗತ್ಯ ಗರ್ಭಧಾರಣೆಯನ್ನು ದೂರವಿಡಲು. ಇದು ಸುಲಭವಾದ ಮತ್ತು ಮಹಿಳೆಯರಿಗೆ ಅತ್ಯಂತ ಪ್ರಿಯವಾದ ವಿಧಾನವಾಗಿದೆ. ಆದರೆ ನೀವು ತೆಗೆದುಕೊಳ್ಳುತ್ತೀರುವ ಮಾತ್ರೆಗಳು ಎಷ್ಟರ ಮಟ್ಟಿಗೆ ಒಳ್ಳೆಯದು ಎಂದು ನೀವು ತಿಳಿದುಕೊಂಡಿದ್ದೀರಾ? ಮೇಲೆ ಹೇಳಿರುವ ಹಾಗೆ ನೀವು ಯಾವುದೋ ಜಾಹೀರಾತು ನೋಡಿ ಅಥವಾ ಸ್ನೇಹಿತರ ಸಲಹೆ ಮೇರಿಗೆ ತೆಗೆದುಕೊಂಡರೆ ಅಡ್ಡಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ. ಮಾತ್ರೆಗಳು ತೆಗೆದುಕೊಂಡರೆ ವಾಕರಿಕೆ, ತಲೆನೋವು, ಉದ್ವಿಗ್ನತೆ ಮತ್ತು ಮುಟ್ಟಿನ ಚಕ್ರದಲ್ಲಿ ಅನಿಯಮಿತತೆಯಾಗುತ್ತದೆ. ಹೀಗೆ ಆದರೆ ವೈಧ್ಯರನ್ನು ಕಾಣುವುದು ಸೂಕ್ತ

ಬರ್ತ್ ಕಂಟ್ರೋಲ್ ತೆಗೆದುಕೊಂಡರೆ ಗರ್ಭಿಣಿಯಾಗುವುದಿಲ್ಲ

ತಜ್ಞರ ಪ್ರಕಾರ, ಮಹಿಳೆಯರು ಮಾತ್ರೆ ತೆಗೆದುಕೊಳ್ಳುತ್ತಾ ಇದ್ದರೆ ಒಂದು ಡೋಸ್ ಪೂರ್ಣವಾಗಿ ತೆಗೆದುಕೊಂಡ ಬಳಿಕ ಮಾತ್ರೆ ಮುಗಿದಿದ್ದರೆ ಅಥವಾ ತೆಗೆದುಕೊಳ್ಳುವುದು ಮರೆತು ಹೋಗಿದ್ದರೆ ಹೆದರುವ ಅವಶ್ಯಕತೆ ಇಲ್ಲ ಮಾತ್ರೆ ತೆಗೆದುಕೊಂಡ ಪರಿಣಾಮ ಗರ್ಭಧಾರಣೆಯಾಗುವುದಿಲ್ಲ ಎಂಬುದು ಜನಪ್ರಿಯ ಮಾತು. ಆದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟಾಗ ಒಂದು ತಿಂಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಮಹಿಳೆಯರು ಗರ್ಭಿಣಿಯಾಗುತ್ತಾರೆಂದು ಕಂಡುಬಂದಿದೆ.

ಕಳಪೆ ನೈರ್ಮಲ್ಯದಿಂದಾಗಿ ಸೋಂಕು ಸಂಭವಿಸುತ್ತವೆ

ಹೆಣ್ಣು ಜನನಾಂಗವು ಕೆಟ್ಟ ಬ್ಯಾಕ್ಟೀರಿಯಾವನ್ನು ನಾಶಮಾಡುವುದರ ಜತೆಗೆ ಉತ್ತಮವಾದ ಜೀವಿತಾವಧಿಯನ್ನು ಜೀವಂತವಾಗಿಡುವುದರೊಂದಿಗೆ ಸುಸಜ್ಜಿತವಾಗಿದೆ. ಆದಾಗ್ಯೂ ಈ ಕಾರ್ಯವಿಧಾನವು ಕೆಲಸ ಮಾಡಲು ಗರಿಷ್ಟ ಮಟ್ಟದಲ್ಲಿ ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಆ ಸೋಂಕುಗಳನ್ನು ಕೊಲ್ಲಲು 5ಕ್ಕಿಂತ ಕಡಿಮೆ ಪಿಹೆಚ್ ಇರುವ ಸೋಪ ಅನ್ನು ಬಳಸುವುದು ಉತ್ತಮ

ಗರ್ಭಪಾತಗಳು ಅಪರೂಪವಾಗಿವೆ

ಇತ್ತೀಚಿಗೆ ಗರ್ಭಪಾತಗಳು ತುಂಬಾ ಕಡಿಮೆಯಾಗಿವೆ. ಸಂಶೋಧನೆಯ ಪ್ರಕಾರ 15% ಗರ್ಭಧಾರಣೆಯು ಸುರಕ್ಷಿತವಾಗಿವೆ. ಇದರಿಂದ ಗರ್ಭಪಾತ ಕಡಿಮೆಯಾಗಿವೆ. ಆದ್ದರಿಂದ ಆದಷ್ಟು ನೀವು ಗರ್ಭಿಣಿಯರಾಗಿದ್ದರೆ ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

 

LEAVE A REPLY

Please enter your comment!
Please enter your name here