ಬಿಜಾಪುರದ 26ನೆಯ ವಯಸ್ಸಿನ ಯುವತಿಯೊಬ್ಬರು ನ್ಯಾಯಾಧೀಶೆ ಹುದ್ದೆ ಅಲಂಕರಿಸುವ ಮೂಲಕ ಅತೀ ಕಿರಿಯ ವಯಸ್ಸಿನ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರು ಬಾಗಲಕೋಟೆಯಲ್ಲಿ ವಾಸವಾಗಿದ್ದು ಬಿ ಎ,ಎಲ್ ಎಲ್ ಬಿ ಹಾಗೂ ಎಲ್ ಎಲ್ ಎಂ ಎಂಬ ಬಳಿಕ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು ಅವರು ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನ್ಯಾಯಾಧೀಶ ಆಗಿ ನೇಮಕಗೊಂಡಿದ್ದಾರೆ ಇವರ ತಂದೆ ವಸಂತ ಕುಲಕರ್ಣಿ ಅವರು ನಗರದ ಸಬಲಾ ಸಂಸ್ಥೆಯ ನಿರ್ದೇಶಕ ಹಾಗೂ ಬಾಗಲಕೋಟೆ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರು ಆಗಿರುತ್ತಾರೆ.

ಇತ್ತೀಚೆಗೆ ಕರ್ನಾಟಕದ ಹೈಕೋರ್ಟ್ ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ 33 ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು ಚೈತ್ರ ನ್ಯಾಯಾಧೀಶೆ ಹುದ್ದೆಗೆ ಅರ್ಜಿ ಹಾಕಿದ್ದು ಏಪ್ರಿಲ್ ನಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು ಬಳಿಕ ಜುಲೈನಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ಸೆಪ್ಟೆಂಬರ್ 19 ರಂದು ನಡೆದ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದರು ಈ ಮೂಲಕ ಇವರು ಈಗ ದಿವಾಣಿ ನ್ಯಾಯಾಧೀಶೆ ಆಗಿ ನೇಮಕಗೊಂಡಿದ್ದಾರೆ.

ನ್ಯಾಯಾಧೀಶೆ ಹುದ್ದೆಗೆ ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು ಈ ಪಟ್ಟಿಯಲ್ಲಿ ಕೇವಲ 946 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು ಇದರಲ್ಲಿ 86 ಅಭ್ಯರ್ಥಿಗಳು ಪರೀಕ್ಷೆ ಪಾಸಾಗಿ ಸಂದರ್ಶನಕ್ಕೆ ಹಾಜರಾಗಿದ್ದರು ಇದರಲ್ಲಿ 33 ಅಭ್ಯರ್ಥಿಗಳಲ್ಲಿ ಚೈತ್ರಾ ಕೂಡ ಸ್ಥಾನ ಪಡೆದಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಈಗ ಚೈತ್ರ ಸೇರಿ ಆಯ್ಕೆಯಾದ ಅಭ್ಯರ್ಥಿಗಳು ಸ್ಥಳ ಆದೇಶಕ್ಕಾಗಿ ಕಾಯುತ್ತಿದ್ದವು ಯಾವ ಸಂದರ್ಭದಲ್ಲಿ ಬೇಕಾದರೂ ಅವರನ್ನು ನೇಮಿಸಬಹುದಾಗಿದೆ.

LEAVE A REPLY

Please enter your comment!
Please enter your name here